ವಿಭಿನ್ನವಾಗಿ 67ನೇ ಸ್ವಾತಂತ್ರ್ಯ ದಿನ ಆಚರಿಸಿ
ಬೆಂಗಳೂರು, ಆ. 10 : ಮೊಬೈಲ್ ಮತ್ತು ಇಂಟರ್ನೆಟ್ ಕ್ರಾಂತಿ ಆರಂಭವಾಗುವ ಮೊದಲು ಪೋಸ್ಟ್ ಕಾರ್ಡ್ ಮತ್ತು ಅದಕ್ಕಿಂತ ದೊಡ್ಡ ಗಾತ್ರದ ಗ್ರೀಟಿಂಗ್ ಕಾರ್ಡ್ ಗಳ ಮುಖಾಂತರ ಸ್ನೇಹಿತರು, ಬಂಧುಗಳ ನಡುವೆ ಶುಭಾಶಯ ವಿನಿಮಯ ನಡೆಯುತ್ತಿದ್ದವು. ಆ ಕಾಲ ಮುಗಿದು, ಈಗ ಮೊಬೈಲ್ ನಲ್ಲಿಯೇ ಇಂಟರ್ನೆಟ್ ಇಡೀ ಜಗತ್ತಿನ್ನು ಮುಷ್ಠಿಯಲ್ಲಿ ತಂದಿಟ್ಟಿದೆ.
ಹೊಸವರ್ಷ, ಸಂಕ್ರಾಂತಿ, ಹೋಳಿ, ಯುಗಾದಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ಕ್ರಿಸ್ಮಸ್ ಹಬ್ಬಗಳಲ್ಲಿ ಶುಭಾಶಯ ವಿನಿಮಯಗಳು ಎಸ್ಎಂಎಸ್ ಮತ್ತು ಈ-ಗ್ರೀಟಿಂಗ್ ಮುಖಾಂತರ ನಡೆಯುತ್ತಿವೆ. ಈಗ 67ನೇ ಭಾರತದ ಸ್ವಾತಂತ್ರ್ಯೋತ್ಸವ ದಿನಾಚರಣೆಯೂ ಹತ್ತಿರ ಬಂದಿದೆ. ಈ ಬಾರಿ ವಿಭಿನ್ನಬಗೆಯಿಂದ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಿ.
ಈ ಸುಸಂದರ್ಭದಲ್ಲಿ ನಮಗೆ ಪರಿಚಯವಿರುವ ಸ್ನೇಹಿತರು, ಬಂಧುಗಳು ಮಾತ್ರವಲ್ಲ, ಇಡೀ ವಿಶ್ವದ ಜನತೆಯನ್ನು ತಲುಪಿ ಅವರನ್ನು ಕೂಡ ನಮ್ಮ ಬಂಧುಮಿತ್ರರನ್ನಾಗಿಸುವ ಅವಕಾಶ ಕೂಡಿಬಂದಿದೆ. ಇಂಡಿಯಾ ವಿಡಿಯೋ ಸಂಸ್ಥೆ ನಿಮ್ಮ ನೆಚ್ಚಿನ ಭಾರತದ ನಂ.1 ವೆಬ್ ಸೈಟ್ ಒನ್ಇಂಡಿಯಾ ಜೊತೆಗೂಡಿ ದೇಶಪ್ರೇಮವನ್ನು ಸಾರುವ, ದೇಶದ ಬಗ್ಗೆ ಹೇಳುವ ವಿಶಿಷ್ಟ ಬಗೆಯ ವಿಡಿಯೋಗಳನ್ನು ರೂಪಿಸಿದೆ.

ಇಲ್ಲಿ 70 ಸಾವಿರಕ್ಕೂ ಹೆಚ್ಚು ವಿಶಿಷ್ಟ ಬಗೆಯ ವಿಡಿಯೋಗಳಿವೆ. ಕರ್ಸರ್ ಅನ್ನು ಈ ಪುಟದಲ್ಲಿ ನೀಡಲಾಗಿರುವ ಭಾರತದ ತ್ರಿವರ್ಣ ಧ್ವಜದ ಮೇಲೆ ಇಟ್ಟರೆ ವೈವಿಧ್ಯಮಯ ವಿಡಿಯೋಗಳು ಕಾಣಿಸಿಕೊಳ್ಳುತ್ತಿರುತ್ತವೆ. ಈ ವಿಡಿಯೋಗಳು ಅನೇಕತೆಯಲ್ಲಿ ಏಕತೆಯನ್ನು ತೋರಿಸುವ ನಮ್ಮ ಭಾರತದ ಶ್ರೀಮಂತ ಸಂಸ್ಕೃತಿಯನ್ನು, ಕಲಾವೈಭವವನ್ನು, ಪರಂಪರೆಯನ್ನು ತೆರೆದಿಟ್ಟಿವೆ.
ನಮ್ಮ ಓದುಗರಲ್ಲಿ ಕಳಿಕಳಿ : ನಿಮಗೆ ಪರಿಚಯವಿರುವ ಎಲ್ಲ ಸ್ನೇಹಿತರಿಗೆ, ಬಂಧುಬಾಂಧವರಿಗೆ ಈ ಪುಟವನ್ನು ಕಳುಹಿಸಿರಿ. ಅವರು ತಮಗೆ ಪರಿಚಯವಿರುವ ದೇಶಪ್ರೇಮಿಗಳಿಗೆ ಕಳುಹಿಸುತ್ತಾರೆ. ಇದು ಇದೇ ರೀತಿ ಇಡೀ ದೇಶವನ್ನು ಮತ್ತು ದೇಶದ ಹೊರಗಿರುವ ಭಾರತೀಯರನ್ನು ತಲುಪಲಿ ಎಂಬುದೇ ನಮ್ಮ ಆಶಯ. ನಿಮ್ಮ ಸ್ನೇಹಿತರ ಬಳಗ ಬೆಳೆಯಲಿ. ತಪ್ಪದೆ ಮಾಡ್ತೀರಿ ತಾನೆ? ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. [ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ]
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications