ಮೇಯರ್ ಚುನಾವಣೆಗೆ ಬಿಬಿಎಂಪಿ ಸಜ್ಜು

ಬೆಂಗಳೂರು, ಆ.21 : ಬಿಬಿಎಂಪಿಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಕೊನೆಗೂ ಚುನಾವಣೆ ನಡೆಯಲಿದೆ. ಮೇಯರ್ ಮತ್ತು ಉಪ ಮೇಯರ್ ಸ್ಥಾನದ ಮೀಸಲಾತಿಯನ್ನು ಅಂತಿಮಗೊಳಿಸಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಮುಂದಿನವಾರ ಚುನಾವಣೆ ನಡೆಯುವುದು ಖಚಿತವಾಗಿದೆ.

ಮಂಗಳವಾರ ಆದೇಶ ಹೊರಡಿಸಿರುವ ನಗರಾಭಿವೃದ್ಧಿ ಇಲಾಖೆ, ಹೈಕೋರ್ಟ್ ಆದೇಶದಂತೆ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮತ್ತು ಉಪ ಮೇಯರ್ ಸ್ಥಾನವನ್ನು ಎಸ್.ಟಿ.ವರ್ಗದ ಮಹಿಳೆಗೆ ಮೀಸಲಾಗಿಟ್ಟು ಆದೇಶ ಹೊರಡಿಸಿದೆ. ಇದರಿಂದ ಚುನಾವಣೆಯ ಹಾದಿ ಸುಗಮವಾಗಿದೆ.

bbmp

ಸರ್ಕಾರದ ಆದೇಶದ ನಂತರ ಪ್ರಾದೇಶಿಕ ಆಯುಕ್ತರು ಚುನಾವಣೆಯ ದಿನಾಂಕ ನಿಗದಿ ಮಾಡಲಿದ್ದಾರೆ. ಸೆಪ್ಟೆಂಬರ್ ಮೊದಲವಾರದಲ್ಲಿ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುವುದು ಬಹುತೇಖ ಖಚಿತವಾಗಿದೆ. (ಬಿಬಿಎಂಪಿ ಮೇಯರ್ ಚುನಾವಣೆಗೆ ಹೈಕೋರ್ಟ್ ಅಸ್ತು)

ಬಿಬಿಎಂಪಿಯ 14ನೇ ಅವಧಿಗೆ ಮೇಯರ್/ಉಪ ಮೇಯರ್ ಸ್ಥಾನಗಳ ಮೀಸಲಾತಿ ನಿಗದಿ ಮಾಡುವಲ್ಲಿ ಸರಿಯಾಗಿ ರೊಟೇಷನ್ ನಿಗದಿ ಮಾಡಿಲ್ಲ. ಇದರಿಂದ ಪರಿಶಿಷ್ಟ ವರ್ಗದ ಮಹಿಳೆಗೆ ಅನ್ಯಾಯ ಆಗಿದೆ ಎನ್ನುವ ದೂರು ಹೈಕೋರ್ಟ್ ನಲ್ಲಿ ದಾಖಲಾಗಿತ್ತು.

ಉಪ ಮೇಯರ್ ಹುದ್ದೆಯ ಆಕಾಂಕ್ಷಿಯಾಗಿರುವ ಕಾಂಗ್ರೆಸ್‌ ಪಕ್ಷದ ಎನ್.ಇಂದಿರಾ ಸಹ ನ್ಯಾಯಾಲಯದ ಮೊರೆ ಹೋಗಿದ್ದರು. ಸದ್ಯ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಿ, ಪಾಲಿಕೆ ಉಪ ಮೇಯರ್ ಹುದ್ದೆ ಎಸ್.ಟಿ.ಮಹಿಳೆಯ ಪಾಲಾಗಿದೆ.

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಪಕ್ಷವಾದರೂ, ಪರಿಶಿಷ್ಟ ವರ್ಗದ ಮಹಿಳಾ ಸದಸ್ಯರು ಪಕ್ಷದಲ್ಲಿಲ್ಲ. ಆದ್ದರಿಂದ ಉಪ ಮೇಯರ್ ಸ್ಥಾನ ಕೈವಶವಾಗುವುದು ನಿಶ್ಚಿತವಾಗಿದೆ. ಮೇಯರ್ ಯಾರು? ಎಂಬುದು ಇನ್ನೂ ನಿಗೂಢವಾಗಿದೆ.

ಲೋಕಸಭೆಯ ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಕಾರಣದಿಂದ ಮೇಯರ್ ಚುನಾವಣೆ ನಡೆಸಲು ನೀತಿ ಸಂಹಿತೆ ಅಡ್ಡಿಯಾಗಿತ್ತು. ಈಗ ಸರ್ಕಾರದಿಂದ ಅಧಿಕೃತವಾಗಿ ಮೀಸಲಾತಿ ಪಟ್ಟಿ ಹೊರಬಿದ್ದಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ಚುನಾವಣೆ ನಡೆಯಲಿದೆ.

ಏಪ್ರಿಲ್ ತಿಂಗಳಿನಲ್ಲಿಯೇ ಮೇಯರ್ ಮತ್ತು ಉಪ ಮೇಯರ್ ಅಧಿಕಾರಾವಧಿ ಮುಕ್ತಾಯಗೊಂಡಿತ್ತು. ಆದರೆ, ಉಸ್ತುವಾರಿ ಮೇಯರ್ ಆಗಿ ಡಿ.ವೆಂಕಟೇಶ್ ಮೂರ್ತಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಚುನಾವಣೆ ನಡೆಯಲಿದ್ದು, ನೂತನ ಮೇಯರ್ ಆಯ್ಕೆಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+