ಯುವತಿಯನ್ನು ತೊಂದರೆಗೆ ತಳ್ಳಿದ ಬರ್ತಡೇ ಗಿಫ್ಟ್!
ರಾಯಪುರ, ಸೆ. 7 : ತಾನೇ ಮಾಡಿಕೊಂಡ ಯಡವಟ್ಟು ತನ್ನನ್ನು ಇಂಥ ತೊಂದರೆಗೆ ಸಿಲುಕಿಸುತ್ತದೆ ಎಂದು ಆ ಯುವತಿ ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಇನಿಯನ 'ಹುಟ್ಟುಹಬ್ಬ'ದಂದು ತಾನೇ ನೀಡಿದ 'ಉಡುಗೊರೆ' ತನ್ನನ್ನು ಇಂಥ ಸಂದಿಗ್ಧಕ್ಕೆ ತಳ್ಳುತ್ತದೆ ಎಂದೂ ಆಕೆ ಊಹಿಸಿರಲಿಲ್ಲ. ಆದರೆ, ಆಕೆ ಊಹಿಸಿರದ ಘಟನೆ ನಡದೇಬಿಟ್ಟಿತ್ತು.
ಆ ಯುವತಿ ತನ್ನ ಗೆಳೆಯನ ಹುಟ್ಟುಹಬ್ಬಕ್ಕೆ ನೀಡಿದ ಉಡುಗೊರೆ ಎಂಥದು ಗೊತ್ತಾ? ತಾನೇ ಹುಟ್ಟುಡುಗೆಯಲ್ಲಿರುವ ನಗ್ನ ಚಿತ್ರಗಳು. ಅವೇ ನಗ್ನ ಚಿತ್ರಗಳು ಇನಿಯನ ಮೊಬೈಲಿನಿಂದ ಕಳ್ಳತನವಾಗಿ ಫೇಸ್ ಬುಕ್ ಸೋಷಿಯಲ್ ಮೀಡಿಯಾ ಸೈಟಿನಲ್ಲಿ ಕಾಣಿಸಿಕೊಂಡು, ಆಕೆ ಸಮಾಜಕ್ಕೆ ತನ್ನದೇ ಫೇಸ್ ತೋರಿಸದಂತೆ ಆಗಿರುವುದು ನಗ್ನಸತ್ಯ.

ಚತ್ತೀಸ್ ಘಡದ ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ ತನ್ನ ಗೆಳೆಯನ ಹುಟ್ಟುಹಬ್ಬದ ದಿನದಂದು, ಆತನ ಕೋರಿಕೆಯಂತೆ ಅಂತಿಂಥ ಉಡುಗೊರೆಗಳನ್ನು ನೀಡದೆ, ತನ್ನದೇ ನಗ್ನ ಚಿತ್ರಗಳನ್ನು ಗಿಫ್ಟಾಗಿ ನೀಡಿದ್ದಳು. ಈ ಅವಕಾಶವನ್ನು ಬಳಸಿಕೊಂಡ ಗೆಳೆಯ ಆಕೆಯ ಸಾಕಷ್ಟು ಬೆತ್ತಲೆ ಚಿತ್ರಗಳನ್ನು ಮೊಬೈಲಿನಲ್ಲಿ ಸೆರೆಹಿಡಿದಿದ್ದ.
ಇದು ಹೇಗೋ ಆತನ ಸ್ನೇಹಿತ ಜಯೇಶ್ ಎಂಬಾತನಿಗೆ ತಿಳಿದುಬಿಟ್ಟಿದೆ. ಗೆಳೆಯನಿಗೆ ತಿಳಿಯದಂತೆ ಅವೆಲ್ಲ ಫೋಟೋಗಳನ್ನು ಜಯೇಶ್ ತನ್ನ ಮೊಬೈಲಿಗೆ ಇಳಿಸಿಕೊಂಡಿದ್ದಾನೆ. ನಂತರ, ಇದಕ್ಕಾಗಿಯೇ ಹೊಸ ಫೇಸ್ ಬುಕ್ ಖಾತೆ ತೆರೆದು ಅದಕ್ಕೆ ಅಪ್ ಲೋಡ್ ಮಾಡಿದ್ದಾನೆ. ಫೇಸ್ ಬುಕ್ಕಿಗೆ ಅಪ್ ಲೋಡ್ ಆದರೆ ಊರಿಗೆಲ್ಲ ಹಂಚುವುದು ಎಷ್ಟು ಹೊತ್ತು?
ಇದು ಯುವತಿಯ ಸಹೋದರನ ಗಮನಕ್ಕೆ ಬಂದಿದೆ. ಕೂಡಲೆ ಆತ ಪೊಲೀಸರಿಗೆ ದೂರು ನೀಡಿದ್ದಾನೆ. ಸಿಐಡಿ ಪೊಲೀಸರು ಕೂಡಲೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಯುವತಿ, ಆತನ ಸ್ನೇಹಿತರನ್ನು ವಿಚಾರಿಸಲಾಗಿ ಸತ್ಯ ಸಂಗತಿ ಬಹಿರಂಗವಾಗಿದೆ. ಫೇಕ್ ಫೇಸ್ ಬುಕ್ ಅಕೌಂಟನ್ನು ಯುವಕನ ಗೆಳೆಯ ಜಯೇಶ್ ತೆರೆದು, ಇಂಥ ಹೇಯ ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಫೇಸ್ ಬುಕ್ಕಿಗೆ ಯುವತಿಯ ನಗ್ನ ಚಿತ್ರಗಳನ್ನು ಅಪ್ ಲೋಡ್ ಮಾಡಿ ವಿಕೃತಿ ಮೆರೆದ ಜಯೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಂಪ್ಯೂಟರ್ ಹಾರ್ಡ್ ಡಿಸ್ಕನ್ನು ವಶಪಡಿಸಿಕೊಳ್ಳಲಾಗಿದೆ. ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆದರೆ, ಬೆತ್ತಲೆ ಚಿತ್ರಗಳನ್ನು ತೆಗೆಯಲು ಯುವತಿಯೇ ಪೂರ್ವಅನುಮತಿ ನೀಡಿದ್ದರಿಂದ ಆಕೆಯ ಇನಿಯನನ್ನು ಪೊಲೀಸರು ಬಂಧಿಸಿಲ್ಲ. ಆದರೆ, ಗದರಿಸಿ ಕಳಿಸಿದ್ದಾರೆ.












Click it and Unblock the Notifications