ಟೀಕೆಗೆ ಗುರಿಯಾದ ನರೇಂದ್ರ ಮೋದಿ 'ನಾಯಿ ಮರಿ'

Reuters ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮೋದಿ ಅವರು 2002ರ ಗೋಧ್ರೋತ್ತರ ಗಲಭೆಯಲ್ಲಿ ಸರ್ಕಾರ ನಡೆದುಕೊಂಡ ರೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಅದರಲ್ಲಿ ನನ್ನದೇನೂ ತಪ್ಪಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಸಂಗವೇ ಇಲ್ಲ. ನನ್ನದೇನೂ ತಪ್ಪಿಲ್ಲ ಎಂದು ಸುಪ್ರೀಂ ಕೋರ್ಟ್ ರಚಿಸಿದ್ದ ಎಸ್‌ಐಟಿ ಸಹ ವರದಿ ನೀಡಿದೆ. ಹೀಗಾಗಿ ನಾನು ಹೇಗೆ ತಪ್ಪಿತಸ್ಥನಾಗುತ್ತೇನೆ ಎಂದು ಪ್ರಶ್ನಿಸಿದ್ದಾರೆ.
'ನಾನೊಬ್ಬ ರಾಷ್ಟ್ರವಾದಿ, ಇದರಲ್ಲಿ ಯಾವುದೇ ತಪ್ಪಿಲ್ಲ, ನಾನು ಹಿಂದೂ ಆಗಿಯೇ ಹುಟ್ಟಿದ್ದೇನೆ. ಇದರಲ್ಲೂ ಯಾವುದೇ ತಪ್ಪಿಲ್ಲ. ಹೀಗಾಗಿ ನಾನು ದೇಶಭಕ್ತ ಹಿಂದೂ ರಾಷ್ಟ್ರೀಯವಾದಿ. ಇದಕ್ಕೆ ಕಾರಣ, ನಾನು ಹಿಂದೂವಾಗಿ ಹುಟ್ಟಿದ್ದು' ಇದು ಗುಜರಾತ್ ಸಿಎಂ ಮತ್ತು ಭವಿಷ್ಯದ ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಎಂದೇ ಗುರುತಿಸಲಾಗುತ್ತಿರುವ ನರೇಂದ್ರ ಮೋದಿ ಅವರ ಹೇಳಿಕೆ.
2002ರ ಘಟನೆ ಬಗ್ಗೆ ಮತ್ತಷ್ಟು ಮಾತನಾಡಿರುವ ಮೋದಿ, 'ನಾನು ತಪ್ಪು ಮಾಡಿದ್ದರೆ ನನಗೆ ನೋವಾಗುತ್ತಿತ್ತು. ನಾನು ಕದ್ದು, ಸಿಕ್ಕಿಬಿದ್ದಿದ್ದರೆ ನನಗೆ ಕಿರಿಕಿರಿಯಾಗುತ್ತಿತ್ತು. ಆದರೆ ನಾನು ಕದ್ದೇ ಇಲ್ಲ ಎಂದಾದಲ್ಲಿ ಏಕೆ ನೋವಾಗಬೇಕು?'
'ಭಾರತದ ಸುಪ್ರೀಂಕೋರ್ಟ್‌ನಿಂದ ರಚಿತವಾದ, ಅತ್ಯುತ್ತಮ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ನನಗೆ ಕ್ಲೀನ್ ಚಿಟ್ ನೀಡಿದೆ. ಇನ್ನೊಂದು ವಿಷಯ, ನಾವೊಂದು ಕಾರು ಚಲಾಯಿಸುತ್ತಿದ್ದರೆ, ನಾವೇ ಡೈವರ್. ಅದೇ ನಾವು ಹಿಂದೆ ಕುಳಿತು, ಮುಂದೆ ಬೇರೆ ಕಾರನ್ನು ಚಲಾಯಿಸುತ್ತಿದ್ದರೆ ಆತನೇ ಡ್ರೈವರ್. ನಾನು ಹಿಂಬದಿಯಲ್ಲಿ ಕುಳಿತ ಪ್ರಯಾಣಿಕ. ಆಗ ಅಡ್ಡ ಬರುವ ನಾಯಿಯೊಂದು ಕಾರಿಗೆ ಸಿಕ್ಕರೆ ಡೈವರ್ ಜೊತೆಗೆ ನನಗೂ ನೋವಾಗುತ್ತದೆ' ಎಂದು ಮೋದಿ ಹೇಳಿದ್ದಾರೆ.
ಮೋದಿ ಅವರ ಈ 'ನಾಯಿ ಹೇಳಿಕೆಯೇ' ಈಗ ವಿವಾದದ ಗೂಡಾಗಿರುವುದು. 'ನಾಗರಿಕ ಭಾರತದಲ್ಲಿ ಯಾರನ್ನೂ ಪ್ರಾಣಿಗಳಿಗೆ ಹೋಲಿಸುವಂಥ ಸಂಪ್ರದಾಯ ಇಲ್ಲ. ಆದರೆ ಮೋದಿ ಮುಸ್ಲಿಮರನ್ನು ನಾಯಿಗೆ ಹೋಲಿಕ ಮಾಡಿದ್ದಾರೆ. ಇದು ಭಾರತ ಕಲ್ಪನೆಗೆ ವಿರುದ್ಧವಾದದ್ದು. ಈ ಕೂಡಲೇ ಕ್ಷಮೆಯಾಚಿಸಬೇಕು' ಎಂದು ಕಾಂಗ್ರೆಸ್ ವಕ್ತಾರ ಅಜಯ್ ಮಾಕನ್ ಆಗ್ರಹಿಸಿದ್ದಾರೆ.
'ಇದೇನಾ ದೇಶಭಕ್ತಿ? ಪ್ರಮಾಣ ಸ್ವೀಕರಿಸುವಾಗ ಎಲ್ಲರನ್ನು ರಕ್ಷಿಸುವುದಾಗಿ ಪ್ರಮಾಣ ಮಾಡಿದ್ದೀರಿ. ಆದರೆ ನಾಯಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೀರಿ. ಆದರೆ ನೀವು ಸಾಮೂಹಿಕ ನರಮೇಧಕ್ಕೆ ಕ್ಷಮೆ ಕೇಳಿಲ್ಲ. ಇದು ಕೆಟ್ಟ ಸಂಪ್ರದಾಯ' ಎಂದು ಎಸ್ ಪಿ ನಾಯಕ ಕಮಲ್ ಫಾರೂಕಿ ಹೇಳಿದ್ದಾರೆ.
ಇದಕ್ಕೆ ಉತ್ತರವಾಗಿ ಮೋದಿ ಹೀಗೆ ಟ್ವೀಟ್ ಮಾಡಿದ್ದಾರೆ. In our culture every form of life is valued & worshipped. People are best judge.












Click it and Unblock the Notifications