ಹುನಗುಂದ ಬಳಿ ಭೀಕರ ಅಪಘಾತ, ನಾಲ್ವರು ದುರ್ಮರಣ
ಬಾಗಲಕೋಟೆ, ಡಿಸೆಂಬರ್ 30 : ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಬಳಿ ಸಂಭವಿಸಿದೆ
ಕಾರು ಚಾಲಕ ಪಂಕಜ್ ಸಿಂಘೆ (49), ಆತನ ಪತ್ನಿ ಉಮಾ ಸಿಂಘೆ (47), ಪುಷ್ಪಾಬಾಯಿ ದರಕ (72) ಹಾಗೂ ಶ್ರೀಕಾಂತ ಬಾಯಿ ದರಕ (72) ಮೃತಪಟ್ಟ ದುರ್ದವೈಗಳು. ಇನ್ನು, ಶ್ರೀಧರ ದರಕ, ದೀಪಕ್ ಬಾಯತೆ ಹಾಗೂ ಸುನಿಲ್ ಸೋಮಾನಿ ಎನ್ನುವರು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ.

ಇವರೆಲ್ಲರೂ ಬಾಗಲಕೋಟೆ ನಿವಾಸಿಗಳು ಎಂದು ತಿಳಿದುಬಂದಿದ್ದು, ಬಳ್ಳಾರಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದ ವೇಳೆ ಹುನಗುಂದ ಪಟ್ಟಣದ ಸಾಯಿಬಾಬ ದೇವಸ್ಥಾನದ ಬಳಿಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.












Click it and Unblock the Notifications