'ಆಮದು ನಾಯಕಿ' ಸೋನಿಯಾರನ್ನು ಇಟಲಿಗೆ ಕಳುಹಿಸಿ
ನಾಗಪುರ, ಸೆ.1: ಲೋಕಸಭಾ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗುವುದು ಮಾಮೂಲಿ. ನಾಗ್ಪುರ ಸಮೀಪದ ರಾಮ್ ಟೆಕ್ ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಸೋನಿಯಾ ಗಾಂಧಿ ಅವರನ್ನು 'ಆಮದು ನಾಯಕಿ' ಎನ್ನುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯ ಅವರು ಆಮದು ನಾಯಕಿ ಅವರನ್ನು ಇಟಲಿಗೆ ವಾಪಸ್ ಕಳುಹಿಸಬೇಕೆಂದು ಹೇಳಿಕೆ ನೀಡುವ ಮೂಲಕ ಹಳೆ ವಿವಾದಕ್ಕೆ ಮರುಜನ್ಮ ನೀಡಿದ್ದಾರೆ. ಮೊದಲು ಸೋನಿಯಾ ಗಾಂಧಿ 'ಇಂಪೋರ್ಟೇಡ್ ಲೀಡರ್' ಲೀಡರ್ ಎಂದು ಛೇಡಿಸಿದ ಉದ್ಧವ್ ಠಾಕ್ರೆ, ಅವರನ್ನು ಮರಳಿ ಅವರ ತವರು ಇಟಲಿಗೆ ಕಳುಹಿಸಲೇಬೇಕೆಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ನಾಗಪುರದಿಂದ 40 ಕಿ,ಮೀ ದೂರದಲ್ಲಿರುವ ರಾಮ್ ಟೆಕ್ ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ ಈ ರೀತಿ ಹೇಳಿಕೆ ನೀಡಿದ್ದಾರೆ. ಉದ್ಧವ್ ಹೇಳಿಕೆಗೆ ಕಾಂಗ್ರೆಸ್ ವಕ್ತಾರರಿಂದ ಸದ್ಯಕ್ಕಂತೂ ಯಾವುದೇ ಪ್ರತಿಕ್ರಿಯೆ ಕೇಳಿ ಬಂದಿಲ್ಲ.
ಹಿರಿಯ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್ ಅವರ ಕ್ಷೇತ್ರವಾಗಿರುವ ರಾಮ್ ಟೆಕ್ ನಲ್ಲಿ ಪರಿಶಿಷ್ಟ ಜಾತಿಯ ಮತದಾರರೇ ಅಧಿಕವಾಗಿದ್ದಾರೆ ಎಂಬುದು ಗಮನಾರ್ಹ.

ಸೋನಿಯಾ ಗಾಂಧಿ ಅವರು ಇಂದಿಗೂ ಇಟಲಿಯಲ್ಲಿ ತಮ್ಮ ನಾಗರೀಕ ಅಸ್ತಿತ್ವ ಹೊಂದಿದ್ದಾರೆ ಎನ್ನಲಾಗಿದೆ. ಭಾರತೀಯ ಸಂವಿಧಾನದಲ್ಲಿ ದ್ವಿಪೌರತ್ವವಿದ್ದರೆ ಸಂಸದರಾಗಲು ಸಾಧ್ಯವಿಲ್ಲ. ನೆಹರೂ ಕಾಲಕ್ಕೆ ಅದು ಮುಗಿದ ಕಥೆ ಎನ್ನಲಾಗಿದೆ. ಸೋನಿಯಾ ಅವರು ಸಂಸತ್ ನಲ್ಲಿರುವುದೇ ಅಸಂವಿಧಾನ ಎಂಬ ವಾದವಿದೆ. ರಾಜೀವ್ ಗಾಂಧಿ ಅವರ ಪತ್ನಿಯಾಗಿ ಬಂದ ವಿದೇಶಿ ಮಹಿಳೆ ಇಲ್ಲಿನ ನೆಲದಲ್ಲಿ ಇಷ್ಟು ಕಾಲ ವಾಸವಾಗಿದ್ದು ಮಕ್ಕಳು, ಮೊಮ್ಮಕ್ಕಳು ಕಂಡಿರುವಾಗ ಪೌರತ್ವದ ಪ್ರಶ್ನೆ ಉದ್ಭವಿಸುವುದೇ ಇಲ್ಲ ಸೋನಿಯಾ ಅವರ ಪರ ವಾದವೂ ಇದೆ.
ಪ್ರಧಾನಿ ವಿರುದ್ಧವೂ ಕಿಡಿ: ಇದೇವೇಳೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ದ ಹರಿಹಾಯ್ದ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ಆಕ್ರೋಶ ವ್ಯಕ್ತಪಡಿಸಿದ ಉದ್ಧವ್ ಠಾಕ್ರೆ, ಚೀನಾ ಮತ್ತು ಪಾಕಿಸ್ತಾನದ ಸೈನಿಕರು ಹಲವು ಬಾರಿ ಗಡಿ ನಿಯಮ ಉಲ್ಲಂಘಿಸಿ ಒಳನುಸುಳುತ್ತಿದ್ದಾಗ ಸುಮ್ಮನಿದ್ದ ಪ್ರಧಾನಮಂತ್ರಿಗಳು, ಪ್ರತಿಪಕ್ಷಗಳ ಮುಖಂಡರ ಮೇಲೆ ಎಗರಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನ ಮತ್ತು ಚೀನಾ ವಿಷಯದಲ್ಲಿ ಆಕ್ರಮಣಕಾರಿಯಾಗಿ ವರ್ತಿಸದ ಸಿಂಗ್, ಪ್ರತಿಪಕ್ಷಗಳ ಮೇಲೆ ಆಕ್ರಮಣ ಮಾಡಿದ್ದರ ಔಚಿತ್ಯವೇನು ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.












Click it and Unblock the Notifications