ಲೈಂಗಿಕ ದೌರ್ಜನ್ಯ ಕೇಸಿನಲ್ಲಿ ಸಿಲುಕಿದ ದೇವಮಾನವ

ಜೋಧಪುರದಲ್ಲಿರುವ ಅಸಾರಾಮ್ ಬಾಪು ಅವರ ಆಶ್ರಮದಲ್ಲಿ ನೆಲೆಸಿರುವ 16 ವರ್ಷದ ಯುವತಿ ಈ ರೀತಿ ಆರೋಪ ಹೊರೆಸಿ ನ್ಯಾಯ ದೊರೆಕಿಸಿಕೊಡುವಂತೆ ದೆಹಲಿ ಪೊಲೀಸರ ಮೊರೆ ಹೊಕ್ಕಿದ್ದಾರೆ. ದೆಹಲಿಯ ಕಮಲಾ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಅಸಾರಾಮ್ ಬಾಪು ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿದ್ದು, ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.
ದೆಹಲಿಯಲ್ಲಿ ಖಾಸಗಿ ಬಸ್ ನಲ್ಲಿ 23 ವರ್ಷದ ಯುವತಿ ಅತ್ಯಾಚಾರಕ್ಕೊಳಗಾದ ಘಟನೆ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಸಾರಾಮ್ ಬಾಪು ಅಸಂಬದ್ಧ ಹೇಳಿಕೆ ನೀಡಿದ್ದರು. 'ನನ್ನ ಪ್ರಕಾರ ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ. ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ಅತ್ಯಾಚಾರ ಪ್ರಕರಣದಲ್ಲಿ ಪುರುಷರಷ್ಟೇ ಅತ್ಯಾಚಾರಕ್ಕೊಳಗಾದ ಯುವತಿಯ ಪಾತ್ರವೂ ಇದೆ'ಎಂದು ವಿವಾದಾತ್ಮಕ ಹೇಳಿಕೆಯನ್ನು ಆಸಾರಮ್ ಬಾಪು ನೀಡಿದ್ದರು.
ಆಸಾರಮ್ ಬಾಪು ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಜಾಫರ್ ಪುರ ಕೋರ್ಟ್ ಬಾಪು ವಿರುದ್ಧ ಆರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಕೋರ್ಟಿಗೆ ಹಾಜರಾಗುವಂತೆ ಎರಡು ಬಾರಿ ಸಮನ್ಸ್ ಜಾರಿ ಮಾಡಲಾಗಿದೆ. ಆದರೆ, ಸ್ವಯಂ ಘೋಷಿತ ದೇವಮಾನವ ಬಾಪು ಎಲ್ಲವನ್ನೂ ನಿರ್ಲಕ್ಷಿಸಿದ್ದಾರೆ.
ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಸುದ್ದಿಗ್ರಾಸವಾಗಿದ್ದ ಅಧ್ಯಾತ್ಮಿಕ ಗುರು ಅಸಾರಾಮ್ ಬಾಪು ವಿರುದ್ಧ ಸುಮಾರು 700 ಕೋಟಿ ರು ಹಗರಣದ ಆರೋಪ ಕೂಡಾ ಇದೆ. ಮಧ್ಯ ಪ್ರದೇಶದ ರತ್ಲಾಂನಲ್ಲಿ 200ಎಕರೆ ಭೂಮಿ ಅತಿಕ್ರಮಣದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ. ಕೇಂದ್ರ ಕಾರ್ಪೊರೇಟ್ ವ್ಯವಹಾರಗಳಸಚಿವಾಲಯ ತನಿಖೆ ನಡೆದಿತ್ತು.
ಕೇಂದ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಕ್ರಮ ಆಸ್ತಿ ಗಳಿಕೆ ಹೊಂದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದೂ ಸಂತರ ವಿರುದ್ಧ ಇಂತಹ ಆರೋಪಗಳನ್ನು ಹೊರಿಸಿ ಅವರ ವರ್ಚಸ್ಸಿಗೆ ಕಳಂಕ ಹಚ್ಚಲಾಗುತ್ತಿದೆ. ಆರೋಪಗಳಲ್ಲಿ ಸತ್ಯವಿಲ್ಲವೆಂದು ವ್ಯಕ್ತವಾದಾಗ ಮೌನ ವಹಿಸುತ್ತದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇ ಚರ್ಚ್, ಮಸೀದಿಗಳಿಂದ ನಡೆದಿರುವ ಅತಿಕ್ರಮಣಗಳನ್ನು ಪ್ರಶ್ನಿಸುವುದಿರಲಿ,ಅಂಥ ಅತಿಕ್ರಮಣಗಳ ವಿರುದ್ಧ ನ್ಯಾಯಾಲಯ ಆದೇಶವಿದ್ದರೂ ಅದನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲವೇಕೆ? ಇದರ ಹಿಂದಿರುವ ಹುನ್ನಾರವೇನು ಎಂಬುದಾಗಿ ಅಲ್ಲಿನ ಹಿಂದು ಸಂಘಟನೆಗಳು ಪ್ರಶ್ನಿಸಿವೆ.












Click it and Unblock the Notifications