ಶಿವಾಜಿನಗರ: ಇಲ್ಲಿ ಇಲಿಯೇ ಶಾಸ್ತ್ರ ಹೇಳುತ್ತದೆ!

ಬೆಂಗಳೂರು,

ಆಗಸ್ಟ್
2:
ಶಿವಾಜಿನಗರದಲ್ಲಿ
ಜ್ಯೋತಿಷಿಯೊಬ್ಬರು
ಜನರ
ಭವಿಷ್ಯ
ಹೇಳಲು
ಇಲಿಯೊಂದನ್ನು
ಸಾಕಿಕೊಂಡಿದ್ದಾರೆ.
ಭವಿಷ್ಯ
ಹೇಳಲು
ಇಲಿಯಾದರೇನು,
ಗಿಳಿಯಾದರೇನು?
ಒಟ್ಟಿನಲ್ಲಿ
ತಮ್ಮ
ಭವಿಷ್ಯ
ತಿಳಿಸಿಕೊಂಡರೆ
ಸಾಕು
ಎನ್ನುತ್ತಾರೆ
ಜನ.

id="toptextpromo">
id='are-slot-1'
class='oiad
oi-axt
oiadv'>

ಜನರ

ಮನೋಸ್ಥಿತಿ
ಅರಿತಿರುವ
ಗಿಳಿ
ಶಾಸ್ತ್ರ
ಹೇಳುವ
ಅಲ್ಲಲ್ಲ
ಇಲಿ
ಶಾಸ್ತ್ರ
ಹೇಳುವ
ಗೋವಿಂದರಾಜು
ಮುದ್ದಾದ
ಒಂದು
ಇಲಿಯನ್ನು
ಪಳಗಿಸಿಟ್ಟುಕೊಂಡಿದ್ದಾರೆ.
ಅದು
ಭವಿಷ್ಯವನ್ನು
ಸಾರುವ
ಕಾರ್ಡುಗಳನ್ನು
ಎತ್ತಿ
ಗೋವಿಂದರಾಜು
ಕೈಗೆ
ಕೊಡುತ್ತದೆ
-
ಥೇಟ್
ಗಿಳಿಯಂತೆ!

id='are-slot-2'
class='oiad
oi-axt
oiadv'>

68

ವರ್ಷದ
ಗೋವಿಂದರಾಜು
ಶಿವಾಜಿನಗರ
ಬಿಟಿಎಸ್
ಬಸ್
ಸ್ಟಾಂಡ್
ಸಮೀಪ
ಬೀದಿ
ಬದಿ
ದಿನಾ
ಭವಿಷ್ಯದ
ಗೂಡಂಗಡಿ
ತೆರೆಯುತ್ತಾರೆ.
'ತಮ್ಮ
ಭವಿಷ್ಯ'
ರೂಪಿಸುತ್ತಿರುವ
ಇಲಿಗೆ
'ಗಣೇಶ'
ಅಂತಲೂ
ಗೋವಿಂದರಾಜು
ಹೆಸರಿಟ್ಟಿದ್ದಾರೆ.
ಇದ್ದಿದ್ದೊಂದು ಇಲಿ ಕಚ್ಕೊಂಡು ಹೋಯ್ತು

ಇದ್ದಿದ್ದೊಂದು ಇಲಿ ಕಚ್ಕೊಂಡು ಹೋಯ್ತು

ಇದಕ್ಕೆ ಮೊದಲು ನನ್ನ ಬಳಿ 2 ಗಿಳಿಗಳು ಇದ್ದವು. ಆದರೆ ಅರಣ್ಯ ಇಲಾಖೆಯವರು ಬಂದು ಅದನ್ನು ವಶಪಡಿಸಿಕೊಂಡು ಹೊರಟುಹೋದರು. ದಿಕ್ಕುತೋಚದಂತಾಗಿ ಶಿವಾಜಿನಗರದ ಗಲ್ಲಿಯೊಲ್ಲಿ ನಡೆದುಹೋಗುತ್ತಿದ್ದಾಗ ಅಂಗಡಿಯೊಂದರಲ್ಲಿ ಬಣ್ಣ ಬಣ್ಣದ ಇಲಿಗಳನ್ನು (ಗಿಳಿಗಳಂತೆ) ಮಾರಾಟಕ್ಕಿಟ್ಟಿರುವುದು ಕಣ್ಣಿಗೆಬಿತ್ತು. ತಕ್ಷಣ ಆಲೋಚನೆಯೊಂದು ಬಂತು- ಹಾಗಾಗಿ ಒಂದು ಇಲಿಯನ್ನು ಖರೀದಿಸಿ, ಅದನ್ನು ಮಗುವಿನಂತೆ ನೋಡಿಕೊಂಡು ಪಳಗಿಸಿದೆ.

ಗಣೇಶನಿಗೆ ಈಗ 5 ವರ್ಷ ವಯಸ್ಸು

ಗಣೇಶನಿಗೆ ಈಗ 5 ವರ್ಷ ವಯಸ್ಸು

ಗಣೇಶನಿಗೆ ಈಗ 5 ವರ್ಷ ವಯಸ್ಸು. ಇಲಿ ಶಾಸ್ತ್ರ ಹೇಳುವ ಮೂಲಕ ಗೋವಿಂದರಾಜು ದಿನಾ 300 ರೂ ಸಂಪಾದಿಸುತ್ತಿದ್ದಾರೆ. ಮದುವೆ ಮುಂತಾದ ಸಮಾರಂಭಗಳು ನಡೆದಾಗ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಆಗ ಭವಿಷ್ಯ ಅರಸಿ, ಜನ ನನ್ನ ಬಳಿ ಹೆಚ್ಚಾಗಿ ಬರುತ್ತಾರೆ. ಇಲಿ ಶಾಸ್ತ್ರ ಹೇಳುತ್ತದೆ ಎಂಬುದು ಜನರಿಗೆ ವಿಶೇಷ ಆಕರ್ಷಣೆಯಾಗಿದೆ ಎಂದು ಇಲಿ ಶಾಸ್ತ್ರ ಹೇಳುವ 'ಬೆಂಗಳೂರು ಮಿರರ್' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಂಚತಾರಾ ಹೋಟೆಲಿನ ವಿದೇಶಿ ಅತಿಥಿಗಳಿಗೂ ಭವಿಷ್ಯ

ಪಂಚತಾರಾ ಹೋಟೆಲಿನ ವಿದೇಶಿ ಅತಿಥಿಗಳಿಗೂ ಭವಿಷ್ಯ

ಅನೇಕ ಬಾರಿ ಪಂಚತಾರಾ ಹೋಟೆಲಿನವರು ಫೋನ್ ಮಾಡಿ ನನ್ನನ್ನು ಕರೆಸಿಕೊಳ್ಳುವುದುಂಟು. ಹೋಟೆಲಿಗೆ ಬಂದ ವಿಶೇಷ ವಿದೇಶಿ ಅತಿಥಿಗಳಿಗೆ ನಾನು ಅಲ್ಲಿ ಭವಿಷ್ಯ ಹೇಳುತ್ತೇನೆ. 2008ರಲ್ಲಿ ಅಂದ್ಕೋತೀನಿ - ಬೆಂಗಳೂರಿಗೆ ಬಂದಿದ್ದ ಅಮೆರಿಕದ ಟೆನಿಸ್ ತಾರೆ ಸರಿನಾ ವಿಲಿಯಮ್ಸ್ ಅವರಿಗೂ ನಾನು ಭವಿಷ್ಯ ಹೇಳಿದ್ದೆ. ಅನೇಕ ಗಣ್ಯ ವ್ಯಕ್ತಿಗಳು ನನ್ನ ಇಲಿ ಶಾಸ್ತ್ರಕ್ಕೆ ಮನ್ನಣೆ ಕೊಡುತ್ತಾರೆ ಎಂದ ಗೋವಿಂದರಾಜು ಮುಖದಲ್ಲಿ ಮಂದಹಾಸ ಮೂಡಿತ್ತು.

ಕಡಲೆ ಚೆರ್ಪು ತಿನ್ನಿಸುತ್ತಾ ಭವಿಷ್ಯ ಅರಸುವ ಕಲೆ:

ಕಡಲೆ ಚೆರ್ಪು ತಿನ್ನಿಸುತ್ತಾ ಭವಿಷ್ಯ ಅರಸುವ ಕಲೆ:

ಮಕ್ಕಳಿಗೆ ಪಾಠ ಹೇಳಿಕೊಡುವಂತೆ ಗಣೇಶನಿಗೆ ಕಾರ್ಡ್ ಎತ್ತುವ ಕಲೆ ಕಲಿಸಿದೆ. ಆರಂಭದಲ್ಲಿ ತಲೆಹರಟೆ ಮಾಡುತ್ತಿತ್ತು. ಆಮೇಲಾಮೇಲೆ ನನ್ನ ಮಾತು ಕೇಳತೊಡಗಿತು. ಅದಕ್ಕೆ ಕಡಲೆ ಅಂದರೆ ತುಂಬಾ ಇಷ್ಟ ಎಂಬುದನ್ನು ತಿಳಿದುಕೊಂಡೆ ... ಒಂದೊಂದೇ ಕಡಲೆ ಹಾಕುತ್ತಾ ಭವಿಷ್ಯ ಅರಸುವ ಕಲೆ ಕಲಿಸಿದೆ ಎನ್ನುತ್ತಾರೆ ಗೋವಿಂದರಾಜು. ಗಣೇಶನ ಹಬ್ಬ ಇನ್ನು ಒಂದು ತಿಂಗಳಿದೆ. ನೀವು ನಿಮ್ಮ ಭವಿಷ್ಯ ತಿಳಿಯಲು ಶಿವಾಜಿನಗರದತ್ತ ಹೆಜ್ಜೆ ಹಾಕಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+