• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

3 ಶಾಸಕರ ರಾಜೀನಾಮೆ ಬೆನ್ನಲ್ಲೆ 'ಕೈ' ಎಂಎಲ್‌ಎಗಳು ರೆಸಾರ್ಟ್‌ಗೆ?

|
Google Oneindia Kannada News

ಅಹಮದಬಾದ್, ಜೂನ್ 6: ರಾಜ್ಯಸಭೆ ಚುನಾವಣೆಗೂ ಮುನ್ನ ಗುಜರಾತ್‌ ಕಾಂಗ್ರೆಸ್‌ಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಬುಧವಾರ ಇಬ್ಬರು ಹಾಗೂ ಶುಕ್ರವಾರ ಒಬ್ಬ ಕೈ ಶಾಸಕರು ರಾಜೀನಾಮೆ ನೀಡಿದ್ದು ಪಕ್ಷಕ್ಕೆ ಆತಂಕ ಹೆಚ್ಚಿಸಿದೆ.

   ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Oneindia Kannada

   ರಾಜ್ಯಸಭೆ ಚುನಾವಣೆ ತಯಾರಿಯಲ್ಲಿದ್ದು ಗುಜರಾತ್ ಕಾಂಗ್ರೆಸ್ ಈಗ ಕೈ ಶಾಸಕ ರಾಜೀನಾಮೆ ಪರ್ವ ತಡೆಯಲು ರೆಸಾರ್ಟ್ ಮೊರೆ ಹೋಗಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

   ಗುಜರಾತ್ ಕಾಂಗ್ರೆಸ್‌ಗೆ ಆಘಾತ; ಮತ್ತೊಬ್ಬ ಶಾಸಕನ ರಾಜೀನಾಮೆಗುಜರಾತ್ ಕಾಂಗ್ರೆಸ್‌ಗೆ ಆಘಾತ; ಮತ್ತೊಬ್ಬ ಶಾಸಕನ ರಾಜೀನಾಮೆ

   ಕಾಂಗ್ರೆಸ್ ಪಕ್ಷದ 65 ಜನ ಶಾಸಕರೊಂದಿಗೆ ರೆಸಾರ್ಟ್‌ಗೆ ಶಿಫ್ಟ್ ಆಗಲು ಪಕ್ಷ ತೀರ್ಮಾನಿಸಿದೆ. ಕೊರೊನಾ ವೈರಸ್ ಭೀತಿಯಿರುವ ಹಿನ್ನೆಲೆ ಮೂರು ತಂಡಗಳಾಗಿ ವಿಂಗಡಣೆಗೊಂಡು 20, 20, 25 ಸದಸ್ಯರೆಂಬಂತೆ ಮೂರು ಪ್ರತ್ಯೇಕ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲು ತಯಾರಿ ನಡೆಯುತ್ತಿದೆ ಎನ್ನಲಾಗಿದೆ.

   ಇದರಲ್ಲಿ ಒಂದು ತಂಡ ಗುಜರಾತ್-ರಾಜಸ್ಥಾನ ಗಡಿಯಲ್ಲಿರುವ ಬನಸ್ಕಂತ ಜಿಲ್ಲೆಯ ಅಂಬಾಜಿ ಬಳಿಯ ವಿಂಡ್ ವಿಂಡ್ಸ್ ರೆಸಾರ್ಟ್‌ಗೆ ಸ್ಥಳಾಂತರವಾಗಲು ಮುಂದಾಗಿದೆ ಎಂಬ ಮಾಹಿತಿ ಇದೆ.

   ಸೌರಾಷ್ಟ್ರದ ಕಾಂಗ್ರೆಸ್ ಶಾಸಕರನ್ನು ರಾಜ್‌ಕೋಟ್‌ ಬಳಿಯ ಮಾಜಿ ಶಾಸಕ ಇಂದ್ರನಿಲ್ ರಾಜ್ಯಗುರು ಅವರ ನೀಲ್ಸ್ ಸಿಟಿ ರೆಸಾರ್ಟ್ ನಲ್ಲಿ ಇರಿಸಲು ಪ್ಲಾನ್ ಆಗಿದೆ. ಮಧ್ಯ ಮತ್ತು ದಕ್ಷಿಣ ಗುಜರಾತ್‌ನ ಶಾಸಕರನ್ನು ವಡೋದರಾ ಬಳಿಯ ಮೇಷ ರಾಶಿ ರಿವರ್ಸೈಡ್ ಫಾರ್ಮ್ ಹೌಸ್‌ಗೆ ಸಾಗಿಸಲು ನಿರ್ಧರಿಸಲಾಗಿದೆ.

   ಕಾಂಗ್ರೆಸ್ ಶಾಸಕ ರಾಜೀನಾಮೆ ಹಿಂದೆ ಬಿಜೆಪಿಯ ಕೈವಾಡ ಇದೆ. ಜೀವನದಲ್ಲಿ 50 ಲಕ್ಷ ರೂಪಾಯಿ ನೋಡದ ಶಾಸಕರಿಗೆ ಬಿಜೆಪಿ 20 ಕೋಟಿ ಆಫರ್ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಅರ್ಜುನ್ ಮೊಧ್ವಾಡಿಯಾ ಆರೋಪಿಸಿದ್ದಾರೆ.

   English summary
   Gujarat Congress MLAs ready to move to resorts after resignation of 3 MLA.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X