ತಿರುಪತಿಯನ್ನು ತಮಿಳುನಾಡಿಗೆ ಸೇರಿಸಬೇಕಂತೆ!

ಶನಿವಾರ ಚೆನ್ನೈನಲ್ಲಿ ಮಾತನಾಡಿರುವ ರಾಮದಾಸ್, ಬಹುತೇಕ ತಮಿಳರು ನೆಲೆಸಿರುವ ತಿರುಪತಿ, ತಿರುಕುಲಾಷ್ಟಿ, ಚಿತ್ತೂರು, ಪುತ್ತೂರು ಸೇರಿದಂತೆ ಎಂಟು ವಲಯಗಳನ್ನು ತಮಿಳುನಾಡಿಗೆ ಸೇರಿಸಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
1956ರಲ್ಲಿ ಭಾಷಾವಾರು ರಾಜ್ಯ ರಚನೆಯಾದ ನಂತರ ತಮಿಳುನಾಡಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು ಇದು ಒಳ್ಳೆಯ ಸಮಯವಾಗಿದ್ದು, ತಿರುಪತಿಯನ್ನು ತಮಿಳುನಾಡಿಗೆ ಸೇರಿಸಬೇಕು ಎಂದು ಹೇಳಿದ್ದಾರೆ.
ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಸುಮಾರು 70,000 ಚ.ಕಿ.ಮೀ ಪ್ರದೇಶ ನೆರೆಯ ರಾಜ್ಯಗಳಿಗೆ ಸೇರ್ಪಡೆಗೊಂಡು ತಮಿಳುನಾಡು ರಾಜ್ಯಕ್ಕೆ ಅನ್ಯಾಯವಾಗಿದೆ. ಇದರಲ್ಲಿ 32,000 ಚ.ಕಿ.ಮೀ ಪ್ರದೇಶ ಆಂಧ್ರಪ್ರದೇಶಕ್ಕೆ ಸೇರಿದೆ ಎಂದು ರಾಮದಾಸ್ ವಿಶ್ಲೇಷಣೆ ಮಾಡಿದ್ದಾರೆ.
ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಒಂದಾಗಬೇಕು. ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾವನೆ ಮಂಡಿಸಿ, ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎಂದು ಕರೆ ನೀಡಿದ್ದಾರೆ.
ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಅನುಮತಿ ನೀಡಿದ ನಂತರ ಆಂಧ್ರಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ತಮಿಳುನಾಡಿನ ರಾಮದಾಸ್ ಅವರ ವಿದಾದಾತ್ಮಕ ಹೇಳಿಕೆಯಿಂದಾಗಿ ಮತ್ತಷ್ಟು ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications