ರೂಪಾಯಿ ಕುಸಿತ: ಮುಕೇಶ್‌ ಅಂಬಾನಿಗೆ ಗರಿಷ್ಠ ನಷ್ಟ

ಮುಂಬೈ, ಆಗಸ್ಟ್ 26: ರೂಪಾಯಿ ಮೌಲ್ಯ ಇಂದೂ ಪಾತಾಳಕ್ಕೆ ಕುಸಿದಿದೆ. ಸತತವಾಗಿ ಇಳಿಜಾರುತ್ತಿರುವ ರೂಪಾಯಿಯಿಂದಾಗಿ ಉದ್ಯಮ/ ವ್ಯಾಪಾರ ಕಂಗೆಡುತ್ತಿದೆ. ರಫ್ತಿನಲ್ಲಿ ತೊಡಗಿರುವ ಐಟಿ-ಬಿಟಿಗೆ ಕಂಪನಿಗಳಿಗೆ ಭಾರಿ ಲಾಭ ಮಾಡಿಕೊಳ್ಳುತ್ತಿವೆಯಾದರೂ ದೇಶೀಯವಾಗಿ ಹಲವಾರು ಉದ್ದಿಮೆಗಳು ನಷ್ಟದ ಸುಳಿಗೆ ಸಿಲುಕುತ್ತಿವೆ.

ಅಂಬಾನಿಗೆ ಗರಿಷ್ಠ ನಷ್ಟ: ದೇಶದ ಅತಿ ಶ್ರೀಮಂತ ಉದ್ಯಮಿ ಮುಖೇಶ್‌ ಅಂಬಾನಿ ಸಹ ಇದಕ್ಕೆ ಹೊರತಾಗಿಲ್ಲ. ರೂಪಾಯಿ ಮೌಲ್ಯ ಕುಸಿತದಿಂದ ಭಾರತದಲ್ಲಿ ಅತಿ ಹೆಚ್ಚು ನಷ್ಟ ಹೊಂದಿರುವುದು ಮುಕೇಶ್ ಅಂಬಾನಿ. ಕಳೆದ ಮೂರು ತಿಂಗಳಿಂದ ರೂಪಾಯಿ ಮೌಲ್ಯ ಸತತವಾಗಿ ಕುಸಿತ ಕಂಡಿದ್ದರಿಂದ ಜಗತ್ತಿನ ಅತಿ ದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಯನ್ಸ್‌ ಸಮೂಹಕ್ಕೆ 35,402 ಕೋಟಿ ರೂ. ನಷ್ಟವಾಗಿದೆ ಎಂದು Bloomberg Billionaires Index ಹೇಳಿದೆ.

Mumbai- As rupee value declines Mukesh Ambani loses Rs 35402 Crore

ಅಂದಹಾಗೆ ಜುಲೈ 19ರಂದು Reliance Industries ಷೇರು ಮೌಲ್ಯ ಗರಿಷ್ಠಮಟ್ಟದಲ್ಲಿತ್ತು. ಅಲ್ಲಿಂದೀಚೆಗೆ ರಿಲಯನ್ಸ್ ಷೇರುಗಳು ಶೇ. 15 ನಷ್ಟ ಅನುಭವಿಸಿವೆ. ಒಟ್ಟಾರೆಯಾಗಿ, ದಾಖಲೆಯ ಪ್ರಮಾಣದಲ್ಲಿ ಮುಖೇಶ್‌ ಅಂಬಾನಿ ಶೇ. 25ರಷ್ಟು ಭಾರಿ ನಷ್ಟ ಅನುಭವಿಸಿದ್ದಾರೆ. ಅಂದರೆ 56 ವರ್ಷದ ಮುಕೇಶ್ $5.6 billion ನಷ್ಟಕ್ಕೆ ತುತ್ತಾಗಿದ್ದಾರೆ.

ಅಂಬಾನಿ 1.10 ಲಕ್ಷ ಕೋಟಿ ಮೌಲ್ಯದ ಆಸ್ತಿಗೆ ಒಡೆಯರಾಗಿದ್ದು, ರೂಪಾಯಿ ಬಿದ್ದು ಹೋಗುತ್ತಿರುವುದರಿಂದ ನಷ್ಟದ ಪ್ರಮಾಣವೂ ಹೆಚ್ಚುತ್ತಿದೆ. ಅಲ್ಲದೇ, ಕಳೆದ ಕೆಲ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ರೂಪಾಯಿ ಮೇಲಿನ ಭರವಸೆ ಕ್ಷೀಣಿಸುತ್ತಿರುವುದರಿಂದ ವಿದೇಶಿ ಹೂಡಿಕೆದಾರರು, ಬಂಡವಾಳಗಳನ್ನು ವಾಪಸ್‌ ಪಡೆಯುತ್ತಿದ್ದು, ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಸದ್ಯಕ್ಕೆ ರೂಪಾಯಿ ಮೌಲ್ಯ ಚೇತರಿಕೆಯ ಸಾಧ್ಯತೆಗಳು ಕಾಣುತ್ತಿಲ್ಲ. ಹಾಗಾಗಿ ಮುಕೇಶ್ ಅಂಬಾನಿ ಸೇರಿದಂತೆ ದೇಶೀಯ ಉದ್ಯಮಿಗಳು ಇನ್ನೂ ಭಾರಿ ನಷ್ಟ ಹೊಂದುವ ಲಕ್ಷಣಗಳಿಗಿವೆ. ಅನಿಲ್ ಅಂಬಾನಿಯ ಅದೃಷ್ಟವೂ ಅಣ್ಣನ ಹಾದಿಯಲ್ಲೇ ಸಾಗಿದೆ. ಅನಿಲ್ ಶೇ. 17ರಷ್ಟು ನಷ್ಟ ಕಂಡಿದ್ದಾರೆ.

ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ವಿದೇಶೀ ಸಾಂಸ್ಥಿಕ ಹೂಡಿಕೆದಾರರು (FIIs) ಜೂನ್ ತಿಂಗಳಿಂದೀಚೆಗೆ ಭಾರತದ ಷೇರು ಮಾರುಕಟ್ಟೆಗಳಿಂದ 3 ಶತಕೋಟಿ ಡಾಲರ್ ಹೂಡಿಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+