ಮಂಗಳೂರು : ವೃದ್ಧೆಯ ಮೇಲೆ ಅತ್ಯಾಚಾರ, ಹಣ ಲೂಟಿ

ಕಂಕನಾಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸರಿಪಳ್ಳ ಎಂಬಲ್ಲಿ 69 ವಯಸ್ಸಿನ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿ ನಾಗೇಶ್ (24) ವೃದ್ಧೆಯ ಚಿನ್ನಾಭರಣ ಹಾಗೂ ಹಳೆ ಬಟ್ಟೆಗಳನ್ನು ದೋಚಿ ಪರಾರಿಯಾಗಿದ್ದಾನೆ.
ಭಾನುವಾರ ತಡರಾತ್ರಿ ವೃದ್ಧೆಯ ಮನೆಗೆ ಆಗಮಿಸಿದ ಆರೋಪಿ ನಾಗೇಶ್ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಸೋಮವಾರ ಬೆಳಗ್ಗೆ ನಾಗೇಶ್ ನನ್ನು ಹಿಡಿದು, ಕಂಕನಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತುತ್ತು ಅನ್ನಕ್ಕಾಗಿ ಬಂದಿದ್ದ : ನಾಗೇಶ್ ಮೂಲತಃ ಚಿಕ್ಕಬಳ್ಳಾಪುರದ ಚಿಂತಾಮಣಿಯ ನಿವಾಸಿಯಾಗಿದ್ದು, ಕೂಲಿಕೆಲಸಕ್ಕಾಗಿ ಸರಿಪಳ್ಳ ಗ್ರಾಮಕ್ಕೆ ಆಗಮಿಸಿದ್ದ. ಗ್ರಾಮದ ಕೆಲವು ಮನೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ.
ವೃದ್ಧೆಯ ಮನೆಯ ಅಕ್ಕಪಕ್ಕದಲ್ಲಿ ಕೆಲಸ ಮಾಡಿದ್ದ ನಾಗೇಶ್ ಮನೆಯಲ್ಲಿ ಆಕೆ ಒಬ್ಬಳೇ ಇರುವುದನ್ನು ತಿಳಿದುಕೊಂಡಿದ್ದ. ಭಾನುವಾರ ಆಕೆಯ ಮನೆಗೆ ನುಗ್ಗಿದ ಆತ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications