ದಕ್ಷಿಣದಲ್ಲಿ ಮೋದಿಗೆ ಸೋಲು, ರಾಹುಲ್ ಗೇಕೆ ಜಯ?
ಬೆಂಗಳೂರು, ಜು.29: ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ರಾಷ್ಟ್ರೀಯ ಸುದ್ದಿ ವಾಹಿನಿಗಳು ಈಗಾಗಲೇ ಹತ್ತು ಹಲವು ಸಮೀಕ್ಷೆಗಳನ್ನು ನಡೆಸಿ ವರದಿಗಳನ್ನು ವಿಶ್ಲೇಷಿಸುತ್ತಿವೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೈಗೊಂಡಿರುವ ಸಮೀಕ್ಷೆಯ ಪಕ್ಷಿನೋಟ ಇಲ್ಲಿ ಓದಿರುತ್ತೀರಿ. ಈಗ ದಕ್ಷಿಣ ಭಾರತದಲ್ಲಿ ಮೋದಿಗೇಕೆ ಸೋಲು, ರಾಹುಲ್ ಗೇಕೆ ಜಯ ಎಂಬುದರ ಬಗ್ಗೆ ವಿವರಗಳನ್ನು ನೋಡಿ...
ನವದೆಹಲಿಯ CSDS-CNN-IBN ಹಾಗೂ ದಿ ಹಿಂದೂ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಆಡಳಿತಾರೂಢ (ಸಮ್ಮಿಶ್ರ ಸರಕಾರ ಮತ್ತು ಮೋದಿ ನೇತೃತ್ವದ ಬಿಜೆಪಿ ಆಡಳಿತ) ಪಕ್ಷಗಳ ಪರವೇ ಜನ ಈ ಕ್ಷಣದ ಮಟ್ಟಿಗೆ ಒಲವು ಇದೆ ಎನ್ನಲಾಗಿದೆ.
ಆದರೆ, ದಕ್ಷಿಣ ಭಾರತದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಹಿನ್ನಡೆ ಉಂಟಾಗಲಿದೆ ಎಂಬ ಉತ್ತರ ಹೊರಬಿದ್ದಿದೆ. ಇದಲ್ಲದೆ, ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಯಾರು ಪೈಪೋಟಿ ಹೊಂದಿದ್ದಾರೆ. ಜನರ ಒಲವು ಯಾರ ಕಡೆಗಿದೆ ಎಂಬುದು ಬಹಿರಂಗವಾಗಿದೆ.
ಜೊತೆಗೆ ನರೇಂದ್ರ ಮೋದಿ vs ರಾಹುಲ್ ಗಾಂಧಿ, ಮುಸ್ಲಿಂ ಮತಗಳ ವಿಭಜನೆ, ತಜ್ಞರ ಅಭಿಪ್ರಾಯವೇನು ಎಂಬುದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ ನೋಡಿ

ಪ್ರಧಾನಿ ಹುದ್ದೆಗೆ ಸ್ಪರ್ಧೆ
| ನಾಯಕ | ಇವರು ಪ್ರಧಾನಿಯಾಗಬೇಕು in % | 2009ರಲ್ಲಿ % |
| ನರೇಂದ್ರ ಮೋದಿ | 19 | 2 |
| ರಾಹುಲ್ ಗಾಂಧಿ | 12 | 6 |
| ಸೋನಿಯಾ ಗಾಂಧಿ | 5 | 16 |
| ಮನಮೋಹನ್ ಸಿಂಗ್ | 6 | 18 |
| ಮಾಯಾವತಿ | 3 | 5 |
| ಎಲ್ ಕೆ ಅಡ್ವಾಣಿ | 2 | 15 |
| ಏನೂ ಹೇಳಲಾರೆ | 39 | 20 |

ಮೋದಿ ಹಾಗೂ ರಾಹುಲ್ ಹೋಲಿಕೆ
| ಪ್ರದೇಶ | ಮೋದಿ | ರಾಹುಲ್ |
| ಉತ್ತರ ಭಾರತ | 37 | 29 |
| ಮಧ್ಯ ಭಾರತ | 41 | 33 |
| ಪಶ್ಚಿಮ ಭಾರತ | 43 | 33 |
| ಪೂರ್ವ | 34 | 30 |
| ದಕ್ಷಿಣ | 17 | 37 |

ಕಾಂಗ್ರೆಸ್ ನಲ್ಲಿ ವೋಟ್
ಮುಸ್ಲಿಂ ಮತಗಳ ವಿಭಜನೆ ಪ್ರಕಾರ ಶೇ 45 ರಷ್ಟು ಮಂದಿ ರಾಹುಲ್ ಗಾಂಧಿ ಪರ ಇದ್ದರೆ, ಶೇ 18 ಜನ ಮೋದಿ ಪರ ಇದ್ದಾರೆ.
| ಕಾಂಗ್ರೆಸ್ ನಲ್ಲಿ | |
| ನಾಯಕ | ಶೇಕಡವಾರು |
| ರಾಹುಲ್ ಗಾಂಧಿ | 48% |
| ಸೋನಿಯಾ ಗಾಂಧಿ | 16% |
| ಮನಮೋಹನ್ ಸಿಂಗ್ | 14% |
| ಚಿದಂಬರಂ | 2% |

ಬಿಜೆಪಿಯಲ್ಲಿ ಹೇಗಿದೆ ಗಾಳಿ
ಒಟ್ಟಾರೆ ಮೋದಿ ಶೇ 79 ರಷ್ಟು ಹಾಗೂ ರಾಹುಲ್ ಶೇ 66 ರಷ್ಟು ಜನಪ್ರಿಯತೆ ಗಳಿಸಿದ್ದಾರೆ.
| ಬಿಜೆಪಿಯಲ್ಲಿ | |
| ನಾಯಕ | ಶೇಕಡವಾರು |
| ಮೋದಿ | 66% |
| ಅಡ್ವಾಣಿ | 12% |
| ಸುಷ್ಮಾ ಸ್ವರಾಜ್ | 5% |
| ಅರುಣ್ ಜೇಟ್ಲಿ | 1% |
| ರಾಜನಾಥ್ ಸಿಂಗ್ | 1% |

ತಜ್ಞರ ಅಭಿಪ್ರಾಯ
* ನರೇಂದ್ರ ಮೋದಿ ಉತ್ತಮ ಆಡಳಿತಗಾರ ಎಂಬುದು ಸಾಬೀತಾಗಿದೆ. ರಾಹುಲ್ ಇನ್ನೂ ಕೊಟ್ಟ ಯೋಜನೆಗಳಲ್ಲಿ ಫಲ ಕಂಡಿಲ್ಲ.
* ಮೋದಿ ಅವರು ಇಂಗ್ಲೀಷ್ ಭಾಷೆಯಲ್ಲಿ ಅಷ್ಟು ಸುಲಲಿತವಾಗಿಲ್ಲ ಹೀಗಾಗಿ ದಕ್ಷಿಣ ಭಾರತದಲ್ಲಿ ರಾಹುಲ್ ಬಲ ಹೆಚ್ಚಿದೆ.
* ದಕ್ಷಿಣದಲ್ಲಿ ಬಿಜೆಪಿ ತನ್ನ ನೆಲೆ ಕಳೆದುಕೊಂಡಿದೆ. ಹೀಗಾಗಿ ಮೋದಿ ತಕ್ಷಣಕ್ಕೆ ಯಾವುದೇ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ.
* ಮೋದಿ ಹಾಗೂ ರಾಹುಲ್ ಪಟ್ಟ ಕಟ್ಟಲು ಪ್ರಾದೇಶಿಕ ನಾಯಕರ ಬೆಂಬಲವೂ ಅಗತ್ಯ
* ದೊಡ್ಡ ಹುದ್ದೆ ಬೇಡ ಎಂದು ರಾಹುಲ್ ಹೇಳಿದ ಮೇಲೆ ಕಾಂಗ್ರೆಸ್ ಕೂಡಾ ಗೊಂದಲದಲ್ಲಿದೆ. ಬಿಜೆಪಿ ಕೂಡಾ ಮೋದಿ ಹೆಸರು ಸೂಚಿಸಲು ಹಿಂಜರೆಯುತ್ತಿದೆ. ಹೀಗಾಗಿ ಕದನ ಕುತೂಹಲ ಕೆರಳಿಸಿದೆ.












Click it and Unblock the Notifications