ಬೆಳಗಾವಿ: ವಿವಾಹಿತೆ ರೇಪ್-ಮರ್ಡರ್, ಮೂವರ ಸೆರೆ

Belgaum woman Bheemavva gangrape-murder- 3 arrested
ಬೆಳಗಾವಿ, ಆಗಸ್ಟ್ 20: ಜಿಲ್ಲೆಯ ರಾಮದುರ್ಗದ ತಾಲೂಕಿನ ಬೋಸಬಾಳ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುರುಳರು ಆಕೆಯನ್ನು ಬರ್ಬವಾಗಿ ಹತ್ಯೆ ಮಾಡಿದ ಘಟನೆಯ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಕುಕೃತ್ಯದಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಬಸಪ್ಪ ದುರ್ಗಪ್ಪ ಮಾದಾರ (22), ಯಮನಪ್ಪ ಹನುಮಂತ ಮಾದಾರ (22) ಮತ್ತು ದುರ್ಗಪ್ಪ ಕಾರಪ್ಪ ಮಾದಾರ (28) ಬಂಧಿತ ಆರೋಪಿಗಳು. ಈ ತ್ರಿಮೂರ್ತಿಗಳು ಮಹಿಳೆಯನ್ನು ಅಪಹರಿಸಿ, ತಮ್ಮೊಂದಿಗೆ ಅನೈತಿಕ ಸಂಬಂಧ ಹೊಂದುವಂತೆ ಕೇಳಿದ್ದಾರೆ. ಮಹಿಳೆ ಅದಕ್ಕೆ ನಿರಾಕರಿಸಿದಾಗ ಈ ಕುಕೃತ್ಯವೆಸಗಿದ್ದಾರೆ.

ದುರ್ದೈವಿ ಭೀಮವ್ವ ಅಜ್ಜಪ್ಪ ತ್ಯಾಪಿ (22) ಭಾನುವಾರ ರಾತ್ರಿ ಬಹಿರ್ದೆಸೆಗೆಂದು ಹೊರಗೆ ಬಂದಾಗ ಮೂವರು ಆಕೆಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದರು.

ನಂತರ ಮೃತದೇಹವನ್ನು ಗ್ರಾಮದ ಮುಂದಿರುವ ಕಬ್ಬಿನ ಗದ್ದೆಯಲ್ಲಿ ಎಸೆದು ಹೋಗಿದ್ದರು. ಮಹಿಳೆಯ ಕಟುಂಬದವರು ರಾತ್ರಿಯಿಡೀ ಗ್ರಾಮದಲ್ಲಿ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ. ಸೋಮವಾರ ಬೆಳಗ್ಗೆ ಶವ ಪತ್ತೆಯಾಗಿತ್ತು. ಕಡಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಗುಪ್ತ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಭೀಮವ್ವ ತ್ಯಾಪಿ ಸವದತ್ತಿ ತಾಲೂಕಿನ ಚಿತಾದಳ ಗ್ರಾಮದವರು. ಅಜ್ಜಪ್ಪ ಜತೆ ಇವರ ವಿವಾಹ ನೆರವೇರಿತ್ತು. ಅಜ್ಜಪ್ಪ ಮನೆಯಲ್ಲಿ ಇಲ್ಲದಿದ್ದಾಗ ಈ ಕೃತ್ಯ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+