ಮಂಡ್ಯ ಉಪಚುನಾವಣೆಯಲ್ಲಿ ನಟಿ ರಮ್ಯಾ ಜಯಭೇರಿ
ಮಂಡ್ಯ, ಆ.24 : ನಟಿ ರಮ್ಯಾ ಮೊದಲ ಚುನಾವಣೆಯಲ್ಲಿಯೇ ಜಯಭೇರಿ ಬಾರಿಸಿದ್ದಾರೆ. ಮಂಡ್ಯ ಕ್ಷೇತ್ರದ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ವಿರುದ್ಧ ರಮ್ಯಾ ಭಾರೀ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ಅಧಿಪತ್ಯ ಸಾಧಿಸಿದೆ.
ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ವಿರುದ್ಧ 67,611 ಮತಗಳ ಅಂತರದಿಂದ ರಮ್ಯಾ ಗೆಲವು ಸಾಧಿಸಿದ್ದಾರೆ. 4,78,007 ಮತಗಳನ್ನು ಪಡೆದ ರಮ್ಯಾ ಶನಿವಾರ ನಡೆದ ಮತ ಎಣಿಕೆಯಲ್ಲಿ ಗೆಲುವಿನ ನಗೆ ಬೀರಿ ಸಕ್ಕರೆ ನಾಡಿನಲ್ಲಿ ಸಿಹಿಯನ್ನು ಉಂಡರು. ಮೂರು ಸುತ್ತುಗಳ ಮತ ಎಣಿಕೆ ನಂತರ ಮುನ್ನಡೆ ಕಾಯ್ದುಕೊಂಡ ರಮ್ಯಾ ಅಂತಿಮ ಹಂತದ ವರೆಗೂ ಮುನ್ನಡೆಯನ್ನು ಕಾಯ್ದುಕೊಂಡು ಭಾರೀ ಅಂತರದ ಗೆಲುವು ದಾಖಲಿಸಿದರು.

ಅಭ್ಯರ್ಥಿಗಳು
ಕಾಂಗ್ರೆಸ್ - ರಮ್ಯಾ - 4,84,085
ಜೆಡಿಎಸ್ - ಸಿ.ಎಸ್.ಪುಟ್ಟರಾಜು - 4,16,484 (ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೈ ಕಲರವ)
ಹಿಂದಿನ ಸುದ್ದಿ
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿರುವ ಮಂಡ್ಯ ಜಿಲ್ಲಾ ಲೋಕಸಭೆ ಉಪ ಚುನಾವಣೆ ಮತ ಎಣಿಕೆ ಪ್ರಾರಂಭವಾಗಿದೆ. ಶನಿವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡಿದ್ದು, ಅಂಚೆ ಮತಗಳ ಎಣಿಕೆ ನಡೆಸಲಾಗುತ್ತಿದೆ.
ಮಂಡ್ಯ ಸರ್ಕಾರಿ ಮಹಾವಿದ್ಯಾಲಯದಲ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದೆ. ಒಟ್ಟು 18 ಸುತ್ತುಗಳ ಮತ ಎಣಿಕೆ ಕಾರ್ಯ 16 ಕೊಠಡಿಗಳಲ್ಲಿ ನಡೆಯಲಿದೆ. ಮಧ್ಯಾಹ್ನ 11 ಗಂಟೆ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರಕುವ ಸಾಧ್ಯತೆ ಇದೆ.
ಆ.21ರಂದು ನಡೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.58.51 ರಷ್ಟು ಮತದಾನವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ನಟಿ ರಮ್ಯಾ ಮತ್ತು ಜೆಡಿಎಸ್ ನ ಸಿ.ಎಸ್.ಪುಟ್ಟರಾಜು ನಡುವೆ ತೀವ್ರ ಪೈಪೋಟಿ ಎದುರಾಗಿದ್ದು, ಯಾರು ಗೆಲುವು ಸಾಧಿಸುತ್ತಾರೆ? ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ವಿಧಾನಸಭಾ ಕ್ಷೇತ್ರಗಳು : ಮಂಡ್ಯ ಜಿಲ್ಲೆಯ ಲೋಕಸಭಾ ವ್ಯಾಪ್ತಿಗೆ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಗಳು ಸೇರುತ್ತವೆ.
ಬೆಳಗ್ಗೆ 8.35ಕ್ಕೆ ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ರಮ್ಯಾ 1466 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೊದಲ 34 ಬೂತ್ ಗಳ ಮತ ಎಣಿಕೆಯಲ್ಲಿ ರಮ್ಯಾ ಹಿನ್ನಡೆ ಅನುಭವಿಸಿದ್ದರು.
ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರಿಗೆ ಕ್ಷೇತ್ರದಲ್ಲಿ ಭಾರೀ ಹಿನ್ನಡೆ ಉಂಟಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ನಟಿ ರಮ್ಯಾ 6,662 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ.
ಚಿತ್ರನಟಿ ಎಂಬ ಹೆಗ್ಗಳಿಕೆ, ತಂದೆಯ ಸಾವಿನ ಅನುಕಂಪ, ಎಸ್.ಎಂ.ಕೃಷ್ಣ ಮತ್ತು ಅಂಬರೀಶ್ ಅವರ ಬೆಂಬಲ ನಟಿ ರಮ್ಯಾ ಅವರಿಗೆ ವರದಾನವಾಗಿದೆ. ಜೆಡಿಎಸ್ ಅಭ್ಯರ್ಥಿ ವಿರುದ್ಧ ಅವರು ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದು ಯಾವುದೇ ಪ್ರಭಾವ ಬೀರಿದಂತೆ ಕಂಡುಬಂದಿಲ್ಲ. ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸುತ್ತಲೇ ಇದೆ. ಜೆಡಿಎಸ್ ಮತ್ತು ಬಿಜೆಪಿ ಮತಗಳು ಒಟ್ಟಿಗೆ ಸೇರಿದ್ದರೆ, ಸಿ.ಎಸ್.ಪುಟ್ಟರಾಜು ಮುನ್ನಡೆ ಸಾಧಿಸಬೇಕಾಗಿತ್ತು.
ಸಿ.ಎಸ್.ಪುಟ್ಟರಾಜು ಆಕ್ರೋಶ : ಕೇವಲ ಕಾಂಗ್ರೆಸ್ ಶಾಸಕರಿರುವ ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. ಜೆಡಿಎಸ್ ಶಾಸಕರ ಕ್ಷೇತ್ರಗಳ ಮತ ಎಣಿಕೆ ನಿಲ್ಲಿಸಲಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಚುನಾವಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಶಾಸಕರಿರುವ ಕ್ಷೇತ್ರದಲ್ಲಿ ಎರಡು ಸುತ್ತಿನ ಮತ ಎಣಿಕೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕಿ, ಕೇವಲ ಅವರ ಕ್ಷೇತ್ರದ ಶಾಸಕರ ಕ್ಷೇತ್ರದ ಮತ ಎಣಿಕೆ ಮಾಡಿಸುತ್ತಿದೆ ಎಂದು ಪುಟ್ಟರಾಜು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೆಡಿಎಸ್ ಭದ್ರಕೋಟೆ ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ಲಗ್ಗೆ ಇಟ್ಟಿದೆ. ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಹಿನ್ನಡೆ ಅನುಭವಿಸಿದ್ದು, ನಟಿ ರಮ್ಯಾ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
* ಸಮಯ 11.20 : ಅಂತಿಮ ಹಂತದತ್ತ ಮತ ಎಣಿಕೆ, ರಮ್ಯಾಗೆ ಭಾರೀ ಗೆಲುವು
* ಸಮಯ 11.15 : 1459 ಬೂತ್ ಗಳ ಎಣಿಕೆ ಮುಕ್ತಾಯ, 47,084 ಮತಗಳಿಂದ ರಮ್ಯಾ ಮುನ್ನಡೆ
* ಸಮಯ 11.10 : 1,347 ಬೂತ್ ಗಳ ಮತ ಎಣಿಕೆ ಮುಕ್ತಾಯ, 45,831 ಮತಗಳ ಮುನ್ನಡೆ
* ಸಮಯ 11ಗಂಟೆ : 1,290 ಬೂತ್ ಗಳ ಎಣಿಕೆ ಮುಕ್ತಾಯ 40 ಸಾವಿರ ಮತಗಳಿಂದ ಕಾಂಗ್ರೆಸ್ ಮುನ್ನಡೆ
* ಸಮಯ 10.50 : 1,140 ಬೂತ್ ಗಳ ಮತ ಎಣಿಕೆ ಮುಕ್ತಾಯವಾಗಿದ್ದು, 33,943 ಮತಗಳಿಂದ ರಮ್ಯಾ ಮುನ್ನಡೆ
* ಸಮಯ 10.40 : 1,063 ಬೂತ್ ಗಳ ಎಣಿಕೆ ಪೂರ್ಣ 30,375 ಮತಗಳ ಅಂತರದಿಂದ ರಮ್ಯಾ ಮುನ್ನಡೆ
* ಸಮಯ 10.30 : 1,002 ಬೂತ್ ಗಳ ಎಣಿಕೆ ಮುಕ್ತಾಯ, 25,507 ಮತಗಳಿಂದ ರಮ್ಯಾ ಮುನ್ನಡೆ
* ಸಮಯ 10.20 : 875 ಬೂತ್ ಗಳ ಎಣಿಕೆ ಮುಕ್ತಾಯ, 21,911 ಮತಗಳಿಂದ ರಮ್ಯಾ ಮುನ್ನಡೆ
* ಸಮಯ 10. 13 : 21,129 ಮತಗಳಿಂದ ರಮ್ಯಾ ಮುನ್ನಡೆ
* ಸಮಯ 10.06 : 19,492 ಮತಗಳಿಂದ ರಮ್ಯಾ ಮುನ್ನಡೆ, 788 ಬೂತ್ ಗಳ ಮತ ಎಣಿಕೆ ಮುಕ್ತಾಯ
* ಸಮಯ 10 : ನಟಿ ರಮ್ಯಾ 18,374 ಮತಗಳಿಂದ ಮುನ್ನಡೆ, ಗೆಲುವಿನತ್ತ ರಮ್ಯಾ
* ಸಮಯ 10 : 597 ಬೂತ್ ಗಳ ಮತ ಎಣಿಕೆ ಮುಕ್ತಾಯ
* ಸಮಯ 9.45 : 12, 286 ಮತಗಳ ಮುನ್ನಡೆ ಪಡೆದ ರಮ್ಯಾ
* ಸಮಯ 9.35 : 10,765 ಮತಗಳಿಂದ ರಮ್ಯಾ ಮುನ್ನಡೆ ಸಾಧಿಸಿದ್ದಾರೆ.
* ಸಮಯ 9.30 : 94,492 ಮತಗಳನ್ನು ಪಡೆದ ನಟಿ ರಮ್ಯಾ
* ಸಮಯ 9.23 : 10,245 ಮತಗಳಿಂದ ರಮ್ಯಾ ಮುನ್ನಡೆ
* ಸಮಯ 9.13 : 6622 ಮತಗಳಿಂದ ನಟಿ ರಮ್ಯಾ ಮುನ್ನಡೆ
* ಸಮಯ 9.10 : 226 ಬೂತ್ ಗಳ ಮತ ಎಣಿಕೆ ಮುಕ್ತಾಯ
* ಸಮಯ 9.05 ಗಂಟೆ : 204 ಬೂತ್ ಗಳ ಮತ ಎಣಿಕೆ ಮುಕ್ತಾಯ
* ಸಮಯ 9 ಗಂಟೆ : 2704 ಮತಗಳ ಮುನ್ನಡೆ ಸಾಧಿಸಿದ ರಮ್ಯಾ
* ಸಮಯ 8.50 : ಎರಡನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ
* ಸಮಯ 8.45 : 1858 ಮತಗಳ ಮುನ್ನಡೆ ಸಾಧಿಸಿದ ನಟಿ ರಮ್ಯಾ
* ಸಮಯ 8.30 : ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ ವಾಗಿದ್ದು, ರಮ್ಯಾ 1466 ಮತಗಳಿಂದ ರಮ್ಯಾ ಮುನ್ನಡೆ ಸಾಧಿಸಿದ್ದಾರೆ.












Click it and Unblock the Notifications