'ಸಿದ್ರಾಮಯ್ಯನವರೇ ನಿಮಗೆ ಸಿಎಂ ಪಟ್ಟ ತಪ್ಪಿಸಿದ್ದು ನಾನೇ'

ಬೆಂಗಳೂರು, ಜುಲೈ 31: 'ಸಿದ್ರಾಮಯ್ಯನವರೇ ಒಮ್ಮೆ ನಿಮಗೆ ಸಿಎಂ ಪಟ್ಟ ತಪ್ಪಿಸಿದ್ದು ನಾನೇ. ಆದರೆ ಎರಡನೆಯ ಬಾರಿ ನಾವನಲ್ಲ' ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ತುಂಬಿದ ಸಭೆಯಲ್ಲಿ ಮಂಗಳವಾರ ಒಪ್ಪಿಕೊಂಡರು. ಇದರೊಂದಿಗೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವಣ ರಾಜಕೀಯ ಭಿನ್ನಾಭಿಪ್ರಾಯ/ ಕಲಹ ಜಗಜ್ಜಾಹೀರಾಗಲು ವಿಧಾನಸಭೆ ವೇದಿಕೆಯಾಯಿತು.

ಸಿಎಂ ಸ್ಥಾನ ತಪ್ಪಿಸಿದ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಮಧ್ಯೆ ಮಂಗಳವಾರ ಸದನದಲ್ಲಿ ಭಾರಿ ಜಟಾಪಟಿ ನಡೆದಾಗ ಕುಮಾರಸ್ವಾಮಿ ಅವರು ಅಪ್ರಿಯ ಸತ್ಯ ನುಡಿದರು.

ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದನ್ನೂ ಬಹಿರಂಗವಾಗಿಯೇ ಒಪ್ಪಿಕೊಂಡ ಕುಮಾರಸ್ವಾಮಿ ಅವರು ಅದಕ್ಕೆ ಕಾರಣವನ್ನೂ ನೀಡಿದರು. 1997ರಲ್ಲಿ ದೆಹಲಿಯ ಪ್ರಧಾನಿ ನಿವಾಸದಲ್ಲಿ ತಮಗಾದ ಅಪಮಾನದಿಂದ ಇದನ್ನು ಮಾಡಿದ್ದಾಗಿಯೂ ಅವರು ಸ್ಪಷ್ಟಪಡಿಸಿದರು.

ನಾವು ದೇವಗೌಡರನ್ನು ಮುಖ್ಯಮಂತ್ರಿ ಮಾಡಲಿಲ್ವಾ?

ನಾವು ದೇವಗೌಡರನ್ನು ಮುಖ್ಯಮಂತ್ರಿ ಮಾಡಲಿಲ್ವಾ?

ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಕುಮಾರಸ್ವಾಮಿ, ಹಿಂದುಳಿದ ವರ್ಗದವರನ್ನು ಉಪ ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು. ಆದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಆಗಲಿಲ್ಲ ಎಂದು ಚೇಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದು, ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು, ನೀವೇ ಎಂದರು. ಇದರಿಂದ ಆಕ್ರೋಶಗೊಂಡ ಎಚ್‌ಡಿಕೆ, ಹೌದು ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ನಾನೇ, ಆದರೆ ಸಿದ್ದರಾಮಯ್ಯರನ್ನು ನಾಯಕನಾಗಿ ಬೆಳೆಸಿದ್ದೇ ಜೆಡಿಎಸ್ ಎಂದರು.

ನಾವು ದೇವಗೌಡರನ್ನು ಮುಖ್ಯಮಂತ್ರಿ ಮಾಡಲಿಲ್ವಾ? ಎಂದು ಸಿದ್ದು ಪ್ರಶ್ನಿಸಿದರು. ಸಿದ್ದು ಪ್ರಶ್ನೆಯಿಂದ ಕೆಂಡಾಮಂಡಲವಾದ ಕುಮಾರಸ್ವಾಮಿ, ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದು ನೀವಲ್ಲ, ರಾಜ್ಯದ ಲಕ್ಷಾಂತರ ಮಂದಿ ಮತ ಹಾಕಿ ಮುಖ್ಯಮಂತ್ರಿ ಮಾಡಿದ್ದರು ಎಂದರು. ಹೀಗೆ ಇಬ್ಬರು ನಾಯಕರ ನಡುವೆ ಹಳೆ ವಿಚಾರಗಳ ಬಗ್ಗೆ ತೀವ್ರ ವಾಗ್ವಾದ ನಡೆಯಿತು.

1996ರಲ್ಲಿ ನಾನೇ ಆದರೆ 2004ರಲ್ಲಿ ನಾನವನಲ್ಲ:

1996ರಲ್ಲಿ ನಾನೇ ಆದರೆ 2004ರಲ್ಲಿ ನಾನವನಲ್ಲ:

ಮಾತು ಮುಂದುವರಿಸಿದ ಕುಮಾರಸ್ವಾಮಿ ಅವರು, '2004 ರಲ್ಲಿ ನಾವು ನಿಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲಿಲ್ಲ. ನಿಮ್ಮ ಸಹಪಾಠಿಗಳೇ ತಪ್ಪಿಸಿದರು. ನಾವು ಬೆನ್ನಿಗೆ ಚೂರಿ ಹಾಕಲಿಲ್ಲ. ಬೇಕಾದ್ರೆ ಆಗ ಐದು ದಿನ ಏನು ಚರ್ಚೆ ನಡೆಯಿತು ಎಂಬುದನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಂದಲೇ ಸತ್ಯ ಹೇಳಿಸಿಬಿಡಿ. ದೇವೇಗೌಡರ ಕುಟುಂಬ ಏನು ಅನ್ಯಾಯ ಮಾಡಿದೆ ಎಂಬುದು ಗೊತ್ತಾಗಿ ಬಿಡಲಿ. ನಮಗೂ ಸಾಕಾಗಿದೆ, ಎಷ್ಟು ದಿನ ಅಂತಾ ನೋವು ಅನುಭವಿಸಬೇಕು' ಎಂದು ಆವೇಶಭರಿತರಾದರು.

ನೀವೂ ಸತ್ಯ ಹರಿಶ್ಚಂದ್ರರಾಗಿ ಎಚ್ಡಿಕೆ

ನೀವೂ ಸತ್ಯ ಹರಿಶ್ಚಂದ್ರರಾಗಿ ಎಚ್ಡಿಕೆ

ಉಭಯ ನಾಯಕರ ಮಾತಿನ ಸಮರ ತಾರಕಕ್ಕೇರಿ ಒಂದು ಹಂತದಲ್ಲಿ 'ಯಾರು ಯಾರ ಬೆನ್ನಿಗೆ ಚೂರಿ ಹಾಕಿದರು ಎಂಬುದನ್ನು ಬೇಕಾದರೆ ಇಡೀ ದಿನ ಚರ್ಚೆ ಮಾಡೋಣ ಬನ್ನಿ...' ಎಂದು ಕುಮಾರಸ್ವಾಮಿ ಸವಾಲು ಹಾಕಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಆಯ್ತು ಬನ್ರಿ. ಈಗ್ಲೆ ನಾನು ಸಿದ್ಧ ಹೇಳ್ರೀ ನೋಡೋಣ...' ಎಂದು ಗುಡುಗಿದರು. ಇದಕ್ಕೆ ಪ್ರತ್ಯುತ್ತರವಾಗಿ ಕುಮಾರಸ್ವಾಮಿ ಸಹ 'ನೀವೊಬ್ಬರೇ ಸತ್ಯ ಹರಿಶ್ಚಂದ್ರರಲ್ಲ...' ಎಂದು ಅಬ್ಬರಿಸಿದರು. ಆಯ್ತು ನೀವೂ ಸತ್ಯ ಹರಿಶ್ಚಂದ್ರರಾಗಿ ಎಂದು ಎಚ್ಡಿಕೆಗೆ ಸಿದ್ದು ಪಂಥಾಹ್ವಾನ ನೀಡಿದರು.

ಸಿದ್ದರಾಮಯ್ಯ ಪರ ರೇವಣ್ಣ ಕಣ್ಣೀರನ್ನೂ ಹಾಕಿದ್ದರು

ಸಿದ್ದರಾಮಯ್ಯ ಪರ ರೇವಣ್ಣ ಕಣ್ಣೀರನ್ನೂ ಹಾಕಿದ್ದರು

ಇವರಿಬ್ಬರ ನಡುವಿನ ಮಾತಿನ ಸಮರಕ್ಕೆ ಕಿಡಿ ಹಚ್ಚಿದ್ದು ಸಿದ್ದರಾಮಯ್ಯ ಅವರ ಒಂದು ಮಾತು. ಅದು- '1996 ರಲ್ಲಿ 87 ಶಾಸಕರು ನನ್ನ ಪರವಾಗಿ ಸಹಿ ಹಾಕಿದ್ದರು. ಆ ಪಟ್ಟಿಗೆ ಸಹಿ ಹಾಕಿಸಿದ್ದು ಇದೇ ರೇವಣ್ಣ ಕೇಳಿ ಬೇಕಾದ್ರೆ? ನಾನು ಮುಖ್ಯಮಂತ್ರಿಯಾಗಲಿಲ್ಲ ಎಂಬ ಕಾರಣಕ್ಕೆ ರೇವಣ್ಣ ಕಣ್ಣೀರನ್ನೂ ಹಾಕಿದ್ದರು' ಎಂದರು.

ಈ ಮಾತಿಗೆ ಕೆಂಡಾಮಂಡಲಗೊಂಡ ಕುಮಾರಸ್ವಾಮಿ 'ಅಂದು 87 ಶಾಸಕರು ನಿಮ್ಮ ಮೇಲೆ ಪ್ರೀತಿ ವಿಶ್ವಾಸದಿಂದ ಸಹಿ ಹಾಕಿರಲಿಲ್ಲ. ನಮ್ಮ ಶಕ್ತಿ ನಿಮಗೆ ಧಾರೆ ಎರೆದಿದ್ದರಿಂದ ಅಷ್ಟು ಶಾಸಕರು ಸಹಿ ಹಾಕಿದ್ದರು. ಆದಕ್ಕೆ ಮುಖ್ಯ ಪಾತ್ರಧಾರಿ ನಾನು' ಎಂದು ಹೇಳಿದರು. ಆದಕ್ಕೆ ಸಿದ್ದರಾಮಯ್ಯ, 'ಯಾವುದಕ್ಕೆ? ನನಗೆ ಸಿಎಂ ಸ್ಥಾನ ತಪ್ಪಿಸುವುದಕ್ಕೆ...' ಎಂದು ಕುಹಕವಾಡಿದರು.

ಹಿರಿಯರಿದ್ದರೂ ಸಿದ್ದುಗೆ ಡಿಸಿಎಂ ಸ್ಥಾನ- ಎಚ್‌ಡಿಕೆ

ಹಿರಿಯರಿದ್ದರೂ ಸಿದ್ದುಗೆ ಡಿಸಿಎಂ ಸ್ಥಾನ- ಎಚ್‌ಡಿಕೆ

ಅರಣ್ಯ ಸಚಿವ ರಮಾನಾಥ ರೈ ಎದ್ದು ನಿಂತು, 'ಕಾಂಗ್ರೆಸ್‌ ಸರ್ಕಾರದಲ್ಲಿ ಮಾತ್ರ ಹಿಂದುಳಿದವರು ಉನ್ನತ ಸ್ಥಾನ ಪಡೆದಿದ್ದಾರೆ' ಎಂದು ಚುಚ್ಚಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 'ಜನತಾ ಪರಿವಾರ ಅಧಿಕಾರ ನಡೆಸಿದ ರಾಜ್ಯಗಳಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರೂ, ದಲಿತರು ಅಧಿಕಾರ ಪಡೆದಿದ್ದಾರೆ. 1996 ರಲ್ಲಿ ದೇವೇಗೌಡರು ಪ್ರಧಾನಿಯಾದಾಗ, ರಾಜ್ಯದಲ್ಲಿ ಪಟೇಲರು ಮುಖ್ಯಮಂತ್ರಿಯಾದರು. ಬೈರೇಗೌಡರಂತಹ ಹಿರಿಯ ನಾಯಕರಿದ್ದರೂ ನಿಮ್ಮನ್ನು ಉಪ ಮುಖ್ಯಮಂತ್ರಿ ಮಾಡಿದೆವು' ಎಂದು ತಿರುಗೇಟು ನೀಡಿದರು.

ರೀ ಕುಮಾರಸ್ವಾಮಿ ಬನ್ರೀ ಊಟಕ್ಕೆ

ರೀ ಕುಮಾರಸ್ವಾಮಿ ಬನ್ರೀ ಊಟಕ್ಕೆ

ಸದನದಲ್ಲಿ ಒಂದು ಗಂಟೆ ಕಾಲ ಅಬ್ಬರಿಸಿದ ಬೊಬ್ಬಿರಿದ ಸಿದ್ದರಾಮಯ್ಯ, ಸದನ ಭೋಜನಾ ವಿರಾಮಕ್ಕೆ ಮುಂದೂಡಿದಾಗ ತಾವು ಶಾಸಕರಿಗೆ ಬಾಂಕ್ವೆಟ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಔತಣಕೂಟಕ್ಕೆ ಬರುವಂತೆ ಪ್ರತಿಪಕ್ಷ ನಾಯಕ ಕುಮಾರಸ್ವಾಮಿ ಅವರತ್ತ ಕೈ ಸನ್ನೆ ಮಾಡಿದರು.

ಕುಮಾರಸ್ವಾಮಿ ಅವರು ಗಮನಿಸದಿದ್ದಾಗ, 'ರೀ ಕುಮಾರಸ್ವಾಮಿ ಬನ್ರೀ ಊಟಕ್ಕೆ...' ಎಂದು ಕರೆದರು. ಆದರೆ, ಕುಮಾರಸ್ವಾಮಿ ಮುಗುಳ್ನಕ್ಕು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಬಾಂಕ್ವೆಟ್‌ ಸಭಾಂಗಣದತ್ತವೂ ಹೋಗಲಿಲ್ಲ. ಆದರೆ, ಜೆಡಿಎಸ್‌ನ ಇತರೆ ಶಾಸಕರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+