ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ಹಾಕ್ತಾರೆ!

ಬೆಂಗಳೂರು, ಜು.27 : ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದು, ಮಲ-ಮೂತ್ರ ವಿಸರ್ಜಿಸುವುದು, ಉಗುಳುವುದು ಮುಂತಾದವುಗಳಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಕರ್ನಾಟಕ ಪೌರ ನಿಗಮಗಳ ತಿದ್ದುಪಡಿ ವಿದೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರಕಿದೆ.

ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ಮತ್ತು ನಗರಸಭೆಗಳ ವ್ಯಾಪ್ತಿಯಲ್ಲಿ ಈ ವಿಧೇಯಕ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಈ ವಿಧೇಯಕದಿಂದ ನಗರಗಳ ಕಸದ ಸಮಸ್ಯೆಗೆ ಪರಿಹಾರ ದೊರಕುವ ನಿರೀಕ್ಷೆ ಇದೆ.

ಶುಕ್ರವಾರ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ವಿಧಾನಸಭೆಯಲ್ಲಿ ವಿಧೇಯಕಕ್ಕೆ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಪಕ್ಷಗಳು ಕೆಲವೊಂದು ಸಲಹೆಗಳನ್ನು ನೀಡಿ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿವೆ.

ತಿದ್ದುಪಡಿ ಕಾಯ್ದೆ ಅನ್ವಯ ಕಸ ಸುರಿಯುವುದು, ಉಗುಳುವುದು, ಮಲ ಮತ್ತು ಮೂರ್ತ ವಿಸರ್ಜನೆ ಮಾಡುವುದು, ಎಲ್ಲೆಂದರಲ್ಲಿ ಕಟ್ಟಡ ನಿರ್ಮಾಣ ತಾಜ್ಯ ಸುರಿಯುವುದು. ಸಾರ್ವಜನಿಕ ಸ್ಥಳಗಳಲ್ಲಿನ ನಿಯಮ ಉಲ್ಲಂಘಿಸಿದರೆ ದಂಡ ಕಟ್ಟಬೇಕು, ಇಲ್ಲವೇ ಜೈಲು ಸೇರಬೇಕು. ವಿಧೇಯಕದ ಪ್ರಮುಖ ಅಂಶಗಳು ಹೀಗಿವೆ.

ರಸ್ತೆ ಬದಿ ಕಸ ಸುರಿದರೆ ದಂಡ

ರಸ್ತೆ ಬದಿ ಕಸ ಸುರಿದರೆ ದಂಡ

ರಸ್ತೆ ಬದಿ ಕಸ ಹಾಕುವುದು, ಉಗಿಯುವುದು, ಮಲ ಅಥವ ಮೂತ್ರ ವಿಸರ್ಜನೆ ಮಲವಿಸರ್ಜನೆ ಮಾಡಿದರೆ ದಂಡ ಕಟ್ಟಬೇಕು. ಮೊದಲ ಅಪರಾಧಕ್ಕೆ 100 ರೂ., 2ನೇ ಅಪರಾಧಕ್ಕೆ 200 ರೂ., ಇದೇ ರೀತಿ ಐದನೇ ಬಾರಿ ಅಪರಾಧ ಎಸಗಿದರೆ 500 ರೂ. ದಂಡ ಇಲ್ಲವೇ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಕಸ ವಿಂಗಡಣೆ ಕಡ್ಡಾಯ

ಕಸ ವಿಂಗಡಣೆ ಕಡ್ಡಾಯ

ಪೌರ ಕಾರ್ಮಿಕರಿಗೆ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ನೀಡವುದು ಕಡ್ಡಾಯ. ಮನೆಯ ಕಸ ವಿಂಗಡನೆ ಮಾಡದೆ ನೀಡಿದರೆ, ಮೊದಲ ಅಪರಾಧಕ್ಕೆ 100 ರೂ., ಎರಡನೇ ಅಪರಾಧಕ್ಕೆ 500 ರೂ. ದಂಡ ಕಟ್ಟಬೇಕಾಗುತ್ತದೆ.

ಮಾಲ್ ಗಳಿಗೂ ಇವು ಅನ್ವಯ

ಮಾಲ್ ಗಳಿಗೂ ಇವು ಅನ್ವಯ

ವಾಣಿಜ್ಯ ಸಂಕೀರ್ಣಗಳು ಮತ್ತು ಕಚೇರಿಗಳ ತ್ಯಾಜ್ಯಗಳನ್ನು ವಿಂಗಡನೆ ಮಾಡಿ ನೀಡುವುದು ಕಡ್ಡಾಯ. ತಪ್ಪಿದರೆ ಮೊದಲ ಅಪರಾಧಕ್ಕೆ 500 ರೂ., 2ನೇ ಅಪರಾಧಕ್ಕೆ 1000 ರೂ. ದಂಡ ಪಾವತಿ ಮಾಡಬೇಕು.

ಕಟ್ಟಡ ನಿರ್ಮಾಣ ಮತ್ತು ಆಸ್ಪತ್ರೆಗೂ ಅನ್ವಯ

ಕಟ್ಟಡ ನಿರ್ಮಾಣ ಮತ್ತು ಆಸ್ಪತ್ರೆಗೂ ಅನ್ವಯ

ಆಸ್ಪತ್ರೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳ ತ್ಯಾಜ್ಯಕ್ಕೂ ವಿಧೇಯಕ ನಿಯಂತ್ರಣ ವಿಧಿಸಿದೆ. ಕಟ್ಟಡ ನಿರ್ಮಾಣ ಕಾರ್ಯಗಳನ್ನು ಎಲ್ಲೆಂದರಲ್ಲಿ ಸುರಿದರೆ, ಮೊದಲು 1000 ಮತ್ತು ನಂತರ 5000 ರೂ. ದಂಡ ಕಟ್ಟಬೇಕಾಗುತ್ತದೆ. ವೈದ್ಯಕೀಯ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ಕೊಡಲು ವಿಫಲರಾದರೆ ಮೊದಲ ಅಪರಾಧಕ್ಕೆ 500 ರೂ., 2ನೇ ಅಪರಾಧಕ್ಕೆ 1000 ರೂ. ದಂಡ ಕಟ್ಟಬೇಕು.

ಘನ ತ್ಯಾಜ್ಯ ಸುರಿಯುವಂತಿಲ್ಲ

ಘನ ತ್ಯಾಜ್ಯ ಸುರಿಯುವಂತಿಲ್ಲ

ಕಸ, ಹೊಲಸು, ಸತ್ತ ಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆದರೆ, ಮೊದಲ ಅಪರಾಧಕ್ಕೆ 100 ರೂ. ಹಾಗೂ 2ನೇ ಅಪರಾಧಕ್ಕೆ 200 ರೂ. ದಂಡ ಕಟ್ಟಬೇಕಾಗುತ್ತದೆ. ಎಲ್ಲಾ ಅಪರಾಧಗಳು ಐದು ಬಾರಿ ಪುನರಾವರ್ತನೆ ಆದರೆ, ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು.

ಸಾರ್ವಜನಿಕ ಸ್ಥಳದಲ್ಲಿ ಏನು ಮಾಡಬಾರದು

ಸಾರ್ವಜನಿಕ ಸ್ಥಳದಲ್ಲಿ ಏನು ಮಾಡಬಾರದು

ಉದ್ಯಾನವನ. ರಸ್ತೆ, ಬಸ್ ಮತ್ತು ರೈಲು ನಿಲ್ದಾಣ, ಆಟದ ಮೈದಾನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಇರುವ ನಿಯಮ ಉಲ್ಲಂಘಿಸಿದರೆ, ಮೊದಲ ಬಾರಿಗೆ 100 ರೂ., 2ನೇ ಅಪರಾಧಕ್ಕೆ 200 ರೂ. ದಂಡ ವಿಧಿಸಲಾಗುತ್ತದೆ.

ಪ್ರತಿ ಪಕ್ಷಗಳ ಸಲಹೆ ಏನು?

ಪ್ರತಿ ಪಕ್ಷಗಳ ಸಲಹೆ ಏನು?

ಪ್ರತಿಪಕ್ಷ ಬಿಜೆಪಿ ವಿಧೇಯಕಕ್ಕೆ ಅನುಮೋದನೆ ನೀಡಿದರೂ ಸಲಹೆಯೊಂದನ್ನು ನೀಡಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್,ವಿಧಾನಸಭೆಯಲ್ಲಿ, ನಗರಗಳ ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಿ ನಂತರ ಕಾನೂನು ಜಾರಿಗೆ ತನ್ನಿ ಎಂದು ಸಿಎಂ ಸಿದ್ದರಾಮುಯ್ಯ ಅವರಿಗೆ ಸಲಹೆ ನೀಡಿದ್ದಾರೆ.

ಜಾರಿಗೆ ಬಂದಿದ್ದು ಏಕೆ?

ಜಾರಿಗೆ ಬಂದಿದ್ದು ಏಕೆ?

ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಬಗೆಹರಿಸಲು ಸರ್ಕಾರ ಮತ್ತು ಬಿಬಿಎಂಪಿ ವಿಫಲವಾಗಿತ್ತು. ರಸ್ತೆಯಲ್ಲಿ ಕಸ ಕೊಳೆಯುತ್ತಾ ಬಿದ್ದಿತ್ತು. ಇದರ ವಿರುದ್ದ ಹೈಕೋರ್ಟ್ ನಲ್ಲಿ ದೂರು ಸಹ ದಾಖಲಾಗಿತ್ತು. ನ್ಯಾಯಾಲಯದ ಆದೇಶದಿಂದ ಎಚ್ಚೆತ್ತ ಸರ್ಕಾರ ವಿಧೇಯಕವನ್ನು ಮಂಡಿಸಿ, ಭವಿಷ್ಯದಲ್ಲಿ ಕಸದ ಸಮಸ್ಯೆ ಎದುರಾಗದಂತೆ ಚಿಂತಿಸಿತ್ತು. ಅದಕ್ಕೆ ವಿಧಾನಸಭೆಯ ಒಪ್ಪಿಗೆಯೂ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+