ಮೋದಿ ಭಾಷಣಶಾಸ್ತ್ರವೂ, ಕ್ಲಿಂಟನ್ ಅರ್ಥಶಾಸ್ತ್ರವೂ!
ಹೈದರಾಬಾದ್, ಜುಲೈ 16: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಷಣದ Modinomics ಬಗ್ಗೆ ಹೇಳುವ ಮುನ್ನ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಬಗ್ಗೆ ಒಂಚೂರು ಇಲ್ಲಿ ಪ್ರಸ್ತಾಪಿಸಬೇಕಿದೆ.
ಹಿಲರಿ ಕ್ಲಿಂಟನ್ ಗೊತ್ತಲ್ಲ? ಯುಎಸ್ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಪತ್ನಿ. ಈಕೆ ಇತ್ತೀಚೆಗೆ ವಿದೇಶಾಂಗ ಸಚಿವಾಲಯ ತೊರೆದ ಮೇಲೆ ಭಾಷಣ ಮಾಡುವುದನ್ನೇ rather ಭಾಷಣಗಳನ್ನು ಬರೆದುಕೊಡುವುದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಹಿಲರಿ ಭಾಷಣದ ಲಹರಿಗೆ ಮನಸೋಲದವರೇ ಇಲ್ಲ!
ದೊಡ್ಡ ದೊಡ್ಡ ಉದ್ದಿಮೆದಾರರು ಮತ್ತು ರಾಜಕಾರಣಿಗಳಿಗೆ ಈಕೆ ಇತ್ತಿತ್ಲಾಗೆ ಅತ್ಯುತ್ತಮ ಭಾಷಣಗಳನ್ನು ಸಿದ್ಧಪಡಿಸಿಕೊಡುವ ಕಾಯಕದಲ್ಲಿ ಮಗ್ನರಾಗಿದ್ದಾರೆ. paid news ಕೇಳಿದ್ದೀರಿ ಅಲ್ವಾ? ಅದೇ ಮಾದರಿ ಈಗ paid speechmaking ಜಮಾನಾ ಶುರುವಾಗಿದೆ. ನಮ್ಮ ಭಾರತದ ರಾಜಕಾರಣಿಗಳಿಗೆ ಹೋಲಿಸಿದರೆ 'ಅಯ್ಯೋ ಅವರು ಮೊದಲಿಂದಲೂ ಬೇರೆ ಯಾರೋ ಬುದ್ಧಿಜೀವಿಗಳು ಸಿದ್ಧಪಡಿಸುವ ಭಾಷಣವನ್ನೇ ಅಲ್ವಾ ಮಾತನಾಡೋದು?' ಎಂದು ನೀವು ಮೂಗು ಮುರಿಯಬಹುದು.

ಹಿಲರಿ paid speechmaking
ಆದರೆ ಹಿಲರಿ ಈಗ ಯಾವ ಪರಿ ತಮ್ಮ ಭಾಷಣಕ್ಕೆ ಬೇಡಿಕೆ ಕುದುರಿಸಿಕೊಂಡಿದ್ದಾರೆ ಅಂದರೆ ಒಂದು ಭಾಷಣಕ್ಕೆ 2 ಲಕ್ಷ ಡಾಲರ್ ಚಾರ್ಜ್ ಮಾಡುತ್ತಿದ್ದಾರೆ. ಆಕೆ ಮೊದಲಿಂದಲೂ ಅಷ್ಟೇ. ಸ್ವಾವಲಂಬಿ- 2001ರಲ್ಲಿ ತಮ್ಮ ಪತಿರಾಯ ಶ್ವೇತಭವನವನ್ನು ತೊರೆದಾಗಿನಿಂದಲೂ paid speechmakingನಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಅದರಿಂದ ಇದುವರೆಗೂ 100 ಮಿಲಿಯನ್ ಡಾಲರ್ ಸಂಪಾದಿಸಿದ್ದಾರಂತೆ!
ಸ್ವತಃ ಪತಿಯೇ ಅಮೆರಿಕದ ಅಧ್ಯಕ್ಷರಾಗಿ ದುಡಿದವರು. ಸ್ವತಃ ತಾನೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಸೈ ಎನಿಸಿಕೊಂಡವರು. ದುಡ್ಡಿಗೇನೂ ಕೊರತೆಯಿಲ್ಲ. ಆದರೂ paid speechmaking ಬರೆದುಕೊಡುವ ದರ್ದು ಏನು? ಅಂತ ಕೇಳಿದರೆ...

A whisper can be louder than a shout:
ಹಿಲರಿ ಕ್ಲಿಂಟನ್ ಅಮೆರಿಕದ ಮುಂದಿನ ಅಧ್ಯಕ್ಷೆಯಾಗುವ ತವಕದಲ್ಲಿದ್ದಾರೆ. ಅಮೆರಿಕದ ಅಧ್ಯಕ್ಷರಾಗುವುದು ಅಂದರೆ ಸುಮ್ನೇನಾ? ಅದಕ್ಕೆ ಬೇಕು ಭಾರಿ ಭಾರಿ ರಖಮ್ಮು. ಅದಕ್ಕೇ ಹಿಲರಿ ಭಾಷಣ ಸಿದ್ಧಪಡಿಸುತ್ತಾ ದುಡ್ಡು ಗಳಿಸುತ್ತಿದ್ದಾರೆ. ಆ ದುಡ್ಡಿನಿಂದ ಚುನಾವಣೆಗೆ ಸ್ಪರ್ಧಿಸುವ ಬಯಕೆ ಆಕೆಯದು. ಈ ಸಂದರ್ಭದಲ್ಲಿ ಬರಾಕ್ ಒಬಾಮಾ ಅಧ್ಯಕ್ಷರಾಗುವುದಕ್ಕೂ ಮುನ್ನ ಮತ್ತು ಆನಂತರದ ಐತಿಹಾಸಿಕ ಭಾಷಣಗಳನ್ನೊಮ್ಮೆ ನೆನೆಪು ಮಾಡಿಕೊಳ್ಳಿ. ಅದನ್ನು ಬರೆದುಕೊಟ್ಟಿದ್ದು ಇದೇ ಹಿಲರಿ!
ಹಾಗಾಗಿ ತಮ್ಮ ಭಾಷಣದ ತಾಕತ್ತನ್ನು ಅರಿತಿರುವ ಹಿಲರಿ ಕ್ಲಿಂಟನ್ ಒಂದಷ್ಟು ದುಡ್ಡು ಸಂಪಾದಿಸಿ, ಮುಂದಿನ ಚುನಾವಣೆಗೆ (2016ಕ್ಕೆ) ಸ್ಪರ್ಧಿಸುವುದು ಖಚಿತವೆನ್ನುತ್ತಿದೆ ಶ್ವೇತ ಭವನದ ಮೂಲಗಳು. ಈಗ ಮತ್ತೆ ನರೇಂದ್ರ ಮೋದಿ ಅವರ ಭಾಷಣಕ್ಕೆ ಬರೋಣ.

Modinomics:
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಲಾಭ ಪಡೆಯಲು ಬಿಜೆಪಿ ಸಹ ಮುಂದಾಗಿದೆ. ಮುಂದಿನ ತಿಂಗಳು ಹೈದರಾಬಾದಿನಲ್ಲಿ ನಡೆಯುವ 'ಹಿಂದುತ್ವ' ಸಮಾವೇಶದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕಾರ್ಯಕರ್ತನೂ ತಲಾ 5 ರೂಪಾಯಿಯನ್ನು ದೇಣಿಗೆಯಾಗಿ ನೀಡಬೇಕು.
ಹಾಗೆ ಸಂಗ್ರಹಿಸಲಾಗುವ ಹಣವನ್ನು ಉತ್ತರಾಖಂಡದ ಜಲಪ್ರಳಯದಲ್ಲಿ ಮನೆ ಮಠ ಕಳೆದುಕೊಂಡವವರಿಗೆ ಪುನರ್ ವಸತಿ ಕಲ್ಪಿಸಲು ಸದ್ವಿನಿಯೋಗ ಮಾಡಲಾಗುವುದು ಎಂದು ಬಿಜೆಪಿ ವಕ್ತಾರ, rallyಯ ಉಸ್ತುವಾರಿ ಹೊತ್ತಿರುವ ಎನ್ ವಿಎಸ್ಎಸ್ ಪ್ರಭಾಕರ್ ಹೇಳಿದ್ದಾರೆ.

ಮೋದಿಗೆ ಅಪಾರ ಜನ ಬೆಂಬಲ
ಮೋದಿ ಅವರಿಗೆ ಅಪಾರ ಜನ ಬೆಂಬಲ ಇರುವುದರಿಂದ ಸ್ವತಃ ಕಾರ್ಯಕರ್ತರೇ ಪ್ರವೇಶ ಶುಲ್ಕ ನೀಡಲು ಸಿದ್ಧರಾಗಿದ್ದಾರೆ. rallyಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಕಾರ್ಯಕರ್ತರು ಆನ್‌ಲೈನ್ ಮುಖಾಂತರವೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಭಾಕರ್ ತಿಳಿಸಿದ್ದಾರೆ.

Narendra Modi Nav Bharat Youth Conclave
ಅಂದಹಾಗೆ ಆಗಸ್ಟ್ 11ರಂದು ಭಾನುವಾರ ಹೈದರಾಬಾದಿನ ಲಾಲ್ ಬಹಾದೂರ್ ಸ್ಟೇಡಿಯಂನಲ್ಲಿ ಮೋದಿಯ ಸಾರ್ವಜನಿಕ ಸಭೆ ನಡೆಯಲಿದೆ. ಈ ಸ್ಟೇಡಿಯಂನ ಸಾಮರ್ಥ್ಯ 30,000ವಾಗಿದ್ದರೂ ಬಿಜೆಪಿ ನಾಯಕರು ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ 10,000 ಮಂದಿ ನೋಂದಾಯಿಸಿಕೊಂಡಿದ್ದಾರೆ. 18 ರಿಂದ 40ರ ನಡುವಿನ ವಯಸ್ಸಿನವರನ್ನು ಗುರಿಯಾಗಿಸಿಕೊಂಡು ಹಮ್ಮಿಕೊಂಡಿರುವ ಈ ಸಭೆಗೆ Narendra Modi Nav Bharat Youth Conclave ಎಂದು ಹೆಸರಿಸಲಾಗಿದೆ.












Click it and Unblock the Notifications