ನಿತ್ಯಾನಂದ ವಿಡಿಯೋ: ನಟಿ ರಂಜಿತಾ ಕ್ಷಮಾಪಣೆಗೆ ಆದೇಶ

ಈ ಸಂಬಂಧ, Broadcast Content Complaints Council (BCCC) ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎಪಿ ಷಾ ಅವರು Star Vijay ಚಾನೆಲ್ ವಿರುದ್ಧ ಸೋಮವಾರ ಈ ಮಹತ್ವದ ಆದೇಶ ನೀಡಿದ್ದು, ನಟಿ ರಂಜಿತಾ ಅವರಲ್ಲಿ ಕ್ಷಮೆ ಯಾಚಿಸುವಂತೆ ಸೂಚಿಸಿದ್ದಾರೆ. ಅಂದಹಾಗೆ BCCC ಸಮಿತಿಯು ಟಿವಿ ಚಾನೆಲ್ಲುಗಳ ನಿಯಂತ್ರಣ ಸಂಸ್ಥೆಯಾಗಿದೆ.
ಸೆಪ್ಟೆಂಬರ್ 9ರಿಂದ ಪ್ರಾರಂಭ ಮಾಡಿ 7 ದಿನಗಳ ಪ್ರತಿ 2 ಗಂಟೆಗೊಮ್ಮೆ scrollನಲ್ಲಿ ಪ್ರಸಾರ ಮಾಡಬೇಕು ಎಂದು BCCC ಅಧ್ಯಕ್ಷ ಎಪಿ ಷಾ ಅವರು ಆದೇಶಿಸಿದ್ದಾರೆ. 2012ರ ಮಾರ್ಚ್ 21ರಂದು 'ಸ್ಟಾರ್ ವಿಜಯ್' ಚಾನೆಲ್ Nadanthadhu Enna Kutramum Pinnaniyum ಎಂಬ ಕಾರ್ಯಕ್ರಮ ಪ್ರಸಾರವಾಗಿತ್ತು. ಅದರಲ್ಲಿ ಈ ಆಕ್ಷೇಪಾರ್ಹ ವಿಡಿಯೋ ಪ್ರಸಾರವಾಗಿತ್ತು.
ಅರ್ಜಿದಾರರಾದ ರಂಜಿತಾ ಅವರ ಖಾಸಗಿ ತನಕ್ಕೆ ಧಕ್ಕೆ ತಂದಿದೆ. ಆಕೆಯ ಗೌರವಕ್ಕೆ ಚ್ಯುತಿಬರುವಂತೆ ಈ ವಿಡಿಯೋ ಪ್ರಸಾರ ಮಾಡಲಾಗಿದೆ. ಆದ್ದರಿಂದ ರಂಜಿತಾ ಮೆನನ್ ಗೆ ಚಾನೆಲ್ ಕ್ಷಮಾಪಣೆ ಕೋರಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಪ್ರಕರಣದ ಸಂಬಂಧ ನಟಿ ರಂಜಿತಾ ಅವರು ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಸಿ.ಡಿ. ಸಮೇತ ಅರ್ಜಿಯನ್ನು BCCCಗೆ ವರ್ಗಾಯಿಸಿತ್ತು.












Click it and Unblock the Notifications