Get Updates
Get notified of breaking news, exclusive insights, and must-see stories!

Breaking: 2016ರ ಪ್ರಕರಣದಲ್ಲಿ ಗುಜರಾತ್ ಶಾಸಕ ಜಿಗ್ನೇಶ್‌ಗೆ 6 ತಿಂಗಳ ಜೈಲು

ಅಹಮದಾಬಾದ್‌, ಸೆ.16: ದಲಿತ ನಾಯಕ ಮತ್ತು ಗುಜರಾತ್ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಅವರ ಹದಿನೆಂಟು ಸಹಚರರಿಗೆ ಅಹಮದಾಬಾದ್‌ನ ಮೆಟ್ರೋಪಾಲಿಟನ್ ನ್ಯಾಯಾಲಯವು ಶುಕ್ರವಾರ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಗುಜರಾತ್ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಕಟ್ಟಡವೊಂದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರಿಡಲು ಪ್ರತಿಭಟನೆ ನಡೆಸಿದ್ದಕ್ಕಾಗಿ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅಹಮದಾಬಾದ್‌ನ ಮೆಟ್ರೋಪಾಲಿಟನ್ ನ್ಯಾಯಾಲಯವು ಶುಕ್ರವಾರ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪಿ ಎನ್ ಗೋಸ್ವಾಮಿ ಅವರು ಜಿಗ್ನೇಶ್ ಮೇವಾನಿ ಮತ್ತು ಇತರರನ್ನು ಗಲಭೆ ಮತ್ತು ಇತರ ಕಾನೂನುಬಾಹಿರ ಸಭೆ ಸೇರಿದಂತೆ ಹಲವು ಆರೋಪಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದರು. ನ್ಯಾಯಾಲಯ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ತಲಾ 700 ರೂಪಾಯಿ ದಂಡ ವಿಧಿಸಿದೆ. ಶಿಕ್ಷೆಗೊಳಗಾದವರಲ್ಲಿ ರಾಕೇಶ್ ಮಹೇರಿಯಾ, ಸುಬೋಧ್ ಪರ್ಮಾರ್ ಮತ್ತು ದೀಕ್ಷಿತ್ ಪರ್ಮಾರ್ ಸೇರಿದ್ದಾರೆ.

ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ, ಹಾರ ಹಾಕುತ್ತಾರೆ!

ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ, ಹಾರ ಹಾಕುತ್ತಾರೆ!

ಜಿಗ್ನಿಶ್ ಮೇವಾನಿ ಗುಜರಾತ್‌ನ ವಡ್ಗಾಮ್‌ನ ಸ್ವತಂತ್ರ ಶಾಸಕರಾಗಿದ್ದಾರೆ. ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ. ತೀರ್ಪಿನ ನಂತರ ಪ್ರತಿಕ್ರಿಯಿಸಿದ ಮೇವಾನಿ, "ಗುಜರಾತ್ ಸರ್ಕಾರ ಎಲ್ಲಾ ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ, ಹಾರ ಹಾಕಿ, ಅವರ ನಡವಳಿಕೆ ತುಂಬಾ ಚೆನ್ನಾಗಿದೆ ಎಂದು ಹೇಳಿದರು. ಗುಜರಾತ್ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟೀಲ್ ಅವರ ವಿರುದ್ಧ ಸುಮಾರು 108 ಪ್ರಕರಣಗಳಿವೆ ಆದರೆ ಯಾವುದೇ ಪ್ರಕರಣಗಳಲ್ಲಿ ಅವರನ್ನು ಬಂಧಿಸಿಲ್ಲ ಎಂದರು.

"ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿಡಲು ಒತ್ತಾಯಿಸಿ ರ್‍ಯಾಲಿ ನಡೆಸಿದ ಚಳವಳಿಗಾರರು ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಎರಡನೇ ಪ್ರಕರಣ ಇದಾಗಿದೆ, ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ" ಎಂದರು.

2016 ರಲ್ಲಿ ಜಿಗ್ನೇಶ್ ಸೇರಿ 20 ಜನರ ವಿರುದ್ಧ ಪ್ರಕರಣ ದಾಖಲು

2016 ರಲ್ಲಿ ಜಿಗ್ನೇಶ್ ಸೇರಿ 20 ಜನರ ವಿರುದ್ಧ ಪ್ರಕರಣ ದಾಖಲು

ಜಿಗ್ನೇಶ್ ಮೇವಾನಿ ಮುಖ್ಯಸ್ಥರಾಗಿರುವ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ಗೆ ಸಂಬಂಧಿಸಿದಂತೆ ಮೇವಾನಿ ಮತ್ತು ಇತರ 19 ಜನರ ವಿರುದ್ಧ ಅಹಮದಾಬಾದ್‌ನ ಗುಜರಾತ್ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ 2016 ರಲ್ಲಿ ಪ್ರಕರಣ ದಾಖಲಾಗಿತ್ತು. ಮೇವಾನಿ ಮತ್ತು ಇತರರು ಗುಜರಾತ್ ವಿಶ್ವವಿದ್ಯಾನಿಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ವಿಭಾಗದ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಅಂಬೇಡ್ಕರ್ ಹೆಸರಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಮೇವಾನಿ ನೇತೃತ್ವದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದು, ಪೊಲೀಸರು ತೆರವುಗೊಳಿಸಲು ಮುಂದಾದಾಗ ಬಟ್ಟೆ ಬಿಚ್ಚಿ ಪ್ರತಿಭಟನೆ ಆರಂಭಿಸಿದರು. ಪೊಲೀಸರು ಪ್ರತಿಭಟನಕಾರರ ಮೇಲೆ ಗಲಭೆ ಮತ್ತು ಕಾನೂನುಬಾಹಿರ ಸಭೆ ಸೇರಿದಂತೆ ಇತರ ಆರೋಪಗಳನ್ನು ದಾಖಲಿಸಿದ್ದಾರೆ.

ಅನುಮತಿಯಿಲ್ಲದೆ ರ್‍ಯಾಲಿ, ಮೂರು ತಿಂಗಳ ಜೈಲು ಶಿಕ್ಷೆ

ಅನುಮತಿಯಿಲ್ಲದೆ ರ್‍ಯಾಲಿ, ಮೂರು ತಿಂಗಳ ಜೈಲು ಶಿಕ್ಷೆ

ಇತ್ತೀಚೆಗೆ ಮೇನಲ್ಲಿ, ಮೆಹ್ಸಾನಾ ಜಿಲ್ಲೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2017 ರ ಅನುಮತಿಯಿಲ್ಲದೆ ರ್‍ಯಾಲಿ ನಡೆಸಿದ ಪ್ರಕರಣದಲ್ಲಿ ಜಿಗ್ನೇಶ್ ಮೇವಾನಿ ಮತ್ತು ಇತರ ಒಂಬತ್ತು ಮಂದಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತು.

ಜುಲೈ 2017 ರಲ್ಲಿ ಪೊಲೀಸ್ ಅನುಮತಿಯಿಲ್ಲದೆ ಮೆಹ್ಸಾನಾದಿಂದ ಬನಸ್ಕಾಂತ ಜಿಲ್ಲೆಯ ಧನೇರಾಗೆ 'ಆಜಾದಿ ಮೆರವಣಿಗೆ' ತೆರಳದಿಕ್ಕಾಗಿ ನ್ಯಾಯಾಲಯ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಮೆವಾನಿ ಜೊತೆಗೆ, ಎನ್‌ಸಿಪಿ ನಾಯಕಿ ಮತ್ತು ಪಾಟಿದಾರ್ ಆಂದೋಲನದ ಮಾಜಿ ಸದಸ್ಯೆ ರೇಷ್ಮಾ ಪಟಾಲ್ ಕೂಡ ಇದ್ದಾರೆ. ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143 ರ ಅಡಿಯಲ್ಲಿ ಅಪರಾಧಿ ಎನ್ನಲಾಗಿದೆ. ಶಿಕ್ಷೆಯ ಜೊತೆಗೆ ಎಲ್ಲಾ 10 ಅಪರಾಧಿಗಳಿಗೆ ತಲಾ 1,000 ದಂಡವನ್ನೂ ನ್ಯಾಯಾಲಯ ವಿಧಿಸಿದೆ. ಅವರಿಗೆ ಜಾಮೀನು ನೀಡುವಾಗ, ನ್ಯಾಯಾಲಯವು ತನ್ನ ಅನುಮತಿಯಿಲ್ಲದೆ ಗುಜರಾತ್‌ನ ಹೊರಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.

ಅಹಮದಾಬಾದ್‌ನಿಂದ ಉನಾಗೆ ರ್‍ಯಾಲಿ ನಡೆಸಿದ್ದ ಜಿಗ್ನೇಶ್

ಅಹಮದಾಬಾದ್‌ನಿಂದ ಉನಾಗೆ ರ್‍ಯಾಲಿ ನಡೆಸಿದ್ದ ಜಿಗ್ನೇಶ್

ಎಪ್ರಿಲ್‌ನಲ್ಲಿ, ಸತ್ತ ಹಸುವಿನ ಚರ್ಮ ಸುಲಿದಕ್ಕಾಗಿ ನಾಲ್ವರು ದಲಿತ ಯುವಕರನ್ನು ಥಳಿಸಿ ಮೆರವಣಿಗೆ ಮಾಡಿದ ದೌರ್ಜನ್ಯದ ವಿರುದ್ಧ ಅಹಮದಾಬಾದ್‌ನಿಂದ ಉನಾಗೆ ಮೆರವಣಿಗೆ ನಡೆಸಿದ್ದ ಜಿಗ್ನೇಶ್ ಮೇವಾನಿ ರಾಷ್ಟ್ರಮಟ್ಟದಲ್ಲಿ ಮತ್ತೆ ಗುರುತಿಸಿಕೊಂಡಿದ್ದರು. ಆಗ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದರು.

ಜಿಗ್ನಶ್ ಮೇವಾನಿ ವಿರುದ್ಧ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), ಸೆಕ್ಷನ್ 153 (ಎ) (ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 (ಎ) (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಹಾಳು ಮಾಡುವುದು ಅಥವಾ ಅಪವಿತ್ರಗೊಳಿಸುವುದು), 504, (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಮತ್ತು IT ಕಾಯಿದೆಗಳ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+