ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಲೂರು : ಕೆರೆಗೆ ಉರುಳಿದ ಸರ್ಕಾರಿ ಬಸ್ 8 ಸಾವು

|
Google Oneindia Kannada News

ಹಾಸನ, ಜು.23 : ಬೇಲೂರಿನ ವಿಷ್ಣುಸಮುದ್ರ ಕೆರೆಗೆ ಕೆಎಸ್ಆರ್ ಟಿಸಿ ಬಸ್ ಪಲ್ಟಿ ಹೊಡೆದ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಿದೆ. ಒಟ್ಟು 8 ಮಂದಿ ಪ್ರಯಾಣಿಕರು ದುರಂತದಲ್ಲಿ ಮೃತಪಟ್ಟಿದ್ದಾರೆ. 15 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು, ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ ನಲ್ಲಿ ಒಟ್ಟು 55 ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು ಕೆಎಸ್ಆರ್ ಟಿಸಿ ಘಟಕಕ್ಕೆ ಸೇರಿದ ಸುವರ್ಣ ಕರ್ನಾಟಕ ಸಾರಿಗೆ ಬಸ್ ಇದಾಗಿತ್ತು ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಬಸ್ ಚಾಲಕ ಗಾಯಗೊಂಡಿದ್ದು, ಕಂಡಕ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಬಸ್ ನಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ಮುಗಿದಿದ್ದು, ಗಾಯಾಳುಗಳನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಕೆಎಸ್ಆರ್ ಟಿಸಿ ಭರವಸೆ ನೀಡಿದೆ. ಅಪಘಾತದಲ್ಲಿ ಸತ್ತವರ ಸಂಖ್ಯೆ 8 ಕ್ಕೆ ಏರಿದ್ದು, 15 ಜನರ ಸ್ಥಿತಿ ಗಂಭೀರವಾಗಿದೆ.

ಎರಡು ಕ್ರೇನ್ ಗಳ ಸಹಾಯದಿಂದ ಬಸ್ ಅನ್ನು ಕೆರೆಯಿಂದ ಮೇಲೆತ್ತಲಾಗಿದೆ. ಪ್ರಕರಣ ದಾಖಲಿಸಿಕೊಂಡ ಬೇಲೂರು ಪೊಲೀಸರು, ಕೆರೆಗೆ ತಡೆಗೋಡೆ ನಿರ್ಮಿಸದಿರುವುದೇ ಘಟನೆಗೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿಸಿದ್ದಾರೆ.

ಸತ್ತವರ ವಿವರ : ವಿಶ್ವನಾಥ್ (ಬಸ್ ಕಂಡಕ್ಟರ್), ವಿವಿ ಪಿಂಟೋ (ತೃತೀಯ ಬಿಕಾಂ ವಿದ್ಯಾರ್ಥಿ), ಅರೇಹಳ್ಳಿಯ ಹಮೀದ್ (40), ಇಂಟಿತೊಳಲಿಯ ತಮ್ಮಣ್ಣಗೌಡ, ಸೋಮೇನಹಳ್ಳಿಯ ಲೋಕೇಶ, ಬಿಕ್ಕೋಡಿನ ಯಶೋದಾ (27), ಗೋಪಾಲ್ (35), ಅರೇಹಳ್ಳಿಯ ಮಹ್ಮದ್ (40) ಮೃತ ದೇಹಗಳನ್ನು ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.

ksrtc
ಘಟನೆಯ ಕುರಿತು : ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ಸಕಲೇಶಪುರದಿಂದ ಬೇಲೂರಿಗೆ ಆಗಮಿಸುತ್ತಿದ್ದ ಸರ್ಕಾರಿ ಬಸ್ ಬೇಲೂರು ಹೊರವಲಯದ ಶನಿ ದೇವಾಲಯದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ವಿಷ್ಣುಸಮುದ್ರ ಕೆರೆಗೆ ಉರುಳಿತ್ತು. ಬಸ್ ಮುಕ್ಕಾಲು ಭಾಗ ಕೆರೆಯಲ್ಲಿ ಮುಳುಗಿ ಹೋಗಿತ್ತು.

ಬಸ್ ಕೆರೆಗೆ ಉರುಳಿದ ತಕ್ಷಣ ಕೆಲವರು ಈಜಿಕೊಂಡು ದರ ಸೇರಿದರೆ, ಕೆರೆಯಲ್ಲಿ ಮೀನು ಹಿಡಿಯುತ್ತಿದ್ದವರು ಸುಮಾರು 30 ಮಂದಿಯನ್ನು ರಕ್ಷಿಸಿದ್ದರು. ಹಾಸನ ಮತ್ತು ಬೇಲೂರಿನ ಅಗ್ನಿ ಶಾಮಕ ದಳದ ಕಾರ್ಯಚರಣೆಯಿಂದ ಬಸ್ ನಲ್ಲಿದ್ದವರನ್ನು ರಕ್ಷಿಸಲಾಯಿತು. ಆದರೆ, ಎಂಟು ಮಂದಿ ಅಪಘಾತದಿಂದಾಗಿ ಮೃತಪಟ್ಟಿದ್ದಾರೆ.

ಸರ್ಕಾರದಿಂದ ಪರಿಹಾರ ಘೋಷಣೆ : ಬೇಲೂರು ಬಸ್ ದುರಂತದಿಂದ ಮೃತಪಟ್ಟ ಕುಟುಂಬದವರಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದಾರೆ.

ಸರ್ಕಾರಿ ಬಸ್ ವಿವರ : ಬೇಲೂರಿನ ಬಳಿ ಕೆರೆಗೆ ಉರುಳಿದ್ದು ಕೆಎಸ್ಆರ್ ಟಿಸಿಯ ಸುವರ್ಣ ಕರ್ನಾಟಕ ಸಾರಿಗೆ. ಬಸ್ ಸಂಖ್ಯೆ ಕೆಎ-18, ಎಫ್-151. ಪ್ರತಿದಿನ ಸಕಲೇಶಪುರದಿಂದ ಬೇಲೂರು, ಬೇಲೂರಿನಿಂದ ಸಕಲೇಶಪುರಕ್ಕೆ ಬಸ್ ಸಂಚರಿಸುತ್ತದೆ. 2007ರಲ್ಲಿ ಈ ಬಸ್ ಅನ್ನು ಕೆಎಸ್ಆರ್ ಟಿಸಿ ಖರೀದಿ ಮಾಡಿತ್ತು.

ದುರಂತ ಸೋಮವಾರ : ಸೋಮವಾರ ಗುರು ಪೌರ್ಣಿಮೆಯಂದು ಗಾಣಗಪುರಕ್ಕೆ ತೆರಳಿದ್ದ ಮಹಾರಾಷ್ಟ್ರದ ಯಾತ್ರಾರ್ಥಿಗಳು ಬಿಜಾಪುರದ ಚಿಕ್ಕಸಿಂದಗಿ ಬಳಿ ಬಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಯಾತ್ರಾರ್ಥಿಗಳಿದ್ದ ಕ್ರುಸರ್ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು 18 ಜನರು ಸಾವನ್ನಪ್ಪಿದ್ದರು. ಮಂಗಳವಾರ ಬಸ್ ಕೆರೆಗೆ ಉರುಳಿದೆ. ಈವಾರ ದುರಂತಗಳೊಂದಿಗೆ ಆರಂಭವಾಗಿದೆ. (ಗುರುಪೌರ್ಣಿಮೆ ದುರಂತಕ್ಕೆ 18 ಬಲಿ)

English summary
KSRTC bus plunges into Vishnusamudra lake near Belur in Hassan district on 23rd July, Tuesday morning. According to eye witness more than 50 passengers were there. 4 bodies have been fished out so far, search is on for others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X