ಕೋಲ್ಕತಾದ ಬದರ್ ಅಜೀಂ ಸಾಧನೆಗೆ ಒಂದು ಸಲಾಂ
ಲಂಡನ್, ಜುಲೈ29: ಕಳೆದ ವಾರ ಬ್ರಿಟನ್ನಿನ ರಾಜ ದಂಪತಿ ವಿಲಿಯಮ್- ಕೇಟ್ ಅವರೊಗೆ ಪುತ್ರರತ್ನ ಜನಿಸಿತಲ್ಲ. ಆ ಸುದ್ದಿ ನಿಮಗೆ ಗೊತ್ತಾಗಿದ್ಗದು ಹೇಗೆ ಗೊತ್ತಾ? ಅದನ್ನು ಹೊರಜಗತ್ತಿಗೆ ಮೊದಲು ತಿಳಿಸಿದ್ದು ಯಾರು ಗೊತ್ತಾ? ಆತ ಯಾರಪ್ಪಾ ಅಂದರೆ ಭಾರತೀಯ- ಕೋಲ್ಕತಾ ಮೂಲದ ಯುವಕ!
ಯಸ್! 25 ವರ್ಷದ ಬದರ್ ಅಜೀಂ ಲಂಡನ್ನಿನಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಪದವಿ ಪಡೆದು ಕೆಲಸಕ್ಕೆ ಅಂತ ಸೇರಿಕೊಂಡಿದ್ದು ಬಕಿಂಗ್ ಹ್ಯಾಂ ಅರಮನೆಯನ್ನು. ಕೆಲಸಕ್ಕೆ ಸೇರಿದ ಹೆಚ್ಚೇನೂ ಸಮಯ ಹಿಡಿಸಿಲ್ಲ (2012ರ ಫೆಬ್ರವರಿಯಲ್ಲಿ ಕೆಲಸಕ್ಕೆ ಸೇರಿದ್ದು). ಆಗಲೇ ಆತನ ಆತನ ಜೀವನದಲ್ಲಿ ಅವಿಸ್ಮರಣನೀಯ ಕ್ಷಣವೊಂದು ದಾಖಲಾಗಿದೆ.
ಅರಮನೆಯಿಂದ ಹೊರಬಂದು ಅರಮನೆ ಹೊರಗೆ ಕಾತರದಿಂದ ಕಾಯುತ್ತಿದ್ದ ಬ್ರಟೀಷರಿಗೆ ಸುದ್ದಿ ಮುಟ್ಟಿಸಲು ಅಂದು ಅರಮನೆಯ ಆವರಣದಲ್ಲಿ ರಾಣಿಯ ಮಾಧ್ಯಮ ಕಾರ್ಯದರ್ಶಿ ಅಲಿಸಾ ಆ್ಯಂಡರ್ಸನ್ ಹೆಜ್ಜೆ ಹಾಕುತ್ತಿದ್ದಾಗ ಆತನ ಹಮ್ಮುಬಿಮ್ಮು, ವಿಶ್ವಾಸವನ್ನು ನೋಡಬೇಕಿತ್ತು. ರಾಜಗಾಂಭೀರ್ಯದಿಂದ ಪ್ರಮುಖ ದ್ವಾರದವರೆಗೂ ಬಂದವನೆ ಜಗತ್ತಿಗೆ ತಿಳಿಸಿದ್ದ. ರಾಜ ದಂಪತಿಗೆ ಮಗುವಾಗಿದೆ. ಕೇಟ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ವಿಚಾರವನ್ನು ಆತ ಪ್ರಕಟಿಸಿದ್ದ.
ಕೋಲ್ಕತಾದ ಎಲ್ಲಿಯ ಮುಸ್ಲಿಂ ಯುವಕ- ದೀರ್ಘಕಾಲದವರೆಗೆ ನಮ್ಮನ್ನಾಳಿದ ಎಲ್ಲಿಯ ಬ್ರಟೀಷ್ ರಾಜಮನೆತನ. ನಿಜಕ್ಕೂ ಇದು ಬದರ್ ಅಜೀಂ ಸಾಧನೆಯೇ, ಆತನಿಗೊಂದು ಸಲಾಂ.

ನಿಜಕ್ಕೂ ಅದು ಕರುಣಾಜನಕ ಕಥೆ. ಬ್ರಿಟೀಷ್ ರಾಜಮನೆತನದ ಪರಿಚಾರಕ/ಪದಾತಿದಳದ ಪ್ರಮುಖ ಸದಸ್ಯ ಬದರ್ ಅಜೀಂನದ್ದು ಯುವ ವಿದ್ಯಾರ್ಥಿಗಳಿಗೆ ಮಾದರಿಯಾಗಬಲ್ಲ ಕಥೆ. ಕೋಲ್ಕತಾದ ಕೊಳೆಗೇರಿಯೊಂದರಲ್ಲಿ ಹುಟ್ಟಿದ ಅಜ್ಮಿ, ಪ್ರತಿಭಾನ್ವಿತ ವಿದ್ಯಾರ್ಥಿ. ಆರಂಭದ ಶಿಕ್ಷಣ ಅನಾಥಾಲಯದ ಟ್ರಸ್ಟ್ ಶಾಲೆಯಲ್ಲಿ.
ಅದೇ ಶಾಲೆಯ ನೆರವಿನಿಂದ ಹೋಟೆಲ್ ಮ್ಯಾನೇಜ್ ಮೆಂಟಿಲ್ಲಿ ಉನ್ನತ ಶಿಕ್ಷಣ ಪಡೆದಿದ್ದ. ಆ ಬಳಿಕ ಟ್ರಸ್ಟ್ ನೆರವಿನಿಂದ ಸ್ಕಾಟ್ ಲ್ಯಾಂಡ್ ನಲ್ಲಿ Edinburgh's Napier Universityಯಲ್ಲಿ ಉನ್ನತ ಶಿಕ್ಷಣ ಪಡೆದ. ಬಳಿಕ 2012ರಲ್ಲಿ ಅರಮನೆಯ ಸೇವಕನಾಗಿ ಕೆಲಸ ಗಿಟ್ಟಿಸಿದ್ದ ಎಂದು ಅಜೀಂ ತಮ್ಮ ಮಝಾಹರ್ ತಿಳಿಸಿದ್ದಾರೆ.
ಬದರ್ ಅಜೀಂ ಅಪ್ಪಗೆ ಈಗ 52 ವರ್ಷ. ಮೊಹಮದ್ ರಹೀಂ ವೃತ್ತಿಯಿಂದ ವೆಲ್ಡರ್. 41 ವರ್ಷದ ಮುಮ್ತಾಜ್ ಬೇಗಂ ಈತನ ಅಮ್ಮ. ಬದರ್ ಅಜೀಂ ಅಪ್ಪ-ಅಮ್ಮ ಇನ್ನೂ ಅದೇ ಕೊಳೆಗೇರಿಯಲ್ಲೇ ವಾಸವಾಗಿದ್ದಾರೆ. ಬಡತನವನ್ನೇ ಹಾಸುಹೊದ್ದಿದ್ದಾರೆ. ಅವರ ಜತೆಗೆ ಒಟ್ಟು 9 ಮಂದಿ ಕುಟುಂಬದ ಸದಸ್ಯರು ಇದ್ದಾರೆ.
ತಮ್ಮ ಕಷ್ಟ ತಮಗೆ ಮಕ್ಕಳಾದರೂ ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಲಿ ಎಂದು ಎಲ್ಲ ಅಪ್ಪ-ಅಮ್ಮಂದಿರಂತೆ ಕನಸು-ಕಷ್ಟ ಕಂಡಿದ್ದ ಮೊಹಮದ್ ರಹೀಂ- ಮುಮ್ತಾಜ್ ಬೇಗಂ ದಂಪತಿಗೆ ಈಗ ಜಗತ್ತನ್ನೇ ಗೆದ್ದಷ್ಟು ಸಂಭ್ರಮ.












Click it and Unblock the Notifications