'ಆಹಾರ ಭದ್ರತೆ' ರಾಜೀವ್ ಬರ್ಥಡೇ ಗಿಫ್ಟ್
ನವದೆಹಲಿ, ಆ.20: ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಯುಪಿಎ ಮಹತ್ವದ ಆಹಾರ ಭದ್ರತೆ ಮಸೂದೆ ಕಾಯ್ದೆಯನ್ನು ರಾಜೀವ್ ಗಾಂಧಿ ಅವರ ಹುಟ್ಟುಹಬ್ಬದ ದಿನದಂದೆ ಜಾರಿಗೆ ತಂದಿದೆ. ದೇಶದ ಜನರ ಅಪೌಷ್ಟಿಕತೆ, ಬಡತನ ನಿರ್ಮೂಲನೆ ಹೊಣೆ ಹೊತ್ತಿದ್ದೇವೆ. ಅಗತ್ಯಬಿದ್ದರೆ ಕಾಯ್ದೆಗೆ ತಿದ್ದುಪಡಿ ತರಲು ಅಭ್ಯಂತರವಿಲ್ಲ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಹೇಳಿದ್ದಾರೆ.
ಆಹಾರ ಭದ್ರತೆ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಕಾಂಗ್ರೆಸ್ ಗೆ ಅದರ ಲಾಭ ಸಿಗಬೇಕಾದರೆ ಮಸೂದೆಗೆ ಹೆಚ್ಚಿನ ಬೆಂಬಲ ದೊರೆಯಬೇಕಾದ ಅವಶ್ಯಕತೆಯಿದೆ. ಹಾಗಾಗಿ ಸರ್ಕಾರ ಕೆಲವೊಂದು ತಿದ್ದುಪಡಿಗಳನ್ನು ಮಾಡಲು ಒಪ್ಪಿದೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನೋತ್ಸವದಂದು ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಆಹಾರ ಭದ್ರತೆ ಯೋಜನೆ ಜಾರಿಗೆ ತರುವ ಮೂಲಕ ಜನರ ಭಾವನೆಗಳ ಜತೆ ಆಟವಾಡುತ್ತಿದ್ದು, ಕುಟುಂಬ ರಾಜಕೀಯದ ವಾಸನೆ ದಟ್ಟವಾಗಿದೆ ಎಂಬ ಕೂಗೆದ್ದಿದೆ. [ಚಿತ್ರಗಳಲ್ಲಿ : ರಾಜೀವ್ ಗಾಂಧಿ ನಮನ ]
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಈ ಹಿಂದೆ ಕಾಯ್ದೆ ಕುರಿತಂತೆ ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖ್ಯಮಂತ್ರಿಗಳ ಸಭೆ ನಡೆದ ವೇಳೆ ಬಿಜೆಪಿ ಭಾರಿ ಪ್ರತಿಭಟನೆ ನಡೆಸಿತ್ತು. ಮಂಗಳವಾರ ಕೂಡಾ ಯುಪಿಎ ಸರ್ಕಾರದ ಆರ್ಥಿಕ ನೀತಿ, ಬೆಲೆ ಏರಿಕೆ, ಆಹಾರ ಭದ್ರತಾ ಕಾಯ್ದೆ ಲೋಪ ದೋಷಗಳನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ನವದೆಹಲಿಯ #10 ಜನಪಥ್ ನಿವಾಸದ ಎದುರು ಭಾರಿ ಪ್ರತಿಭಟನೆ ನಡೆಸಲಾಗಿದೆ.
ದೆಹಲಿಯಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಆಹಾರ ಸಚಿವ ಕೆವಿ ಥಾಮಸ್ ಅವರ ಸಮ್ಮುಖದಲ್ಲಿ ಆಹಾರ ಭದ್ರತಾ ಯೋಜನೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚಾಲನೆ ನೀಡಿದ್ದಾರೆ. ಆಹಾರ ಭದ್ರತಾ ಕಾಯ್ದೆ ವಿವರಗಳೇನು? ಮುಂದೆ ಓದಿ...

ಮಹತ್ವದ ಸಭೆ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಈ ಹಿಂದೆ ಕಾಯ್ದೆ ಕುರಿತಂತೆ ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖ್ಯಮಂತ್ರಿಗಳು ಹಾಗೂ ಇನ್ನಿತರ ಮುಖಂಡರ ಜತೆ ಮಹತ್ವದ ಸಭೆ ನಡೆಸಲಾಗಿತ್ತ್ತು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್, ಉಪಾಧ್ಯಕ್ಷ ರಾಹುಲ್ ಗಾಂಧಿ, ಆಹಾರ ಸಚಿವ ಕೆವಿ ಥಾಮಸ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಪ್ರತಿಭಟನೆ
ಯುಪಿಎ ಸರ್ಕಾರದ ಆರ್ಥಿಕ ನೀತಿ, ಬೆಲೆ ಏರಿಕೆ, ಆಹಾರ ಭದ್ರತಾ ಕಾಯ್ದೆ ಲೋಪ ದೋಷಗಳನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ದೆಹಲಿಯ ತಲ್ಕೋಟಾರ ಮೈದಾನದ ಎದುರು ಪ್ರತಿಭಟನೆ ನಡೆಸಿದ್ದಾರೆ.

ಅಧಿಕ ಜನಕ್ಕೆ ಪ್ರಯೋಜನ
ದೇಶದ ಶೇ 67ರಷ್ಟು ಅಥವಾ 82 ಕೋಟಿಗೂ ಅಧಿಕ ಜನಕ್ಕೆ ಆಹಾರ ಭದ್ರತಾ ಕಾಯ್ದೆಯ ಪ್ರಯೋಜನ ತಲುಪಲಿದೆ. ಕುಟುಂಬದ ಪ್ರತಿ ಸದಸ್ಯನಿಗೆ ಮಾಸಿಕ 1 ರು ದರದಲ್ಲಿ 5 ಕೆ.ಜಿ ಅಕ್ಕಿ, 3 ರು ದರದಲ್ಲಿ ಗೋಧಿ ಹಾಗೂ 2 ರು ದರದಲ್ಲಿ ಜೋಳವನ್ನು ಸಾರ್ವಜನಿಕ ಪಡಿತರ ವಿತರಣೆಯ ಅಡಿಯಲ್ಲಿ ನೀಡಲು ಯೋಜನೆ ಸಹಕಾರಿಯಾಗಲಿದೆ.

ಎಲ್ಲೆಲ್ಲಿ ಜಾರಿಯಲ್ಲಿದೆ?
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಛತ್ತೀಸ್ ಗಢ, ಎಐಎಡಿಎಂಕೆ ಆಡಳಿತದ ತಮಿಳುನಾಡು, ಕಾಂಗ್ರೆಸ್ ಆಡಳಿತದ ಆಂಧ್ರಪ್ರದೇಶ, ಕೇರಳದಲ್ಲಿ 1 ರು ದರದಲ್ಲಿ ಕೆಜಿ ಅಕ್ಕಿಯನು ವಿತರಿಸಲಾಗುತ್ತಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಯೋಜನೆ ಈಗಾಗಲೇ ಆರಂಭಗೊಂಡಿದೆ.

ಬಿಜೆಪಿ ಭಾರಿ ಪ್ರತಿಭಟನೆ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಪತಿ ದಿವಂಗತ ರಾಜೀವ್ ಗಾಂಧಿ ಅವರ ಹುಟ್ಟುಹಬ್ಬದಂದು ಯೋಜನೆ ಜಾರಿಗೊಳಿಸಿರುವುದಕ್ಕೆ ಬಿಜೆಪಿ ಬೆಂಬಲಿತ ಕೆಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಇನ್ನೆಲ್ಲಿದೆ ಈ ಸೌಲಭ್ಯ
ದೆಹಲಿ ನಂತರ ಉತ್ತರಾಖಂಡ್, ಹರ್ಯಾಣ ರಾಜ್ಯಗಳಲ್ಲಿ ಮೊದಲಿಗೆ ಈ ಕಾಯ್ದೆ ಜಾರಿಗೆ ಬರಲಿದೆ. ದೆಹಲಿಯ 1.68 ಕೋಟಿ ಜನರ ಪೈಕಿ 73.5 ಲಕ್ಷ ಜನ ಈ ಸೌಲಭ್ಯ ಸಿಗಲಿದೆ. ಮೊದಲ ಹಂತದಲ್ಲಿ ಸುಮಾರು 5.10 ಲಕ್ಷ ಕುಟುಂಬಗಳನ್ನು ಈ ಯೋಜನೆ ತಲುಪಲಿದೆ

ಸೋನಿಯಾಗೆ ಹಾರೈಕೆ
ನವದೆಹಲಿ: ಆಹಾರ ಭದ್ರತಾ ಕಾಯ್ದೆ ಕಾರ್ಡ್ ಪಡೆದ ವೃದ್ಧೆಯೊಬ್ಬರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಹರಿಸುತ್ತಿದ್ದಾರೆ.

ಡೆಹ್ರಾಡೂನ್ ನಲ್ಲಿ
ಡೆಹ್ರಾಡೂನ್ ನಲ್ಲಿ ಆಹಾರ ಭದ್ರತಾ ಕಾಯ್ದೆ ಯೋಜನೆಯ ಫಲಾನುಭವಿಗಳು ಆಹಾರ ಧಾನ್ಯ ಪಡೆದು ಹಿಂತಿರುಗುತ್ತಿದ್ದಾರೆ.












Click it and Unblock the Notifications