ಟ್ರಂಪ್ ಭೇಟಿ: ಮೂರು ಗಂಟೆ ಭದ್ರತೆಗೆ 80 ಕೋಟಿ ಖರ್ಚು
ಅಹ್ಮದಾಬಾದ್, ಫೆಬ್ರವರಿ 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಭೇಟಿ ಆನೆ ಸಾಕಿದ ಅನುಭವವನ್ನು ಸರ್ಕಾರಕ್ಕೆ ನೀಡುತ್ತಿದೆ.
Recommended Video
ಡೊನಾಲ್ಡ್ ಟ್ರಂಪ್ ಅವರ ಭಾರತದ ಭೇಟಿ ಭಾರಿ ದೊಡ್ಡ ನಷ್ಟವನ್ನೇ ಬೊಕ್ಕಸಕ್ಕೆ ತರುತ್ತಿದೆ. ಗುಜರಾತ್ ಅಂತೂ ಟ್ರಂಪ್ ತನ್ನ ರಾಜ್ಯದಲ್ಲಿ ಕಳೆಯುವ ಮೂರು ಗಂಟೆಗೆ 80 ಕೋಟಿ ಹಣವನ್ನು ಭದ್ರತೆಗೇ ವ್ಯಯಿಸುತ್ತಿದೆ.
ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ರಂದು ಭಾರತಕ್ಕೆ ಬರಲಿದ್ದಾರೆ. ಅವರು ಗುಜರಾತ್‌ನ ಅಹ್ಮದಾಬಾದ್ ಗೆ ಆಗಮಿಸಿ ಅಲ್ಲಿ ಮೋದಿ ಅವರೊಂದಿಗೆ ರೋಡ್ ಶೋ ನಡೆಸಲಿದ್ದಾರೆ. ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ, ನಂತರ ಅಲ್ಲಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣದಲ್ಲಿ ಭಾಷಣ ಮಾಡಲಿದ್ದಾರೆ. ನಂತರ ಅಹ್ಮದಾಬಾದ್‌ನಿಂದ ಆಗ್ರಾಕ್ಕೆ ತೆರಳಲಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಕೆಲವೇ ಗಂಟೆಗಳು ಮಾತ್ರವೇ ಗುಜರಾತ್‌ನಲ್ಲಿರುತ್ತಾರೆ ಆದರೆ ಗುಜರಾತ್ ಸರ್ಕಾರ ಕೋಟ್ಯಂತರ ಹಣವನ್ನು ಖರ್ಚು ಮಾಡಬೇಕಾಗಿ ಬಂದಿದೆ. ಕೇವಲ ಭದ್ರತೆ ಒಂದಕ್ಕೆ ಸುಮಾರು 80 ಕೋಟಿಗೂ ಹೆಚ್ಚು ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ.
ಕೆಲವು ದಿನಗಳ ಹಿಂದಷ್ಟೆ ಅಹ್ಮದಾಬಾದ್‌ನಲ್ಲಿ ಮೋದಿ, ಟ್ರಂಪ್ ಸಂಚರಿಸುವ ರಸ್ತೆಯಲ್ಲಿರುವ ಸ್ಲಂ ಗೆ ಅಡ್ಡಲಾಗಿ ಗೋಡೆಗಳನ್ನು ಕಟ್ಟಿ ಗುಜರಾತ್ ಸರ್ಕಾರ ಸುದ್ದಿಯಾಗಿತ್ತು, ನಂತರ ಅಲ್ಲಿನ 40 ನಿವಾಸಿಗಳನ್ನು ಸಹ ಹೊರಗೆ ಹಾಕಲಾಗಿತ್ತು. ಈಗ ಟ್ರಂಪ್ ಗಾಗಿ ಖರ್ಚು ಮಾಡಲಾಗುತ್ತಿರುವ ಹಣವೂ ವಿವಾದ ಎಬ್ಬಿಸಿದೆ.












Click it and Unblock the Notifications