ಬೆಂಗಳೂರಿನಿಂದ ಸೈಕೋ ಕಿಲ್ಲರ್ ಜೈ ಶಂಕರ್ ಪರಾರಿ
ಬೆಂಗಳೂರು, ಸೆ.1: ಹಲವಾರು ಮಹಿಳೆಯರ ನಿದ್ದೆಗೆಡಿಸಿದ್ದ ತಮಿಳುನಾಡು ಮೂಲದ ಅತ್ಯಾಚಾರಿ, ಸರಣಿ ಹಂತಕ, ಸೈಕೋ ಕಿಲ್ಲರ್ ಜೈ ಶಂಕರ್ ಜೈಲಿನಿಂದ ಎಸ್ಕೇಪ್ ಆಗಿದ್ದಾನೆ. ಪರಪ್ಪನ ಅಗ್ರಹಾರ ಜೈಲಿನಿಂದ ಜೈ ಶಂಕರ್ ಪರಾರಿಯಾಗಿರುವುದನ್ನು ಜೈಲು ಅಧೀಕ್ಷಕ ದೃಢಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದಿದ್ದಾರೆ.
ಜೈಶಂಕರ್ ಎಸ್ಕೇಪ್ ಆಗುತ್ತಿದ್ದಂತೆ ಎಎಸ್ ಪಿ ಸಿ.ವಿ ಮಠ್, ಮೂವರು ಜೈಲರ್ ಗಳು ಸೇರಿದಂತೆ 11 ಸಿಬ್ಬಂದಿ ಅಮಾನತು ಮಾಡಲಾಗಿದೆ.ತಮಿಳುನಾಡಿನಲ್ಲಿ 20ಕ್ಕೂ ಅಧಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಜೈಶಂಕರ್ 2011ರ ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು.
ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ಸವಾಲಾಗಿ ಈತನ ಬಂಧನದ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಎರಡೂ ರಾಜ್ಯಗಳಲ್ಲಿ ನಟೋರಿಯಸ್ ಕ್ರಿಮಿನಲ್ ಆಗಿ ವಿವಿಧ ಕೊಲೆ, ಅತ್ಯಾಚಾರ ಪ್ರಕರಣಗಳನ್ನು ನಡೆಸಿದ್ದ ಈತನನ್ನು ಬಿಜಾಪುರದಲ್ಲಿ ಪೊಲೀಸರು ಬಂಧಿಸಿದ್ದರು.
ಎಸ್ಕೇಪ್ ಹೇಗೆ ?: 15 ಅಡಿಯ ಎರಡು ಕಾಂಪೌಂಡ್ ಹಾಗೂ 30 ಅಡಿಯ ಮೇನ್ ಗೇಟ್ ನಿಂದ ಹಾರಿ, ಜೈಲಿನ ನಕಲಿ ಕೀ ಬಳಸಿ , ಪೊಲೀಸರ ವೇಷ ತೊಟ್ಟು, ಜೈಲಿನ ಚಕ್ರವ್ಯೂಹ ಭೇದಿಸಿ ಪರಾರಿಯಾಗಿ ಅಚ್ಚರಿ ಮೂಡಿಸಿದ್ದಾನೆ. ಸಿಸಿ ಕ್ಯಾಮೆರಾ, ತಪಾಸಣಾ ಗೋಪುರ, 24 ಗಂಟೆಗಳ ಕಣ್ಗಾವಲು, ಘೋರ ಅಪರಾಧಿಗಳ ತೀವ್ರ ಕಟ್ಟೆಚ್ಚರ ಸಂದರ್ಭದಲ್ಲೂ ಸೈಕೋ ಶಂಕರ್ ಜೈಲಿನಿಂದ ನಿನ್ನೆ ರಾತ್ರಿ ಪರಾರಿಯಾಗಿದ್ದಾನೆ. ಆಗ್ನೇಯ ಡಿಸಿಪಿ ಟಿ.ಡಿ.ಪವಾರ್ ಸ್ಥಳಕ್ಕೆ ಧಾವಿಸಿ ಪ್ರಕರಣದ ಕುರಿತು ಪರಿಶೀಲನೆ ನಡೆಸಿದ್ದಾರೆ. ಜೈಶಂಕರ್ ಎಸ್ಕೇಪ್ ವಿವರ, ಅವನ ಮೇಲಿರುವ ಪ್ರಕರಣಗಳು ಇನ್ನಷ್ಟು ಮಾಹಿತಿ ಮುಂದೆ ಓದಿ..

ಹೀಗಿದ್ದಾನೆ ಇವನು
ಹೆಸರು: ಎಂ ಶಂಕರ್ ಅಲಿಯಾಸ್ ಜೈಶಂಕರ್, 34 ವರ್ಷ ವಯಸ್ಸು
ಚಹರೆ: 5.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗಂಪು ಬಣ್ಣ, ಬಲ ಹಣೆ ಬಳಿ ಹಳೆಗಾಯದ ಗುರುತು
ಜಾತಿ: ವನ್ನಿಯಾರ್ ತಮಿಳಿಯನ್
ತಿಳಿದಿರುವ ಭಾಷೆ: ತಮಿಳು, ಹಿಂದಿ, ಕನ್ನಡ,

ಎಸ್ಕೇಪ್ ಹೇಗೆ
ಬೆಂಗಳೂರು ಸ್ಫೋಟ ರುವಾರಿ ಅಬ್ದುಲ್ ಮದನಿ ಸೇರಿದಂತೆ 4500ಕ್ಕೂ ಅಧಿಕ ಕೈದಿಗಳಿಂದ ತುಂಬಿ ತುಳುಕುತ್ತಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕರ ಎಸ್ಕೇಪ್ ಪೂರ್ವನಿಯೋಜಿತವಾಗಿದೆ.
ಬೆಲ್ಟ್ ಬೆಡ್ ಶೀಟ್, ಸರ್ಜಿಕಲ್ ಗ್ಲೋಸ್ ಸೇರಿದಂತೆ ಇನ್ನಿತರ ಸಾಧನಗಳನ್ನು ಬಳಸಿದ್ದಾನೆ. ಕಳೆದ ರಾತ್ರಿ ಕರೆಂಟ್ ಹೋದ ಸಂದರ್ಭದಲ್ಲಿ ಪೊಲೀಸ್ ವೇಷ ಧರಿಸಿ ಗೋಡೆ ಹಾರಿ ಎಸ್ಕೇಪ್ ಆಗಿದ್ದಾನೆ. ಗೋಡೆ ಹಾರುವಾಗ ಗಾಯವಾಗಿದೆ. ಗೋಡೆಯ ಮೇಲೆ ರಕ್ತದ ಕಲೆಗಳು ಹೆಪ್ಪುಗಟ್ಟಿದೆ.
ಜೈಲಿನ ಎಡ ಭಾಗದ ಗೋಡೆ ಹಾರಿ ಪರಾರಿಯಾಗಿದ್ದಾನೆ ಎಂದು ಜೈಲ್ ಸೂಪರಿಂಟೆಂಡೆಂಟ್ ವೀರೇಂದ್ರ ಸಿಂಹ ಅವರಿಗೆ ಮೊದಲಿಗೆ ತಿಳಿದು ಬಂದಿದೆ. ಆಗ್ನೇಯ ಡಿಸಿಪಿ ಟಿ.ಡಿ.ಪವಾರ್ ಸ್ಥಳಕ್ಕೆ ಧಾವಿಸಿ ಪ್ರಕರಣದ ಕುರಿತು ಪರಿಶೀಲನೆ ನಡೆಸಿದ್ದಾರೆ. ವಿಶೇಷ ತಂಡ ರಚಿಸಿ ಎಲ್ಲೆಡೆ ನಾಗಾಬಂದಿ ಹಾಕಿ ಜಾಲ ಬೀಸಲಾಗಿದೆ.

ಒಂಟಿ ಮಹಿಳೆಯರೇ ಟಾರ್ಗೆಟ್
ಸೇಲಂನ ಈಡಪ್ಪಾಡಿ ಗ್ರಾಮದ ಜೈಶಂಕರ್ ಅಲಿಯಾಸ್ ಶಂಕರ್. 19ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ ಮತ್ತು ಕೊಲೆ ಮಾಡಿ ಸಿಕ್ಕಿಬಿದ್ದ ಮೇಲೆ ಸೈಕೋ ಶಂಕರ್ ಎಂತಲೇ ಕುಖ್ಯಾತಿಯಾದ.
ಕೊಯಮತ್ತೂರಿನಲ್ಲಿ ಲಾರಿ ಚಾಲಕನಾಗಿದ್ದ ಈತ ಆರು ವರ್ಷಗಳವರೆಗೆ ಮಹಿಳೆಯರನ್ನು ಅತ್ಯಾಚಾರವೆಸಗಿ ಕೊಲ್ಲುವುದನ್ನೇ ಕಾಯಕ ಮಾಡಿಕೊಂಡಿದ್ದ. ತಮಿಳುನಾಡಿನಲ್ಲಿ 11 ಮಹಿಳೆಯರು, ಕರ್ನಾಟಕದಲ್ಲಿ ನಾಲ್ವರು ಮಹಿಳೆಯರು ಈತನ ಕಾಮದಾಹಕ್ಕೆ ಬಲಿಯಾಗಿದ್ದಾರೆ.

ಎರಡನೇ ಎಸ್ಕೇಪ್
ತಮಿಳುನಾಡಿನಲ್ಲಿ ಅತ್ಯಾಚಾರವೆಸಗಿ ಕೊಲೆ ಯತ್ನ ಮಾಡಿದ 8 ಪ್ರಕರಣಗಳು ಈತನ ಮೇಲಿದ್ದವು. ಸೇಲಂನ ಕೋರ್ಟಿಗೆ ಕರೆದೊಯ್ಯುವಾಗ ಪೇದೆಗೆ ಚೆನ್ನಾಗಿ ಬಾರಿಸಿ ಎಸ್ಕೇಪ್ ಆಗಿದ್ದ. ಅಲ್ಲಿಂದ ನೇರ ಕರ್ನಾಟಕದ ಚಿತ್ರದುರ್ಗಕ್ಕೆ ಬಂದಿದ್ದ . ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಈತ ಮೈನಿಂಗ್ ಲಾರಿ ಓಡಿಸುತ್ತಾ ಉತ್ತರ ಕರ್ನಾಟಕ ಕೆಲವು ಭಾಗಗಳಲ್ಲಿ ಸುತ್ತುತ್ತಿದ್ದ. ಚಿತ್ರದುರ್ಗಕ್ಕೆ ಕಾಲಿಟ್ಟ ಮೂರ್ನಾಲ್ಕು ತಿಂಗಳಲ್ಲೇ 6 ಜನರನ್ನು ಕೊಚ್ಚಿ ಹಾಕಿದ್ದ.
ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಈತನನ್ನು ಹಿಡಿದುಕೊಟ್ಟವರಿಗೆ 10 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದರು. 2011ರಲ್ಲಿ ಈತನನ್ನು ಬಿಜಾಪುರ ಪೊಲೀಸರು ಬಂಧಿಸಿ ತಮಿಳುನಾಡು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು.

ಮಹಾನ್ ಕ್ರೂರಿ
ಅತ್ಯಾಚಾರ ಎಸಗುವ ಮುನ್ನ ಮಹಿಳೆಯರನ್ನು ವಿಧವಿಧವಾಗಿ ಹಿಂಸೆ ಮಾಡುತ್ತಿದ್ದ. ಈತ ತನ್ನ ಕ್ರೌರ್ಯ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದುದು ಬಹುತೇಕ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರನ್ನು ಹಾಗೂ ಒಂಟಿ ಮಹಿಳೆಯರನ್ನು ಮಾತ್ರ. ರಾಷ್ಟ್ರೀಯ ಹೆದ್ದಾರಿಗಳ ಡಾಬಾ, ಟೋಲ್ ಗೇಟ್ ಗಳಲ್ಲಿ ಗಿರಾಕಿಗಳಿಗಾಗಿ ಕಾಯುವ ಮಹಿಳೆಯರನ್ನು ಪರಿಚಯ ಮಾಡಿಕೊಂಡು ತನ್ನ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ. ನಂತರ ಕೊಂದು ಹಾಕುತ್ತಿದ್ದ.
ಕಾನ್ಸ್ ಟೇಬಲ್ ರೊಬ್ಬರ ಪತ್ನಿಯನ್ನೇ ಅತ್ಯಾಚಾರವೆಸಗಿದ್ದ. ಪತ್ನಿ ಎದುರಿನಲ್ಲೇ ಪತಿ ಕೊಂದು ಹಾಕಿದ್ದ. ಇವನ ಕಾಟದಿಂದ ಕರ್ನಾಟಕ, ತಮಿಳುನಾಡಿನ ಕೂಲಿ ಕಾರ್ಮಿಕರು ತತ್ತರಿಸಿದ್ದರು.

ಉಮೇಶ್ ರೆಡ್ಡಿ ಮೀರಿಸುವಾತ
ಚಿತ್ರದುರ್ಗ ಮತ್ತು ಬಿಜಾಪುರಗಳಲ್ಲಿ ಇವನ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ. ವೇಶ್ಯಾವಾಟಿಕೆಗೆ ತೊಡಗಿದವರಲ್ಲದೆ ಈತ ಹಳ್ಳಿಯ ಮುಗ್ಧ ಹೆಣ್ಣು ಮಕ್ಕಳನ್ನೂ ಪರಿಚಯ ಮಾಡಿಕೊಂಡು ತನ್ನ ಕಾಮಬೇಟೆಯನ್ನಾಡುತ್ತಿದ್ದ.
ಚಿತ್ರದುರ್ಗ ಜಿಲ್ಲೆಯ ಗೌಲಾಳು ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯನ್ನು ಅತ್ಯಾಚಾರವೆಸಗಿ ಕೊಂದಿದ್ದ. ಇದೇ ಗ್ರಾಮದಲ್ಲಿ ಕೂಲಿ ಕಾರ್ಮಿಕ ದಂಪತಿಯನ್ನೂ ಹತ್ಯೆಗೈದಿದ್ದ. ಒಂಟಿಯಾಗಿದ್ದ ವೃದ್ಧೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಸಾಯಿಸಿದ್ದ.ಅಪರಾಧ ಕೃತ್ಯ ನಡೆಸಿದ ಕೂಡಲೇ ಆ ಸ್ಥಳವನ್ನು ಬದಲಿಸುತ್ತಿದ್ದ ಈತನನ್ನು ಹಿಡಿಯಲು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಹರಸಾಹಸವನ್ನೇ ಮಾಡಬೇಕಾಯಿತು. ಈಗ ಎಸ್ಕೇಪ್ ಆಗಿರುವ ಶಂಕರ ಗಡಿಭಾಗದಲ್ಲೇ ನೆಲೆಸಿರುವ ಶಂಕೆ ವ್ಯಕ್ತವಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications