ಬೆಂಗಳೂರಲ್ಲಿ ಪಂ. ಶಿವಕುಮಾರ್ ಸಂತೂರ್ ಕಚೇರಿ

ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಂಸ್ಕೃತಿಯನ್ನು ಯವಕ ಯುವತಿಯರಲ್ಲಿ ಬಿತ್ತುವ ಉದ್ದೇಶದಿಂದ ಸ್ಥಾಪಿತವಾಗಿರುವ ಸ್ಪಿಕ್ ಮೆಕೆ ಸಂಸ್ಥೆ ಮತ್ತು ನಿಮ್ಹಾನ್ಸ್ ಜಿಮ್‌ಖಾನಾ ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿವೆ. ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಿಮ್ಹಾನ್ಸ್ ಎದುರಿಗಿದೆ.
ಆಹ್ವಾನ ಪತ್ರಿಕೆ ಇದ್ದವರಿಗೆ ಮಾತ್ರ ಪ್ರವೇಶ ಇರುತ್ತದೆ. ಆದ್ದರಿಂದ ಪಂಡಿತ್ ಶಿವಕುಮಾರ್ ಶರ್ಮಾ ಅವರ ಸಂತೂರ್ ವಾದನವನ್ನು ಕೇಳಬಯಸುವವರು ಆಹ್ವಾನ ಪತ್ರಿಕೆಯನ್ನು ಕಡ್ಡಾಯವಾಗಿ ತರತಕ್ಕದ್ದು. ನಿಮ್ಹಾನ್ಸ್ ಉದ್ಯೋಗಿಗಳು, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ತೋರಿಸಿ ಕೂಡ ಸಭಾಂಗಣವನ್ನು ಪ್ರವೇಶಿಸಬಹುದು.
ಕಾರ್ಯಕ್ರಮ ಸರಿಯಾಗಿ ಸಂಜೆ 6 ಗಂಟೆಗೆ ಆರಂಭವಾಗಲಿದ್ದು, 5.30ರ ನಂತರ ಪ್ರವೇಶ ದ್ವಾರ ತೆರೆಯಲಿದೆ. ಕಾರ್ಯಕ್ರಮ ಆರಂಭವಾಗುವ ಮೊದಲೇ ಸಂಗೀತ ಪ್ರೇಮಿಗಳು ಬಂದು ಆಸೀನರಾಗಬೇಕಾಗಿ ಕೋರಲಾಗಿದೆ. ಬಂದು ಕುಳಿತ ಮೇಲೆ ಮೊಬೈಲ್ ಆಫ್ ಮಾಡಬೇಕು ಮತ್ತು ಅಕ್ಕಪಕ್ಕ ಕುಳಿತವರ ಜೊತೆ ಹರಟೆ ಹೊಡೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಆಯೋಜಕರು ವಿನಂತಿಸಿಕೊಂಡಿದ್ದಾರೆ.
ಅಲ್ಲದೆ, ಕಾರ್ಯಕ್ರಮ ನಡೆಯುತ್ತಿರುವಾಗ ಕ್ಯಾಮೆರಾದಿಂದ ಫೋಟೋ ತೆಗೆಯುವುದನ್ನು, ಮೊಬೈಲ್ ಮತ್ತಿತರ ಸಾಧನಗಳ ಮುಖಾಂತರ ರೆಕಾರ್ಡ್ ಮಾಡಿಕೊಳ್ಳುವುದನ್ನು ಕೂಡ ನಿಷೇಧಿಸಲಾಗಿದೆ. ಇವೆಲ್ಲ ನಿಮಯಗಳು ಸಂಗೀತ ಆಸ್ವಾದಿಸಲು ಬರುವವರ ಗಮನದಲ್ಲಿರಲಿ.












Click it and Unblock the Notifications