ಮೆಟ್ರೋ ಕಲಾ ಕೇಂದ್ರದಲ್ಲಿ ಆ.15ರ ಕಾರ್ಯಕ್ರಮ

ನಮ್ಮ ಮೆಟ್ರೋದ ಹಿಂದುಗಡೆ ಇರುವ ಮಾಣೇಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ವಿಶೇಷ ಕಾರ್ಯಕ್ರಮವನ್ನು ಮುಗಿಸಿಕೊಂಡು ಮೆಟ್ರೋದ ರಂಗೋಲಿ ಕಲಾ ಕೇಂದ್ರದಲ್ಲಿ, ಚರಕ ಬಳಸಿ ನೇಯುವುದು, ಉಪ್ಪಿನ ಸತ್ಯಾಗ್ರಹ ಕುರಿತ ಕಾರ್ಯಕ್ರಮ, ಮಣ್ಣಿನ ಕಲಾಕೃತಿ ರಚನೆ, ಸಂಗೀತ ಸಂಜೆ ಮುಂತಾದ ಕಾರ್ಯಕ್ರಮದ ಆನಂದ ಪಡೆಯಬಹುದು.
ರಂಗೋಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದ ವಿವರಗಳು
* ಚರಕದಿಂದ ನೂಲನ್ನು ತೆಗೆಯುವ ಕಾರ್ಯಾಗಾರ. ಬೆಳಕು ಮತ್ತು ವಿಸ್ಮಯದಲ್ಲಿ ಕಾರ್ಯಾಗಾರ ನಡೆಯಲಿದೆ. ಜೊತೆಗೆ ಖಾದಿ ವಸ್ತ್ರಗಳ ಪ್ರದರ್ಶನವೂ ಇರಲಿದೆ.
* ಮಧ್ಯಾಹ್ನ 12ರಿಂದ 5ರವರೆಗೆ 'ಬಯಲು'ದಲ್ಲಿ ಮಕ್ಕಳ ಬ್ಯಾಂಡ್ ಕಾರ್ಯಕ್ರಮ.
* ಸಂಜೆ 6ರಿಂದ 7ರವರೆಗೆ ರಂಗಶಾಲೆಯಲ್ಲಿ 'ಕಾವ್ಯ ಸಂಜೆ 3' ಕಾವ್ಯವಾಚನ ಕಾರ್ಯಕ್ರಮ. ಕವಯಿತ್ರಿ ಮಮತಾ ಸಾಗರ್ ಅವರು 'ಕಾವ್ಯದ ಮೂಲಕ ಸ್ವಾತಂತ್ರ್ಯ' ಎಂಬ ವಿಶಿಷ್ಟ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದರಲ್ಲಿ ಕನ್ನಡ ಸೇರಿದಂತೆ 15ಕ್ಕೂ ಹೆಚ್ಚು ವಿಭಿನ್ನ ಭಾಷೆಗಳಲ್ಲಿ ಬರೆದಿರುವ ಕವನಗಳ ವಾಚನ ನಡೆಯಲಿದೆ. ಜೊತೆಗೆ, ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಮಾಡಿದ ಅನುವಾದದ ವಾಚನವೂ ನಡೆಯಲಿದೆ.
* ಕುಬೇಂದಿರನ್ ಮತ್ತು ತಂಡ(ಚಿತ್ರಕಲಾ ಪರಿಷತ್ ಶಾಲೆಯ ವಿದ್ಯಾರ್ಥಿಗಳು)ದಿಂದ 'ಚಿಲಿಪಿಲಿ'ಯಲ್ಲಿ ಉಪ್ಪಿನ ಸತ್ಯಾಗ್ರಮ ಮತ್ತು ಮರಳಿನ ಶಿಲ್ಪ ರಚನೆ.
* 'ಚಿಲಿಪಿಲಿ'ಯಲ್ಲಿ ಮಕ್ಕಳಿಗಾಗಿ ಸಂಜೆ 4ರಿಂದ 6ರವರೆಗೆ ವರ್ಕ್ ಶಾಪ್.
ಸ್ವಾತಂತ್ರ್ಯ ದಿನೋತ್ಸವದ ನಂತರ ಆಗಸ್ಟ್ ತಿಂಗಳು ಮತ್ತು ಸೆಪ್ಟೆಂಬರ್ ನಲ್ಲಿ ನಮ್ಮ ಮೆಟ್ರೋದ ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್ 10ರಂದು ಆರಂಭವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆಪ್ಟೆಂಬರ್ 10ರವರೆಗೆ ನಡೆಯಲಿವೆ. ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ : http://rangoli.bmrc.co.in/ ; ದೂರವಾಣಿ : 080-22969265.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications