ಬಾಟ್ಲಾ ಹೌಸ್: ಐಎಂ ಉಗ್ರ ಅಹಮದನಿಗೆ ಜೀವಾವಧಿ

ಪೊಲೀಸ್ ಅಧಿಕಾರಿ ಹತ್ಯೆಗೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಶಹಜಾದ್ ಅಹಮದ್ ಈಗಾಗಲೇ ದೋಷಿ ಎಂದು ಸಾಬೀತಾಗಿದ್ದು, ತಪ್ಪಿತಸ್ಥನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಸಾಕೇತ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ರಾಜಿಂದರ್ ಕುಮಾರ್ ಶಾಸ್ತ್ರಿ ಪ್ರಕಟಿಸಿದ್ದಾರೆ.
ಆದರೆ ಉಗ್ರನಿಗೆ ಮರಣ ದಂಡನೆ ಶಿಕ್ಷೆ ನೀಡಬೇಕು ಎಂದು ದೆಹಲಿ ಪೊಲೀಸರು ಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಆದರೆ ವಿಶೇಷ ಪ್ರಕರಣ ಅಲ್ಲವೆಂದು ಪರಿಗಣಿಸಿದ ನ್ಯಾಯಾಲಯ ಹಮದನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಜತೆಗೆ 95 ಸಾವಿರ ರೂ. ದಂಡವನ್ನೂ ವಿಧಿಸಿದ್ದಾರೆ. ಅದರಲ್ಲಿ 40 ಸಾವಿರ ರೂ ಹುತಾತ್ಮ ಪೊಲೀಸ್ ಇನ್ಸ್ ಪೆಕ್ಟರ್ ಮೋಹನಚಂದ್ ಶರ್ಮಾ ಕುಟುಂಬಕ್ಕೆ ಮತ್ತು ಗಾಯಗೊಂಡ ಪೇದೆ ಬಲವಂತ್ ಗೆ 20 ಸಾವಿರ ರೂ. ನೀಡಬೇಕು ಎಂದು ಕೋರ್ಟ್ ತೀರ್ಪು ನೀಡಿದೆ.
2009ರ ಸೆಪ್ಟೆಂಬರ್ 19ರಂದು ದೆಹಲಿಯ ಜಾಮಿಯಾ ನಗರದಲ್ಲಿರುವ ಬಾಟ್ಲಾ ಹೌಸ್ ನಲ್ಲಿ ಅಡಗಿದ್ದ ಇಂಡಿಯನ್ ಮುಜಾಹಿದ್ದೀನ್ ಉಗ್ರರ ವಿರುದ್ಧ ಎನ್ಕೌಂಟರ್ ನಡೆದಿತ್ತು.












Click it and Unblock the Notifications