ಬೆಂಗಳೂರು: ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿನಿ ನೇಣಿಗೆ

30 ವರ್ಷದ ಶ್ವೇತಾಂಬರಿ ರಾವ್ ತನ್ನ ಮನೆಯ ಸೀಲಿಂಗ್ ಫ್ಯಾನಿಗೆ ದುಪ್ಪಟದಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಶ್ವೇತಾಂಬರಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು.
ಆಕೆಯನ್ನು ಪರೀಕ್ಷಿಸಿದ ವೈದ್ಯರು ಇತರೆ ಚಟುವಟಿಕೆಗಳಲ್ಲಿ ಗಾಢವಾಗಿ ತೊಡಗಿಸುವಂತೆ ಶ್ವೇತಾಂಬರಿ ಪೋಷಕರಿಗೆ ಸೂಚಿಸಿದ್ದರು. ಅದರಂತೆ ಶ್ವೇತಾಂಬರಿಯನ್ನು ಶುಕ್ರವಾರದಿಂದ ಯೋಗ ಮತ್ತಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಲು ನಿರ್ಧರಿಸಿದ್ದರು.
ಆದರೆ ಶುಕ್ರವಾರ ಬೆಳಗ್ಗೆ ಶ್ವೇತಾಂಬರಿ ನೇಣು ಹಾಕಿಕೊಂಡು ಸತ್ತಿರುವುದು ಆಕೆಯ ತಾಯಿಗೆ ಗೋಚರವಾಗಿದೆ.
ರೈಲಿಗೆ ಬಲಿ: ನೇಪಾಳ ಮೂಲದ ತೋಮರ್ ಸಿಂಗ್ (35) ಮತ್ತು ಒಬ್ಬ ಮಹಿಳೆ ವೈಟ್ ಫೀಲ್ಡ್ ಸಮೀಪ ದೊಡ್ಡನೆಕ್ಕುಂಡಿ ಬಳಿ ಶುಕ್ರವಾರ ಬೆಳಗ್ಗೆ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಬಿಟಿಎಸ್ ಬಸ್ಸಿಗೆ ಸಿಕ್ಕಿ ಮಹಿಳೆ ಸಾವು: 55 ವರ್ಷದ ಹಸೀನಾ ಬೇಗಂ ಎಂಬ ಮಹಿಳೆ ಮೆಜಿಸ್ಟಿಕ್ ಬಸ್ ನಿಲ್ದಾಣದಲ್ಲಿ ಎಡರು ಬಸ್ಸುಗಳ ಮಧ್ಯೆ ಸಿಲುಕಿ ಸಾವಗೀಡಾಗಿದ್ದಾರೆ. ಈಕೆ ಬನಶಂಕರಿಯ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಸಂಬಂಧಿಯ ಊರಿಗೆ ಹೋಗುವ ಸಲುವಾಗಿ ಮೆಜಿಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿದ್ದ ಹಸೀನಾ, ಪುಷ್ಪಕ್ ಬಸ್ ಗಳ ಮಧ್ಯೆ ಸಿಲುಕಿ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.












Click it and Unblock the Notifications