ಕರಾಟೆ ಚಾಂಪಿಯನ್ ಶಿಪ್, ಚಿನ್ನ ಗೆದ್ದ ಕನ್ನಡಿಗರು
ಬೆಂಗಳೂರು, ಆ.14 : 4 ನೇ ಜೆಕೈ ಜ್ಯೂನಿಯರ್ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ಸ್ಪರ್ಧಿಗಳು ಪದಕ ಬೇಟೆ ಆಡಿದ್ದಾರೆ. ರಾಯಪುರದಲ್ಲಿ ನಡೆದ ಚಾಂಪಿಯನ್ ಶಿಪ್ ನಲ್ಲಿ 10 ಚಿನ್ನ ಮತ್ತು 1 ಬೆಳ್ಳಿ ಮತ್ತು ಕಂಚಿನ ಪದಕವನ್ನು ತಂಡ ಗಳಿಸಿದೆ.
ಆಗಸ್ಟ್ 9ರಿಂದ 11ರವರೆಗೆ ಜೆಕೈ ಕರಾಟೆ ನ್ಯಾಷನಲ್ ಚಾಂಪಿಯನ್ ಶಿಪ್ ಛತ್ತಿಸ್ ಗಢ ರಾಜ್ಯದ ರಾಯಪುರಲ್ಲಿ ನಡೆಯಿತು. ದೇಶದ 500 ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕದ 6 ಮಂದಿ ಸ್ಪರ್ಧಾಳುಗಳು, ಇಬ್ಬರು ತರಬೇತುದಾರರ ತಂಡ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡಿತ್ತು. ವೈಯಕ್ತಿಕ ಮತ್ತು ತಂಡದ ವಿಭಾಗದಲ್ಲಿ ರಾಜ್ಯದ ಸ್ಪರ್ಧಿಗಳು 10 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕ ಪಡೆದಿದ್ದಾರೆ.
ಸ್ಪರ್ಧಾಳುಗಳು ಮತ್ತು ಪಡೆದ ಪದಕಗಳು
* ಶೃತಿ ಬಾಮಿಡ್ ಪಟ್ - 3 ಚಿನ್ನ
* ಪೃಥ್ವಿ ಬಿ.ನಾಯ್ಡು - 2 ಚಿನ್ನ
* ಎಚ್. ವಿದ್ಯಾಸಾಗರ್ - 2 ಚಿನ್ನ, 1 ಕಂಚು
* ರಾಜ ಕುಮಾರ್ ಎಚ್.ಟಿ - 1 ಚಿನ್ನ, 1 ಬೆಳ್ಳಿ
* ಶ್ರೀರಾಮ್ ಸುಂದರ್ ರಾಜನ್ - 1 ಚಿನ್ನ
* ರಾಜೇಶ್ ಆರ್.ಕೆ. - 1 ಚಿನ್ನ
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications