ಕರ್ನಾಟಕದಲ್ಲಿ ಜನ ಸಾಮಾನ್ಯ ಪಕ್ಷ ಉದಯ

Aam Aadmi Party Karnataka launch on Jul 27
ಬೆಂಗಳೂರು, ಜು.26: ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ ಅವರ ಆಮ್ ಆದ್ಮಿ ಪಾರ್ಟಿ(ಜನ ಸಾಮಾನ್ಯರ ಪಕ್ಷ) ಕರ್ನಾಟಕ ಶನಿವಾರ ಮಧ್ಯಾಹ್ನ ಉದಯವಾಗಲಿದೆ.

ವ್ಯವಸ್ಥೆ ಪರಿವರ್ತನೆ, ಜನ ಲೋಕಪಾಲ, ರಾಜಕೀಯ ವಿಕೇಂದ್ರಿಕರಣ, ನಿರಾಕರಣೆ ಹಕ್ಕು(Right to reject), ವಾಪಸ್ ಕರೆಸುವ ಹಕ್ಕು(Right to recall) ಮುಂತಾದ ಆಶಯದೊಂದಿಗೆ ಆರಂಭವಾಗಿರುವ ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕವನ್ನು ಶನಿವಾರ ಉದ್ಘಾಟನೆ ಮಾಡಲಾಗುವುದು ಎಂದು AAP ಕರ್ನಾಟಕದ ಸದಸ್ಯರು ಹೇಳಿದ್ದಾರೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ, ಪಕ್ಷ ಸ್ಥಾಪಕ ಅರವಿಂದ್ ಕೇಜ್ರಿವಾಲ, ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ, ವಿ ಬಾಲಸುಬ್ರಮಣ್ಯ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಂದಿರಾನಗರ ನ್ಯೂ ಹಾರಿಜನ್ ಸ್ಕೂಲ್ ನಲ್ಲಿ ಶನಿವಾರ ಮಧ್ನಾಹ್ನ 3 ಗಂಟೆಯಿಂದ 6 ಗಂಟೆ ತನಕ ನಡೆಯುವ ಸರಳ ಸಮಾರಂಭದಲ್ಲಿ ಜನ ಸಾಮಾನ್ಯರ ಪಕ್ಷಕ್ಕೆ ಚಾಲನೆ ನೀಡಲಾಗುತ್ತದೆ.

ಪಕ್ಷ ಸ್ಥಾಪನೆಗೂ ಮುನ್ನ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಗದಗ, ಹಾವೇರಿ, ಚಿಕ್ಕಮಗಳೂರು ಇನ್ನಿತರ ಕಡೆಗಳಲ್ಲಿ ಪೂರ್ವಭಾವಿ ಸಭೆ, ಚರ್ಚೆ ನಡೆಸಿ ಜನಾಭಿಪ್ರಾಯವನ್ನು ಆಮ್ ಆದ್ಮಿ ಪಕ್ಷ ಪಡೆದಿದ್ದು ವಿಶೇಷವಾಗಿತ್ತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟತೆ ತೊಲಗಿಸಿ, ಪಾರದರ್ಶಕ ಆಡಳಿತ ಕಾಣುವ ಭರವಸೆಯ ಆಶಾಕಿರಣವಾಗಿ ಆಮ್ ಆದ್ಮಿ ಪಕ್ಷವನ್ನು ಜನತೆ ಕಾಣುತ್ತಿದೆ. 2012 ನವೆಂಬರ್ 26ರಂದು ಆಮ್ ಆದ್ಮಿ ಪಕ್ಷ ಅಧಿಕೃತವಾಗಿ ಚಾಲನೆಗೊಂಡಿತು.

ದೆಹಲಿ ಸರ್ಕಾರದ ಜಲ ಹಾಗೂ ವಿದ್ಯುತ್ ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಇಳಿಯುವ ಮೂಲಕ ಆಮ್ ಆದ್ಮಿ ಪಕ್ಷ ಹೆಚ್ಚು ಜನರಿಗೆ ಹತ್ತಿರವಾಗಿದೆ. ಸಾರ್ವಜನಿಕರ ಮೂಲಭೂತ ಸೌಕರ್ಯಗಳಾದ ನೀರು, ಆಹಾರ, ಇಂಧನ ಹಾಗೂ ವಿದ್ಯುತ್ ಬೆಲೆ ಏರಿಕೆ ವಿರುದ್ಧ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿದೆ.

ಆಮ್ ಆದ್ಮಿ ಪಕ್ಷದಲ್ಲಿ ಪಾರದರ್ಶಕತೆಯೇ ಮೂಲ ಮಂತ್ರವಾಗಿದ್ದು ಪಕ್ಷದ ನಿಧಿ ರೂಪದಲ್ಲಿ ಸಿಗುವ 1 ರುಪಾಯಿ ಲೆಕ್ಕ ಕೂಡಾ ಸಾರ್ವಜನಿಕರಿಗೆ ತಿಳಿಯುವಂತೆ ವೆಬ್ ಸೈಟ್ ನಲ್ಲಿ ಖರ್ಚು ವೆಚ್ಚಗಳ ವಿವರಗಳನ್ನು ನೀಡಲಾಗುತ್ತಿದೆ. ಆಮ್ ಆದ್ಮಿ ಪಕ್ಷದಲ್ಲಿ ಹೈಕಮಾಂಡ್ ಸಂಸ್ಕೃತಿ ಇಲ್ಲ. ಕೌನ್ಸಿಲ್ ಸದಸ್ಯರು ಕಾರ್ಯಕಾರಿ ಸದಸ್ಯರನ್ನು ನೇಮಕ ಮಾಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+