ಭೀಕರ ಕಾರು ಅಪಘಾತ: ಇನ್ಫೋಸಿಸ್ ಟೆಕ್ಕಿ ದುರ್ಮರಣ

ಇಲ್ಲಿನ ಇನ್ಫೋಸಿಸ್ ಟೆಕ್ನಾಲಜೀಸ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಅಭಿಮನ್ಯು (31) ದುರ್ಮರಣಕ್ಕೀಡಾದ ಯುವಕ. ಅಭಿಮನ್ಯು ತನ್ನ ಸ್ನೇಹಿತರಾದ ಉಜ್ವಲ್ ವರ್ಮಾ ಮತ್ತು ಗೌತಂ ರೆಡ್ಡಿ ಜತೆಗೂಡಿ ಔಟರ್ ರಿಂಗ್ ರೋಡಿನಲ್ಲಿ ಕಾರಿನಲ್ಲಿ ವೇಗವಾಗಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ವಾಹನವೊಂದನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ಕಾರನ್ನು ಓಡಿಸುತ್ತಿದ್ದ ಅಭಿಮನ್ಯು ಎದುರುಗಡೆ ಸಾಲಿನಲ್ಲಿ ಹೋಟೆಲ್ ಮುಂದೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪ್ರಮಾದವಾಗುತ್ತಿದ್ದಂತೆ ತಕ್ಷಣ ಅಭಿಮನ್ಯು ಮತ್ತು ಆತನ ಗೆಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಭಿಮನ್ಯು ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಗೆಳೆಯರಿಬ್ಬರಿಗೂ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಭಿಮನ್ಯು ದೆಹಲಿ ಮೂಲದವನಾಗಿದ್ದು, ಅಪಘಾತಕ್ಕೀಡಾದ ಕಾರು ಗೌತಂ ರೆಡ್ಡಿ ಅವರದ್ದಾಗಿದೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications