ಇತ್ತೀಚೆಗೆ ಕಂಡ ಬಣ್ಣ ಬಣ್ಣದ ಸುದ್ದಿ ಚಿತ್ರಗಳು
ಬೆಂಗಳೂರು,
ಜು.28: ಕಳೆದೊಂದು ವಾರದಲ್ಲಿ ಕಂಡ ಪ್ರಮುಖ ಸುದ್ದಿಗಳ ಚಿತ್ರಗಳು ನಿಮ್ಮ ಮುಂದಿಡಲಿದ್ದೇವೆ. ಇದಕ್ಕೂ ಮುನ್ನ ಚಿತ್ರಗಳೇ ಸುದ್ದಿಗಳಾಗಿ ಬಣ್ಣ ಬಣ್ಣದ ನೋಡಿದ ಕೂಡಲೇ ವಾಹ್ ಎನ್ನುವಂಥ ಕೆಲವು ಚಿತ್ರಗಳನ್ನು ಆಯ್ದು ಇಲ್ಲಿ ಕೊಟ್ಟಿದ್ದೇವೆ ನೋಡಿ ಆನಂದಿಸಿ.. id="toptextpromo"> id='are-slot-1' class='oiad oi-axt oiadv'>ನವದೆಹಲಿಯ
ಹಜ್ರಾತ್ ನಿಜಾಮುದ್ದೀನ್ ದರ್ಗಾದಲ್ಲಿ ಕಂಡ ವೀಣಾ ಮಲ್ಲಿಕ್, ಮಳೆ ನಡುವೆ ಕಂಡ ಜೋಡಿ, ಬಾರ್ಸಿಲೋನದಲ್ಲಿ ವಿಶ್ವ ಈಜು ಚಾಂಪಿಯನ್ ಶಿಪ್ ದೃಶ್ಯಗಳು, ಕೊಚ್ಚಿಯ ಸಣ್ಣ ಬೋಟ್ ಗಳು, ಉತ್ತರ ಕೊರಿಯಾದ ಪರೇಡ್, ಕೊಯಮತ್ತೂರಿನಲ್ಲಿ ಭಾರತದ ಬಾವುಟ, ಮಳೆಯಲ್ಲಿ ಹಣ್ಣು ವ್ಯಾಪಾರಿ, ಹೈದರಾಬಾದಿನ ವಿದ್ಯಾರ್ಥಿ ಸಮೂಹ, ಉತ್ತರಪ್ರದೇಶದಲ್ಲಿ ಉಚಿತ ಲ್ಯಾಪ್ ಟಾಪ್ ಪಡೆದ ವಿದ್ಯಾರ್ಥಿನಿಯರು ಸೇರಿದಂತೆ ಹಲವು ಸೆಳೆಯುವ ಚಿತ್ರಗಳು ಇಲ್ಲಿವೆ ನೋಡಿ.. ಇದರ ಜೊತೆಗೆ ಎಂದಿನಂತೆ ಇತ್ತೀಚಿನ ಸುದ್ದಿ ಚಿತ್ರಗಳಿವೆ id='are-slot-2' class='oiad oi-axt oiadv'>
ದರ್ಗಾದಲ್ಲಿ ವೀಣಾ
ನವದೆಹಲಿಯ ಹಜ್ರಾತ್ ನಿಜಾಮುದ್ದೀನ್ ದರ್ಗಾದಲ್ಲಿ ಕಂಡ ಪಾಕಿಸ್ತಾನ ಮೂಲದ ಬಾಲಿವುಡ್ ನಟಿ ವೀಣಾ ಮಲ್ಲಿಕ್

ನೆದರ್ಲೆಂಡ್ ಮತ್ಸಕನ್ಯೆಯರು
ಬಾರ್ಸಿಲೋನ : ನೆದರ್ಲೆಂಡ್ ತಂಡದ ಮತ್ಸಕನ್ಯೆಯರು ಸಂಯೋಜಿತ ಈಜು ಸ್ಪರ್ಧೆಯಲ್ಲಿ ಕಾಣಿಸಿದ್ದು ಹೀಗೆ FINA ಸ್ಮಿಮ್ಮಿಂಗ್ ವಿಶ್ವಚಾಂಪಿಯನ್, ಸ್ಪೇನ್ ಚಿತ್ರ

ಕೋರಿಯಾದ ರಂಗು
ಉತ್ತರಕೋರಿಯಾದ ಮಹಿಳೆಯರು ತಮ್ಮ ನಾಯಕ ಕಿಮ್ ಜಾಂಗ್ ಉನ್ ಅವರ ಪರ ಸ್ವಾಗತ ಕೋರುತ್ತಿದ್ದಾರೆ. ಕಿಂಗ್ ಸಂಗ್ ಸ್ಕ್ವೇರ್ ನಲ್ಲಿ ಕೊರಿಯಾ ಯುದ್ಧದ 60 ವಾರ್ಷಿಕೋತ್ಸವ ಅಂಗವಾಗಿ ಬೃಹತ್ ಮಿಲಿಟರಿ ಪರೇಡ್ ನಡೆಸಲಾಯಿತು.

ಕಿರೀಟ ತೊಟ್ಟ ಪೋಪ್
ರಿಯೋ ಡಿ ಜನೈರೋ: ಬ್ರೆಜಿಲ್ಲಿನ ಮೂಲ ನಿವಾಸಿಗಳು ಕೊಟ್ಟ ಪುಕ್ಕದ ಕಿರೀಟ ತೊಟ್ಟ ಪೋಪ್, ಬ್ರೆಜಿಲ್ ಗೆ 6 ದಿನಗಳ ಪ್ರವಾಸದ ಮೇಲೆ ಬಂದಿರುವ ರೋಮನ್ ಕ್ಯಾಥೋಲಿಕ್ ಧರ್ಮಗುರು ಪೋಪ್ ಅವರು ರಿಯೋದಲ್ಲಿ ನಡೆಯಲಿರುವ ವಿಶ್ವ ಯುವ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಗ್ರಾಹಕರ ನಿರೀಕ್ಷೆಯಲ್ಲಿ
ನವದೆಹಲಿ: ಮಳೆ ನಡುವೆ ಯಾರಾದರೂ ಗ್ರಾಹಕರು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿರುವ ಹಣ್ಣಿನ ವ್ಯಾಪಾರಿ. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ಛತ್ರಿಗಳು ಛತ್ರಿಗಳು
ಕೋಲ್ಕತ್ತಾ: ಮಳೆಗಾಲದಲ್ಲಿ ಕೋಲ್ಕತ್ತಾದ ರೈಲು ನಿಲ್ದಾಣಗಳಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯ

ರಷ್ಯಾದ ಬಾಲೆಯರು
ಬಾರ್ಸಿಲೋನ : ಸ್ಪೇನ್ ನಲ್ಲಿ ನಡೆದಿರುವ FINA ಸ್ಮಿಮ್ಮಿಂಗ್ ವಿಶ್ವಚಾಂಪಿಯನ್ ನಲ್ಲಿ ರಷ್ಯಾದ ಈಜುಗಾರ್ತಿಯರು

ನೆದರ್ಲೆಂಡ್ ಈಜುಗಾರ್ತಿ
ಸ್ಪೇನ್ ನಲ್ಲಿ ನಡೆದಿರುವ FINA ಸ್ಮಿಮ್ಮಿಂಗ್ ವಿಶ್ವಚಾಂಪಿಯನ್ ನಲ್ಲಿ ನೆದರ್ಲೆಂಡ್ ಈಜುಗಾರ್ತಿ

ಐಐಟಿ ಖರಗ್ ಪುರ
59ನೇ ವಿವಿ ಘಟಿಕೋತ್ಸವದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್ ಪುರದ ವಿದ್ಯಾರ್ಥಿಗಳು

ಕೊಚ್ಚಿಯ ಸಣ್ಣ ಬೋಟ್
ಕೊಚ್ಚಿಯಲ್ಲಿ ಮೀನುಗಾರರು ಬಳಸುವ ಸಣ್ಣ ಬೋಟುಗಳ ನೋಟ

ಮಳೆ ಆನಂದ
ನವದೆಹಲಿ: ದೇಶದ ಇತರೆ ಭಾಗಕ್ಕೆ ಹೋಲಿಸಿದರೆ ಪ್ರವಾಹ, ಭರ್ಜರಿ ಮಳೆ ನಡುವೆ ಮಳೆಯನ್ನು ಅನಂದಿಸುವುದರಲ್ಲಿ ದೆಹಲಿ ಜನತೆ ಇತರರಿಗಿಂತ ಮುಂದಿದ್ದಾರೆ. ದೆಹಲಿಯ ಜೋಡಿ ಮಳೆಯಲ್ಲಿ ಇತ್ತೀಚೆಗೆ ಕಂಡಿದ್ದು ಹೀಗೆ

ಡಿಗ್ರಿ ಪಡೆದ ಖುಷಿ
ಹೈದರಾಬಾದ್ : ನಲ್ಸರ್ ವಿಶ್ವವಿದ್ಯಾಲಯದ 11ನೇ ವಿವಿ ಘಟಿಕೋತ್ಸವದಲ್ಲಿ ಪದವಿ ಪಡೆದ ನಂತರ ವಿದ್ಯಾರ್ಥಿಗಳ ಸಂಭ್ರಮ

ತ್ರಿವರ್ಣ ಧ್ವಜ
ಕೊಯಮತ್ತೂರು: ಭಾರತ ತ್ರಿವರ್ಣ ಧ್ವಜದ ಮೇಲೆ ಅಶೋಕ ಚಕ್ರದ ಮುದ್ರೆ ಬೀಳುತ್ತಿದೆ. ಸ್ವತಂತ್ರ ದಿನಕ್ಕಾಗಿ ಧ್ವಜ ತಯಾರಾಗುತ್ತಿದೆ.

ಲಖ್ನೋದಲ್ಲಿ ಲ್ಯಾಪ್ ಟಾಪ್
ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರಿಂದ ಉಚಿತ ಲ್ಯಾಪ್ ಟಾಪ್ ಪಡೆದ ವಿದ್ಯಾರ್ಥಿನಿಯರು. PTI Photo by Nand Kumar

ಕುದುರೆ ಸವಾರರು
ಚೆನ್ನೈ: ಮರೀನಾ ಕಡಲ ತೀರದಲ್ಲಿ ಭಾನುವಾರ ಸಂಜೆ ಕಂಡ ಕುದುರೆ ಸವಾರಿ ನಿರತ ಪೊಲೀಸರು












Click it and Unblock the Notifications