ಸಿಎಂ ಸಿದ್ದರಾಮಯ್ಯ ಶತದಿನೋತ್ಸವ ಪೋಸ್ಟ್ ಪೋನ್

ಯಾಕೆ? ಇದು ನಿಜಕ್ಕೂ ಸಂಭ್ರಮಿಸುವ ವಿಚಾರವಲ್ಲವೇ ಎಂದು ಕೇಳಿದರೆ ಅಂಥದ್ದೇನೂ ಇಲ್ಲ. ರಾಜ್ಯದಲ್ಲಿ ಕೆಲವೆಡೆ (ಲೋಕಸಭಾ) ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಶತದಿನೋತ್ಸವದ ಆಚರಣೆ ಪೋಸ್ಟ್ ಪೋನ್ ಆಗಿದೆ. ಸಿದ್ದರಾಮಯ್ಯ ಅವರು ಮೇ 13ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಉಪಚುನಾವಣೆ ಆಗಸ್ಟ್ 25ಕ್ಕೆ ನಿಗದಿಯಾಗಿದೆ. ಹಾಗಾಗಿ ಚುನಾವಣೆ ಮುಗಿದ ಬಳಿಕವಷ್ಟೇ ಸಂಭ್ರಮಾಚರಣೆ ಎನ್ನುತ್ತಿದೆ ಕಾಂಗ್ರೆಸ್ ಮೂಲಗಳು.
ಇದೇ ವಿಷಯವಾಗಿ ತಮ್ಮ ಸಂಪುಟದ ಸಹೋದ್ಯೋಗಿಗಳನ್ನು ಎಚ್ಚರಿಸಿರುವ ಸಿಎಂ ಸಿದ್ದು ತಮ್ಮ ತಮ್ಮ ಇಲಾಖೆಗಳ ವತಿಯಿಂದ ಯಾವುದೇ ಜಾಹೀರಾತುಗಳನ್ನು ಹೊರಡಿಸಿ, ರಗಳೆ ಮಾಡಿಕೊಳ್ಳಬೇಡಿ ಎಂದಿದ್ದಾರೆ.
ಈ ಮಧ್ಯೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹುಟ್ಟುಹಬ್ಬ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಜನ್ಮದಿನವೂ ಆಗಸ್ಟ್ 20ರಂದು ಇರುವುದರಿಂದ ಅಂದೇ ಶತದಿನೋತ್ಸವ ಆಚರಿಸಿಕೊಳ್ಳುವ ಇಚ್ಛೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದರು. ಆದರೆ ...
ಇದೀಗ ಆಗಸ್ಟ್ ಅಂತ್ಯಕ್ಕೆ ಶತದಿನೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವ ಬಗ್ಗೆ ರಾಜ್ಯ ಕಾಂಗ್ರೆಸ್ ಆಲೋಚಿಸುತ್ತಿದೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications