CNN-IBN: ಗುಜರಾತಿನಲ್ಲಿ ನರೇಂದ್ರ ಮೋದಿಗೇ ಗೆಲುವು
ನವದೆಹಲಿ, ಜುಲೈ 25: ಮುಂದಿನ ಲೋಕಸಭೆ ಚುನಾವಣೆ ನಿಮಿತ್ತ ಸಿಎನ್ಎನ್-ಐಬಿಎನ್ ಆಂಗ್ಲ ನ್ಯೂಸ್ ಚಾನೆಲ್ ಚುನಾವಣೆ ಪೂರ್ವ ಸಮೀಕ್ಷೆಯ ಮತ್ತೊಂದು ಕಂತನ್ನು ಬಿಡುಗಡೆ ಮಾಡಿದೆ. ಇದು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೈಗೊಂಡಿರುವ ಸಮೀಕ್ಷೆಯ ಪಕ್ಷಿನೋಟ.
CSDS-CNN-IBN survey ಪ್ರಕಾರ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಆಡಳಿತಾರೂಢ (ಸಮ್ಮಿಶ್ರ ಸರಕಾರ ಮತ್ತು ಮೋದಿ ನೇತೃತ್ವದ ಬಿಜೆಪಿ ಆಡಳಿತ) ಪಕ್ಷಗಳ ಪರವೇ ಜನ ಈ ಕ್ಷಣದ ಮಟ್ಟಿಗೆ ಒಲವು ಹೊಂದಿದ್ದಾರೆ.
1990ರಿಂದ ಒಮ್ಮೆ Congress-Nationalist Congress Party ಅಧಿಕಾರಕ್ಕೆ ಮತ್ತೊಮ್ಮೆ Bharatiya Janata Party-Shiv Sena ಜೋಡಿ ಅಧಿಕಾರದ ಗದ್ದುಗೆಯೇರುತ್ತಿದೆ. ಆದರೆ ಬಹುತೇಕ 2 ದಶಕಗಳಿಂದ ಒಂದೇ ಸಮನೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ.

2009ರ ಲೋಕಸಭಾ ಚುನಾವಣೆಯಿಂದೀಚೆಗೂ ಪರಿಸ್ಥಿತಿ ಭಿನ್ನವಾಗಿಲ್ಲ. 2009ರಲ್ಲಿ Congress-NCP ಮೈತ್ರಿ ಶೇ. 39ರಷ್ಟು ಗಳಿಸಿತ್ತು. ಅದೀಗ ಶೇ. 43ಕ್ಕೆ ಜಿಗಿದಿದೆ. ಆದರೆ ಈ ಮತ ಗಳಿಕೆಯಿಂದ ಸ್ಥಾನಗಳ ಸಂಖ್ಯೆ ವೃದ್ಧಿಸಲಿದೆ ಎನ್ನುವ ಹಾಗಿಲ್ಲ. 23-27 ಸಂಸದರು ಆಯ್ಕೆಯಾಗಬಹುದು. 2009ರಲ್ಲಿ 25 ಸ್ಥಾನಗಳನ್ನು Congress-NCP ಮೈತ್ರಿ ಗೆದ್ದುಕೊಂಡಿತ್ತು.
ಇನ್ನು BJP-Shiv Sena ಜೋಡಿ 18-22 ಸ್ಥಾನ ಗಳಿಸಿದರೆ MNS ಮತ್ತಿತರ ಪಕ್ಷಗಳು 2-4 ಸ್ಥಾನ ಗೆದ್ದುಕೊಳ್ಳಬಹುದು. ಶೇ. 25ರಷ್ಟು ಮಂದಿ ಮತದಾರರು Congress-NCP ಜಂಟಿಯಾಗಿ ಚುನಾವಣೆ ಎದುರಿಸಬೇಕು ಎಂದಿದ್ದರೆ ಶೇ. 20ರಷ್ಟು ಮಂದಿ ಪ್ರತ್ಯೇಕವಾಗಿ ಚುನಾವಣೆ ಎದುರಿಸಲಿ ಎಂದು ಬಯಸಿದ್ದಾರೆ.
ಗುಜರಾತಿನಲ್ಲೇನು?
CSDS-CNN-IBN survey ಪ್ರಕಾರ ಗುಜರಾತ್ ರಾಜ್ಯದಲ್ಲಿ ಆಡಳಿತಾರೂಢ ಮೋದಿ ನೇತೃತ್ವದ ಬಿಜೆಪಿ ಆಡಳಿತಕ್ಕೆ ಜನ ಈ ಕ್ಷಣದ ಮಚ್ಚುಗೆ ತೋರಿದ್ದಾರೆ. ಕಾಂಗ್ರೆಸ್ ಮತಗಳಿಕೆ ಇಳಿಜಾರುತ್ತಿದ್ದರೆ ಬಿಜೆಪಿ ಮತ ಸಂಪಾದನೆ ಹೆಚ್ಚುತ್ತಾ ಸಾಗಿದೆ. ಮೋದಿ ಜನಪ್ರಿಯತೆ ಬಿಜೆಪಿಗೆ ವರದಾನವಾಗಲಿದೆ. 2009ರಲ್ಲಿ 15 ಸಂಸದರನ್ನು ಆರಿಸಿ ಕಳಿಸಿದ್ದ ಬಿಜೆಪಿ ಈ ಬಾರಿ 20-24 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಕಾಂಗ್ರೆಸ್ ಅಬ್ಬಬ್ಬಾ ಅಂದರೆ 2-6 ಸ್ಥಾನ (ಈ ಹಿಂದೆ 11) ಗೆಲ್ಲಬಹುದಷ್ಟೇ.
ಶೇ. 64ರಷ್ಟು ಮೋದಿ ಆಡಳಿತಕ್ಕೆ ಉಘೇ ಉಘೇ ಅಂದಿದ್ದಾರೆ. ಇದೇ ವೇಳೆ ಮೋದಿ ಪ್ರಧಾನಿಯಾಗಿ ದೆಹಲಿಗೆ ಹೊರಟರೆ ಅವರ ಕಟ್ಟಾ ಅನುಯಾಯಿ ಅಮಿತ್ ಷಾ ಗುಜರಾತ್ ಮುಖ್ಯಯಂತ್ರಿಯಾಗಬೇಕು ಎಂದು ಜನ ಬಯಸಿದ್ದಾರೆ.












Click it and Unblock the Notifications