ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆ ಇಲ್ಲದ 2 ಕೋಟಿ ರೂ. ಕಾರಿಗೆ 9 ಲಕ್ಷ ದಂಡ ಜಡಿದ ಪೊಲೀಸರು

|
Google Oneindia Kannada News

ಅಹಮದಾಬಾದ್, ನವೆಂಬರ್ 30: ಸುಮಾರು 2 ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ಪೋರ್ಷ್ 911 ಸ್ಪೋರ್ಟ್ಸ್ ಕಾರ್‌ಗೆ ಸೂಕ್ತ ದಾಖಲೆಗಳನ್ನು ಮತ್ತು ಕ್ರಮಬದ್ಧವಾದ ನಂಬರ್ ಪ್ಲೇಟ್ ಹೊಂದಿಲ್ಲದ ಕಾರಣ ಅದರ ಮಾಲೀಕರಿಗೆ ಅಹಮದಾಬಾದ್ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬರೋಬ್ಬರಿ 9.8 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಅಲ್ಲದೆ, ಆ ದುಬಾರಿ ಕಾರನ್ನು ಸಂಚಾರ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. 'ಕಾರ್‌ಗೆ ನೋಂದಣಿ ಸಂಖ್ಯಾ ಫಲಕ ಇರಲಿಲ್ಲ. ಮಾಲೀಕರ ಬಳಿ ಸೂಕ್ತ ದಾಖಲೆಗಳೂ ಇರಲಿಲ್ಲ. ಹೀಗಾಗಿ ಅದನ್ನು ವಶಕ್ಕೆ ಪಡೆದುಕೊಂಡು ಮಾಲೀಕರಿಗೆ ಮೋಟಾರು ವಾಹನ ಕಾಯ್ದೆಯಡಿ 9.80 ಲಕ್ಷ ರೂ. ದಂಡ ವಿಧಿಸಿದ್ದೇವೆ ಎಂದು ಅಹಮದಾಬಾದ್ ಪೊಲೀಸರು ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಬೈಕ್ ಸವಾರರಿಗೆ ಪೊಲೀಸರಿಂದ ನೆಮ್ಮದಿ ನೀಡಿದ ಹೈಕೋರ್ಟ್ ಆದೇಶಬೈಕ್ ಸವಾರರಿಗೆ ಪೊಲೀಸರಿಂದ ನೆಮ್ಮದಿ ನೀಡಿದ ಹೈಕೋರ್ಟ್ ಆದೇಶ

ಸಿಲ್ವರ್ ಬಣ್ಣದ ಕಾರ್‌ ಸಂಖ್ಯಾ ಫಲಕ ಹೊಂದಿಲ್ಲದ ಕಾರಣ ಅಹಮದಾಬಾದ್‌ನ ಹೆಲ್ಮೆಟ್ ಕ್ರಾಸ್‌ರೋಡ್‌ನಲ್ಲಿ ಬುಧವಾರ ಸಂಚಾರ ಪೊಲೀಸರು ತಡೆದಿದ್ದರು. ಚಾಲಕನನ್ನು ಪ್ರಶ್ನಿಸಿದಾಗ ಆತ ವಾಹನದ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲನಾದ. ಹೀಗಾಗಿ ನಾವು ಕಾರನ್ನು ವಶಕ್ಕೆ ಪಡೆದುಕೊಂಡೆವು. ಮೋಟಾರು ವಾಹನಗಳ ಕಾಯ್ದೆಯಡಿ ಆರ್‌ಟಿಓ ಮೆಮೋ ಹೊರಡಿಸಿದ್ದೇವೆ. ಅದರ ಅರ್ಥ ಕಾರ್‌ನ ಮಾಲೀಕರು ಆರ್‌ಟಿಓಗೆ ದಂಡದ ಮೊತ್ತ ಪಾವತಿಸಿ ನಮ್ಮ ಬಳಿ ಅದರ ರಸೀದಿ ನೀಡಿ ಕಾರ್ ವಾಪಸ್ ತೆಗೆದುಕೊಳ್ಳಬೇಕು ಎಂದು ಉಪ ಪೊಲೀಸ್ ಆಯುಕ್ತ ತೇಜಸ್ ಪಟೇಲ್ ತಿಳಿಸಿದ್ದಾರೆ.

 Ahmedabad Police Fined Porsche Car Owner Rs 9.8 Lakh

ಬೆಳಗಾವಿಯಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ಚಾಲಕನಿಂದ ಹಲ್ಲೆಬೆಳಗಾವಿಯಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ಚಾಲಕನಿಂದ ಹಲ್ಲೆ

ಸಂಚಾರ ಪೊಲೀಸರು ದಂಡವನ್ನು ಸಂಗ್ರಹಿಸಿಲ್ಲ. ಸಾರಿಗೆ ಅಧಿಕಾರಿಗಳು ಕಾರ್‌ಗೆ ಸಂಬಂಧಿಸಿದ ಬಾಕಿ ಉಳಿದ ದಂಡಗಳು, ತೆರಿಗೆಗಳ ಮೊತ್ತವನ್ನು ಲೆಕ್ಕಹಾಕಿದ್ದಾರೆ. ಬಳಿಕ 9.8 ಲಕ್ಷ ರೂ. ದಂಡ ವಿಧಿಸಿದ್ದಾರೆ. ಕಾರ್‌ನ ಮಾಲೀಕ ದಂಡದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿ ಅದಕ್ಕೆ ಪೂರಕ ರಸೀದಿ ತೋರಿಸಿದಾಗ ಮಾತ್ರವೇ ಕಾರನ್ನು ಅವರಿಗೆ ಮರಳಿಸುತ್ತೇವೆ ಎಂದು ಹೇಳಿದ್ದಾರೆ.

English summary
Ahmedabad RTO slapped a fine of Rs 9.8 lakh to the owner of a Porsche 911 sports car worth around Rs 2 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X