ಇನ್ನೈದು ತಿಂಗಳಲ್ಲಿ ಐದು ರಾಜ್ಯಗಳ ಚುನಾವಣೆ
ನವದೆಹಲಿ, ಜು.16: ಯುಪಿಎ ಸರ್ಕಾರದ ಅಸ್ತಿತ್ವಕ್ಕೆ ಹಾಗೂ ಬಿಜೆಪಿಯ ತಂತ್ರಗಾರಿಕೆಗೆ ಸವಾಲೆನಿಸಿರುವ ಐದು ರಾಜ್ಯಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಸಜ್ಜಾಗುತ್ತಿದೆ. ಛತ್ತೀಸ್ ಗಢ, ದೆಹಲಿ, ಮಧ್ಯಪ್ರದೇಶ, ಮಿಜೋರಾಂ ಹಾಗೂ ರಾಜಸ್ಥಾನ ಚುನಾವಣೆ ವರ್ಷಾಂತ್ಯಕ್ಕೆ ನಡೆಯಲಿದೆ. ಲೋಕಸಭೆ ಚುನಾವಣೆ ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆಯಿದೆ.
ಕರ್ನಾಟಕ, ಮೇಘಾಲಯ, ತ್ರಿಪುರ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಇತ್ತೀಚೆಗೆ ಚುನಾವಣೆ ನಡೆಸಲಾಗಿತ್ತು. ಚುನಾವಣೆಗೆ ತೆರಳುತ್ತಿರುವ ಐದು ರಾಜ್ಯಗಳ ಪೈಕಿ ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.

ವಿವಿಧ ರಾಜ್ಯಗಳ ಅಧಿಕಾರ ಅವಧಿ ಮುಕ್ತಾಯ ದಿನಾಂಕ:
* ಛತ್ತೀಸ್ ಗಢ ಅಸೆಂಬ್ಲಿ : ಜನವರಿ 4, 2014
* ದೆಹಲಿ ವಿಧಾನಸಭೆ: ಡಿಸೆಂಬರ್ 17, 2013
* ಮಧ್ಯಪ್ರದೇಶ ಅಸೆಂಬ್ಲಿ : ಡಿಸೆಂಬರ್ 12,2013
* ಮಿಜೋರಾಂ ಅಸೆಂಬ್ಲಿ : ಡಿಸೆಂಬರ್ 15, 2013
* ರಾಜಸ್ಥಾನ ಅಸೆಂಬ್ಲಿ ಡಿಸೆಂಬರ್ 31, 2013
ಈ ಹಿಂದಿನ ಫಲಿತಾಂಶ :
* ಛತ್ತೀಸ್ ಗಢ: 90 ಸೀಟುಗಳ ಪೈಕಿ ಬಿಜೆಪಿ 50 ಸೀಟುಗಳನ್ನು ಗೆದ್ದಿತ್ತು.
* ದೆಹಲಿ : ಕಾಂಗ್ರೆಸ್ 70 ಸೀಟುಗಳಲ್ಲಿ 43 ಸೀಟು ಗೆದ್ದಿತ್ತು
* ಮಧ್ಯಪ್ರದೇಶ : 230 ಸೀಟುಗಳಲ್ಲಿ ಬಿಜೆಪಿ 143 ಸೀಟುಗಳನ್ನು ಗೆದ್ದಿತ್ತು.
* ಮಿಜೋರಾಂ: 40 ಸೀಟುಗಳಲ್ಲಿ ಕಾಂಗ್ರೆಸ್ 32 ಸೀಟುಗಳನ್ನು ಗೆದ್ದುತ್ತು.
* ರಾಜಸ್ಥಾನ : 199 ಸೀಟುಗಳಲ್ಲಿ ಕಾಂಗ್ರೆಸ್ 96 ಸೀಟುಗಳನ್ನು ಕಬಳಿಸಿತ್ತು.
ಒನ್ ಇಂಡಿಯಾ ಸುದ್ದಿ












Click it and Unblock the Notifications