ಪ್ರಭಾಕರ ಅವರ ಸಾವು ಆಕಸ್ಮಿಕವಲ್ಲ, ಕೊಲೆ

ಆ.10ರ ಶನಿವಾರ ಶಿಕಾರಿಗೆ ತೆರಳಿದ ಸಂದರ್ಭದಲ್ಲಿ ಪ್ರಭಾಕರ ಆಚಾರ್ಯ ಮೃತಪಟ್ಟಿದ್ದರು. ಶಿಕಾರಿಗೆ ಜೊತೆಯಲ್ಲಿ ಹೋಗಿದ್ದ ಮಿತ್ರರು, ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು, ಪ್ರಭಾಕರ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಪ್ರಭಾಕರ ಅವರ ಸಹೋದರ, ಸುಂದರ ಪೂಜಾರಿ, ನಾಗರಾಜ, ಸಂತೋಷ ಪೂಜಾರಿ ಹಾಗೂ ನಾಗರಾಜ ಪೂಜಾರಿ ಪ್ರಭಾಕರ ಅವರನ್ನು ಶಿಕಾರಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದಿ ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಅನ್ವಯ ಪೊಲೀಸರು, ಶಿಕಾರಿಗೆ ಹೋಗಿದ್ದ ನೂಜಾಡಿಯ ಸುಂದರ ಪೂಜಾರಿ, ನಾಗರಾಜ ಯಾನೆ ರಾಜು ಪೂಜಾರಿ, ಸಂತೋಷ ಪೂಜಾರಿ ಹಾಗೂ ನಾಗರಾಜ ಪೂಜಾರಿ ಅವರನ್ನು ಆ. 12ರಂದು ಬಂಧಿಸಿದ್ದರು. ಆರೋಪಿಗಳಿಗೆ ಆ. 24ರವರೆಗೆ ನ್ಯಾಯಂಗ ಬಂಧನ ವಿಧಿಸಲಾಗಿದೆ.
ಮಂಗಳವಾರ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಕೊಲ್ಲೂರು ಪೊಲೀಸರು ಹೇಳಿಕೆ ನೀಡಿದ್ದು, ಪ್ರಭಾಕರ ಅವರನ್ನು ಕೊಲೆ ಮಾಡಲಾಗಿದೆ. ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ ಅವರು ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೊಲೆ ಮಾಡಲು ಬಳಸಿರುವ ಬಂದೂಕು ನಾಗರಾಜ ಪೂಜಾರಿ ಅವರ ಮನೆಯಲ್ಲಿ ದೊರಕಿದ್ದು, ಪೊಲೀಸರು ಅದನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಪ್ರಭಾಕರ ಅವರ ಸಾವಿನ ಪ್ರಕರಣ ಬಗೆ ಹರಿದಂತಾಗಿದೆ. ಆದರೆ, ಸ್ನೇಹಿತರು ಏಕೆ ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications