ಗೊತ್ತಾ? ಆಂಧ್ರ ಸಿಎಂ ಆಸ್ತಿಗಿಂತ ಮೂರು ವರ್ಷದ ಮೊಮ್ಮಗನ ಆಸ್ತಿಯೇ ಜಾಸ್ತಿ!
Recommended Video

ಹೈದರಾಬಾದ್, ನವೆಂಬರ್ 22: ಆಂಧ್ರ ಪ್ರದೇಶದ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರ ಆಸ್ತಿಗಿಂತ ಅವರ ಮೂರು ವರ್ಷದ ಮೊಮ್ಮಗನ ಆಸ್ತಿ 6 ಪಟ್ಟು ಜಾಸ್ತಿಯಿದೆ!
ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಬುಧವಾರ ತಮ್ಮ ಕುಟುಂಬದ ಆಸ್ತಿ ವಿವರನ್ನು ಬಿಡುಗಡೆ ಮಾಡಿದರು. ಅದರ ಪ್ರಕಾರ ನಾಯ್ಡು ಕುಟುಂಬದ ಒಟ್ಟು ಆಸ್ತಿ 81.83 ಕೋಟಿ ರೂ.
ಕುಟುಂಬದ ಆಸ್ತಿ ಕಳೆದ ಒಂದು ವರ್ಷಗಳಲ್ಲಿ 12.5 ಕೋಟಿ ರೂ.ನಷ್ಟು ಹೆಚ್ಚಾಗಿದ್ದು, 69.28 ಕೋಟಿ ರೂ.ನಿಂದ 81.83 ಕೋಟಿ ರೂ. ತಲುಪಿದೆ. ಆದರೆ ವೈಯಕ್ತಿಕವಾಗಿ ಚಂದ್ರಬಾಬು ನಾಯ್ಡು ಅವರು ಕೇವಲ 3 ಕೋಟಿ ರೂ.ಆಸ್ತಿಯನ್ನಷ್ಟೇ ಹೊಂದಿದ್ದಾರೆ ಎಂದು ಈ ವಿವರ ತಿಳಿಸಿದೆ. ಕಳೆದ ವರ್ಷ 2.53 ಕೋಟಿ ರೂ. ನಷ್ಟಿದ್ದ ನಾಯ್ಡು ಅವರ ಆಸ್ತಿ ಮೌಲ್ಯ ಈ ವರ್ಷ 3 ಕೋಟಿ ರೂ.ಗೆ ತಲುಪಿದೆ.

ಮೊಮ್ಮಗನ ಆಸ್ತಿಯೇ ಜಾಸ್ತಿ!
ಚಂದ್ರಬಾಬು ನಾಯ್ಡು ಅವರ ಮೂರು ವರ್ಷ ವಯಸ್ಸಿನ ಮೊಮ್ಮಗ ದೇವಾಂಶ್ ನ ಒಟ್ಟು ಆಸ್ತಿ 18.71 ಕೋಟಿ ರೂ! ಕಳೆದ ವರ್ಷ 11.54 ಕೋಟಿ ರೂ. ಇದ್ದ ಆಸ್ತಿ ಈ ವರ್ಷ 18.71 ಕೋಟಿ ರೂ.ಗೆ ತಲುಪಿದೆ. ಚಂದ್ರಬಾಬು ನಾಯ್ಡು ಅವರ ವೈಯಕ್ತಿಕ ಆಸ್ತಿಗೆ ಹೋಲಿಸಿದರೆ ಅವರ ಮೊಮ್ಮಗನ ಆಸ್ತಿ ಆರುಪಟ್ಟು ಹೆಚ್ಚಿರುವುದು ವಿಶೇಷ!

ನಾರಾ ಲೋಕೇಶ್ ಆಸ್ತಿ ಎಷ್ಟು?
ಚಂದ್ರಬಾಬು ನಾಯ್ಡು ಅವರ ಮಗ, ಆಂಧ್ರ ಪ್ರದೇಶ ಸರ್ಕಾರದ ಮಾಹಿತಿ ಸಚಿವ ನಾರಾ ಲೋಕೇಶ್ ಅವರ ಆಸ್ತಿ ಕಳೆದ ಒಂದು ವರ್ಷದಲ್ಲಿ 15.21 ಕೋಟಿ ರೂ.ನಿಂದ 21.40 ಕೋಟಿ ರೂ. ತಲುಪಿದೆ.

ನಾಯ್ಡು ಪತ್ನಿ ನಾರಾ ಭುವನೇಶ್ವರಿ ಆಸ್ತಿ ಎಷ್ಟು?
ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಅವರ ಆಸ್ತಿ ಮೌಲ್ಯ 25 ಕೋಟಿ ರೂ.ನಿಂದ 31 ಕೋಟಿ ರೂ. ತಲುಪಿದೆ. ನಾರಾ ಲೋಕೇಶ್ ಅವರ ಪತ್ನಿ ಬ್ರಹ್ಮಿಣಿ ಅವರ ಆಸ್ತಿ ಮೌಲ್ಯ ಮಾತ್ರ 15.01 ಕೋಟಿ ರೂ.ನಿಂದ 7.72 ಕೋಟಿ ರೂ.ಗೆ ಕುಸಿದಿದೆ.

ಭಾರತದ ಶ್ರೀಮಂತ ಮುಖ್ಯಮಂತ್ರಿ ನಾಯ್ಡು
ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ನಾಯ್ಡು,ಭಾರತದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ನಾಯ್ಡು ಅಗ್ರಸ್ಥಾನ ಕಾಯ್ದುಕೊಂಡಿದ್ದರು.












Click it and Unblock the Notifications