ಮುಂಬೈ ಅತ್ಯಾಚಾರ ಪ್ರಕರಣ, ಟ್ವೀಟರ್ ನಲ್ಲಿ ಆಕ್ರೋಶ
ಮುಂಬೈ, ಆ.23: ಪತ್ರಿಕಾ ಛಾಯಾಗ್ರಾಹಕಿ ಮೇಲೆ ಗುರುವಾರ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತ ಆರೋಪಿಗಳನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ನಡುವೆ ಸಾಮಾಜಿಕ ಜಾಲ ತಾಣಗಳಲ್ಲಿ ಅತ್ಯಾಚಾರ ಪ್ರಕರಣ ಖಂಡಿಸಿ ಭಾರಿ ಚರ್ಚೆ, ಪ್ರತಿಕ್ರಿಯೆಗಳು ಬಂದಿವೆ.
ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾಮುಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗ್ಗೆಯಷ್ಟೇ ಯುವತಿ ಹಾಗೂ ಸಹದ್ಯೋಗಿಗಳು ನೀಡಿದ ಮಾಹಿತಿಯ ಮೇರೆಗೆ ಐವರು ಶಂಕಿತ ಅತ್ಯಾಚಾರಿಗಳ ರೇಖಾ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಅಲ್ಲದೆ ಆರೋಪಿಗಳ ಪತ್ತೆಗಾಗಿ 18 ಪೊಲೀಸ್ ತಂಡಗಳನ್ನು ರಚಿಸಿದ್ದರು. ಈ ಸಂಬಂಧ ಈವರೆಗೆ ಪೊಲೀಸರು 20 ರಿಂದ 25 ಯುವಕರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೂ ಒಳಪಡಿಸಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ಹೇಳಿದ್ದಾರೆ.
ನಿಯತಕಾಲಿಕೆಯೊಂದರ ಫೋಟೋಗ್ರಾಫರ್ ಆಗಿರುವ 22 ವರ್ಷದ ಯುವತಿ ನಿನ್ನೆ ಸಂಜೆ ತನ್ನ ಸಹೋದ್ಯೋಗಿಯೊಂದಿಗೆ ವರದಿಗಾರಿಕೆಗೆ ತೆರಳಿದ್ದಾಗ ಈ ಘಟನೆ ನಡೆದಿದ್ದು, ಮುಂಬೈ ಲೋಯಲ್ ಪ್ಯಾರೆಲ್ ಪ್ರದೇಶದ ಶಕ್ತಿ ಮಿಲ್ ನಲ್ಲಿ ಯುವತಿಯೊಂದಿಗಿದ್ದ ಸಹೋದ್ಯೋಗಿಯನ್ನು ಕಟ್ಟಿಹಾಕಿ, ಯುವತಿಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಯುವತಿಯ ಸ್ನೇಹಿತರು ಮತ್ತು ಕುಟುಂಬದವರು ಎನ್.ಎಂ ಜೋಶಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಸ್ ಲೋಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ವಿಟ್ಟರ್ ನಲ್ಲಿ ಬಂದ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ ನೋಡಿ..
|
ಜನತೆಯಿಂದ ಅಪಹಾಸ್ಯ
ಟ್ವಿಟ್ಟರ್ ನಲ್ಲಿ ಬಂದ ಪ್ರತಿಕ್ರಿಯೆಗಳ ಸಂಗ್ರಹ
|
ಕಠಿಣ ಶಿಕ್ಷೆ
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹ
|
ಶ್ವೇತಾ ಪಂಡಿತ್ ಟ್ವೀಟ್ಸ್
ಪ್ರಕರಣಗಳು 100 ವರ್ಷದೊಳಗೆ ಇತ್ಯರ್ಥವಾದರೆ ಅದೇ ದೊಡ್ಡ ಸಾಧನೆ
|
ಉಗ್ರತನ
ಉಗ್ರಗಾಮಿಗಳಿಗೂ ಅತ್ಯಾಚಾರಿಗಳಿಗೂ ಏನು ವ್ಯತ್ಯಾಸವಿಲ್ಲ












Click it and Unblock the Notifications