ಮಂತ್ರಿ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ
ಚಂಡೀಗಡ್, ಜುಲೈ 14: ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿದ್ದ ನವಜೋತ್ ಸಿಂಗ್ ಸಿದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರಕಟಿಸಿರುವ ನವಜೋತ್ ಸಿಂಗ್ ಸಿಧು, ನನ್ನ ರಾಜೀನಾಮೆಯನ್ನು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರಿಗೆ ಕಳುಹಿಸಿದ್ದಾಗಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರಿಗೂ ರಾಜೀನಾಮೆ ಬಗ್ಗೆ ಪತ್ರ ಬರೆದಿರುವ ಸವಜೋತ್ ಸಿಂಗ್ ಸಿಧು ಅವರು ರಾಜೀನಾಮೆ ಪತ್ರವನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದು, ಪತ್ರದಲ್ಲಿ ಜೂನ್ ತಿಂಗಳ 10ನೇ ತಾರೀಖಿನ ದಿನಾಂಕ ಇದೆ.

ನವಜೋತ್ ಸಿಂಗ್ ಸಿಧು ಅವರ ಪಾಕಿಸ್ತಾನದ ಪರವಾದ ಹೇಳಿಕೆಗಳು ಭಾರಿ ವಿವಾದ ಎಬ್ಬಿಸಿದ್ದವು, ಪಂಜಾಬ್ ಕಾಂಗ್ರೆಸ್ ಸಹ ಇದರಿಂದ ಇಕ್ಕಟ್ಟಿಗೆ ಸಿಲುಕಿತ್ತು, ಆಗಲೇ ಸಿಧು ಅವರ ರಾಜೀನಾಮೆಗೆ ಒತ್ತಾಯಿಸಲಾಗಿತ್ತು. ಆದರೆ ಸಿಧು ಅವರು ಈಗ ರಾಜೀನಾಮೆ ಸಲ್ಲಿಸಿದ್ದಾರೆ.












Click it and Unblock the Notifications