ದೇವರಾಜ್ ಅರಸು ಮನೆ ಮೇಲೆ ರೌಡಿಗಳ ದಾಳಿ

ಭೂಗಳ್ಳರು ದೇವರಾಜ್ ಅರಸು ಅವರ ಮನೆಯ ಜಾಗವನ್ನು ಕಬಳಿಸಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಇದೇ ತಂಡದ ಸದಸ್ಯರು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಬುಧವಾರ ನಡೆದ ದಾಳಿಯಿಂದ ಶ್ರೀ ಶಕ್ತಿ ಮನೆ ಧ್ವಂಸಗೊಂಡಿವೆ. ಸದ್ಯ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸುಮಾರು 1 ಎಕರೆಗೂ ಹೆಚ್ಚಿನ ಜಾಗದಲ್ಲಿ ಈ ನಿವಾಸವಿದೆ. ಇದರ ಮೌಲ್ಯ ಸುಮಾರು 30 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ. ಹಿಂದೆಯೂ ನಕಲಿ ದಾಖಲೆ ಸೃಷ್ಟಿಸಿ ಈ ಮನೆಯನ್ನು ಪಡೆಯಲು ಭೂ ಗಳ್ಳರು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಬಿಡಿಎ ಆದೇಶವಿತ್ತು : ಈ ನಿವೇಶನವನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಬಿಡಿಎ ಎರಡು ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಅದು ಕಾರ್ಯಗತಗೊಂಡಿರಲಿಲ್ಲ. ಈ ಮನೆಯ ಮೇಲೆ ಭೂಗಳ್ಳರು ಹಲವಾರು ವರ್ಷಗಳಿಂದ ಕಣ್ಣಿಟ್ಟಿದ್ದಾರೆ.
ಶಾಮನೂರು ಖರೀದಿಸಿದ್ದಾರೆ : ಆರ್ ಟಿಐ ಕಾರ್ಯಕರ್ತರೊಬ್ಬರು ಸಚಿವ ಶಾಮನೂರು ಶಿವಶಂಕರಪ್ಪನವರು ಈ ಮನೆಯನ್ನು 18 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications