ಅರುಣ್ ಜೇಟ್ಲಿ ಆಸ್ತಿ ಬಗ್ಗೆ ದಿಗ್ವಿಜಯ್ ಸಿಂಗ್ ಟ್ವೀಟ್!

Digvijaya Singh
ನವದೆಹಲಿ, ಆ.20 : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾರ್ಬಟ್ ವದ್ರಾ ವಿರುದ್ಧ ತನಿಖೆಗೆ ಬಿಜೆಪಿ ಒತ್ತಾಯಿಸುತ್ತಿರುವಾಗ, ಕಾಂಗ್ರೆಸ್ ಪ್ರಧಾನ ಕಾರ್ಯರ್ಶಿ, ದಿಗ್ವಿಜಯ್ ಸಿಂಗ್ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಆಸ್ತಿಯ ಕುರಿತು ಪ್ರಶ್ನಿಸಿ ವಿವಾದವೆಬ್ಬಿಸಿದ್ದಾರೆ.

ಅರುಣ್ ಜೇಟ್ಲಿ ವಿರುದ್ಧ ಟ್ವೀಟರ್ ನಲ್ಲಿ ಸಮರ ಸಾರಿರುವ ದಿಗ್ವಿಜಯ್ ಸಿಂಗ್, ಎಲ್ಲಾ ಸಂಸದರಿಗಿಂತ ಅರುಣ್ ಜೇಟ್ಲಿ ಅವರ ಆಸ್ತಿ ಹೇಗೆ ಹೆಚ್ಚಾಯಿತು? ಎಂದು ಅವರು ಉತ್ತರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ತಮ್ಮ ಬ್ಲಾಗ್ ನಲ್ಲಿ ಬರೆದ ಲೇಖನವನ್ನು ಜೊತೆಗೆ ಸೇರಿಸಿದ್ದಾರೆ.

ಈ ಮೂಲಕ ರಾರ್ಬಟ್ ವದ್ರಾ ವಿರುದ್ಧದ ಹಗರಣ ಕೆಣಕಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಆಗುವಾಗ ಅರುಣ್ ಜೇಟ್ಲಿ ನೀಡಿದ ಆಸ್ತಿಯ ವಿವರಗಳನ್ನು ದಿಗ್ವಿಜಯ್ ಸಿಂಗ್ ಬ್ಲಾಗ್ ನಲ್ಲಿರುವ ಲೇಖನ ಒಳಗೊಂಡಿದೆ.

ಸಂಸತ್ ಅಧಿವೇಶನದಲ್ಲಿ ರಾರ್ಬಟ್ ವದ್ರಾ ಅವರ ಭ್ರಷ್ಟಾಚಾರದ ಹಗರಣಗಳ ಕುರಿತು ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ ಆದರೆ, ಬಿಜೆಪಿ ನಾಯಕರ ಆಸ್ತಿ ವಿವರವನ್ನು ಕೆಣಕುವ ಮೂಲಕ ದಿಗ್ವಿಜಯ್ ಸಿಂಗ್ ಹೊಸ ವಿವಾದ ಹುಟ್ಟುಹಾಕಿದ್ದಾರೆ.

Growth of Arun Jaitley's assets highest among the MPs. Would Arun react? ಎಂದು ತಮ್ಮ ಲೇಖನದ ವಿಳಾಸ ಕೊಟ್ಟು ದಿಗ್ವಿಜಯ್ ಸಿಂಗ್ ಅರುಣ್ ಜೇಟ್ಲಿ ಅವರನ್ನು ಪ್ರಶ್ನಿಸಿದ್ದಾರೆ. (ದಿಗ್ವಿಜಯ್ ಸಿಂಗ್ ಲೇಖನ)

ದಿಗ್ವಿಜಯ್ ಸಿಂಗ್ ಟ್ವೀಟ್ ಗಳನ್ನು ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+