ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ಮಧ್ಯೆ ಕೆಲಸ: ಆಕ್ರೋಶಗೊಂಡ ಕಾರ್ಮಿಕರಿಂದ ಕಲ್ಲು ತೂರಾಟ

|
Google Oneindia Kannada News

ಅಹಮದಬಾದ್, ಏಪ್ರಿಲ್ 28: ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದು, ಯಾವುದೇ ಉದ್ಯಮ, ಕಟ್ಟಡ ಕಾಮಗಾರಿ ಕೆಲಸಗಳು ನಡೆಯುತ್ತಿಲ್ಲ. ಆದರೆ, ಗುಜರಾತ್‌ನಲ್ಲಿ ಕಟ್ಟಡ ಕಾರ್ಮಿಕರಿಂದ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Recommended Video

ಪ್ರಚಾರಕ್ಕಾಗಿ 2000 ಜನರಿಗೆ ಊಟ ಹಾಕಿಸುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ ರೇಣುಕಾಚಾರ್ಯ - Shanta Gowda

ಗುಜರಾತ್‌ನ ಸೂರತ್‌ನಲ್ಲಿರುವ ಡೈಮಂಡ್ ಬೌರ್ಸ್ ಬಿಲ್ಡರ್ಸ್ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದೆ. ಹೀಗಾಗಿ, ಅಲ್ಲಿರುವ ನೂರಾರು ಕಟ್ಟಡ ಕಾರ್ಮಿಕರು ಸಂಸ್ಥೆ ವಿರುದ್ಧ ಭುಗಿಲೆದಿದ್ದು, ಪ್ರತಿಭಟನೆ ಮಾಡಿದ್ದಾರೆ.

ಲಾಕ್‌ಡೌನ್‌ ನಡುವೆ ಕೆಲಸ ಮಾಡಿಸುತ್ತಿದ್ದಾರೆ, ಮತ್ತೊಂದೆಡೆ ಊರುಗಳಿಗೆ ತೆರಳಲು ಅವಕಾಶ ಕೊಡ್ತಿಲ್ಲ ಎಂದು ಸಿಟ್ಟಿಗೆದ್ದ ಕಾರ್ಮಿಕರು ಕಚೇರಿ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಈ ವಿಷಯ ತಿಳಿದ ಸೂರತ್‌ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಮಹಾರಾಷ್ಟ್ರ ಬಿಟ್ಟರೆ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಜ್ಯ ಗುಜರಾತ್. ರಾಜ್ಯದಲ್ಲಿ 3500ಕ್ಕೂ ಅಧಿಕ ಕೊವಿಡ್ ರೋಗಿಗಳು ದಾಖಲಾಗಿದ್ದಾರೆ. ಅಹಮದಬಾದ್‌ ಒಂದೆ ಜಿಲ್ಲೆಯಲ್ಲಿ 2300 ಜನರಿಗೆ ಕೊರೊನಾ ಸೋಂಕು ತಗುಲಿದೆ.

Labourers Pelted Stones At Diamond Bourse Office

ರೆಡ್‌ಝೋನ್‌ನಲ್ಲಿರುವ ರಾಜ್ಯದಲ್ಲಿ ಈ ರೀತಿ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ಸದ್ಯಕ್ಕೆ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವಂತಿಲ್ಲ. ಇದ್ದಲ್ಲಿಯೇ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆದೇಶಿಸಿದೆ.

English summary
Gujarat: Labourers protested and pelted stones at the office of Diamond Bourse in Surat, alleging that they were made to work amid Coronavirus Lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X