ಯಡಿಯೂರಪ್ಪ ಬಿಜೆಪಿಗೆ ಮರಳುವುದು ಎಲ್ಲಿವರೆಗೆ ಬಂತು?
ಬೆಂಗಳೂರು,
ಜುಲೈ 10: ಯಡಿಯೂರಪ್ಪ ಬಿಜೆಪಿಗೆ ಮರಳುವುದು ಎಲ್ಲಿಗೆ ಬಂತು? ದೆಹಲಿಯಿಂದ ಬಹುತೇಕ ಗ್ರೀನ್ ಸಿಗ್ನಲ್ ಪಡೆದು, ಬೆಂಗಳೂರಿನಲ್ಲೇ ಮರು ಸಂಗಮವಾಗಲಿ ಎಂದು ಬಿಜೆಪಿ ಹಿರಿಯರು ಹೇಳುವಷ್ಟರ ಮಟ್ಟಿಗೆ ಪ್ರಗತಿ ಕಂಡಿದೆ. id="toptextpromo"> id='are-slot-1' class='oiad oi-axt oiadv'>ಆಷಾಢ
ಮುಗಿಯುತ್ತಿದ್ದಂತೆ ನರೇಂದ್ರ ಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸುವ ಹಂತಕ್ಕೆ ಬಿಜೆಪಿ ತಲುಪಿದ್ದು, ಇತ್ತ ಪಕ್ಷದ ಹಿರಿಯಾಳುಗಳು ಮತ್ತು ಬಿಜೆಪಿಯಲ್ಲಿನ ಯಡಿಯೂರಪ್ಪ ಕಟ್ಟಾಳುಗಳು ಬಿಎಸ್ವೈರನ್ನು ಆಲಂಗಿಸಲು ಅವರತ್ತ ದಾಪುಗಾಲು ಹಾಕಿದ್ದಾರೆ ಎನ್ನಲಾಗಿದೆ.id='are-slot-2' class='oiad oi-axt oiadv'>

ಆಗಸ್ಟ್ ಮೊದಲ ವಾರದಲ್ಲಿ
ಬಲ್ಲ ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾದ ಮೋದಿ ಶೀಘ್ರದಲ್ಲೇ ದೇಶಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ಮೋದಿ ಅವರು ಆಗಸ್ಟ್ ಮೊದಲ ವಾರದಲ್ಲಿ (ಆ. 2-3) ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಆಗ ಯಡಿಯೂರಪ್ಪ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ಒಪ್ಪಿಗೆ ನೀಡಬಹುದು ಎನ್ನಲಾಗಿದೆ.

ರಾಜನಾಥ್-ಜೇಟ್ಲಿಗೆ ಓಕೆ
ದಿಲ್ಲಿಗೆ ತೆರಳಿದ ರಾಜ್ಯ ಮುಖಂಡರ ನಿಯೋಗದ ಜತೆ ಮಾತನಾಡಿರುವ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಅವರುಗಳು ಯಡಿಯೂರಪ್ಪ ಸೇರ್ಪಡೆಗೆ ಒಲವು ತೋರಿಸಿದ್ದಾರೆ. ಆದರೆ, ಹಿರಿಯ ನಾಯಕರಾದ ಅಡ್ವಾಣಿ ಹಾಗೂ ಸುಷ್ಮಾ ಸ್ವರಾಜ್ ವಿರೋಧದ ಆತಂಕವಿದೆ. ಇದಕ್ಕೆ ಅವಕಾಶ ಕೊಡದಂತೆ ಪರಿಸ್ಥಿತಿ ನಿಭಾಯಿಸಲು ರಾಜನಾಥ್ ಸಿಂಗ್ ಹಾಗೂ ಜೇಟ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಸುಖಾಂತ್ಯ ಕಾಣಲಿದೆ: ಡಿಬಿಸಿ
ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿದ್ದ ಚಂದ್ರೇಗೌಡರು 'ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಸುಖಾಂತ್ಯ ಕಾಣಲಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಯಡಿಯೂರಪ್ಪರ ಕಿವಿಹಿಂಡಿದ ಚಂದ್ರೇಗೌಡರು:
ದಿಲ್ಲಿಯಿಂದ ಕೈಯಲ್ಲಿ ಹಸಿರು ಝಂಡಾ ಹಿಡಿದೇ ಮಂಗಳವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸಾದ ಚಂದ್ರೇಗೌಡರು ಸೀದಾ ಯಡಿಯೂರಪ್ಪ ನಿವಾಸಕ್ಕೆ ತೆರಳಿ ' ಎಲ್ಲ ನಾವಂದುಕೊಂಡಂತೆ ಆಗುತ್ತಿದೆ. ನೀವು ಯಾವುದೇ ವ್ಯತಿರಿಕ್ತ ಹೇಳಿಕೆ ಕೊಡದೆ ಸುಮ್ನಿರಿ. ಎಲ್ಲಾ ನಾವು ನೋಡಿಕೊಳ್ಳುತ್ತೇವೆ' ಎಂದು ಯಡಿಯೂರಪ್ಪರ ಕಿವಿಹಿಂಡಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ. ಅದಕ್ಕೆ ಯಡಿಯೂರಪ್ಪ ಬಿಳಿ ಝಂಡಾ ಹಾರಿಸಿದ್ದಾರೆ ಎಂಬುದು ಅವರವರ ಊಹೆಗೆ ಬಿಟ್ಟ ವಿಷಯವಾಗಿದೆ.

'ಅನಂತ' ಮಾರ್ಪಾಡು
ಗಮನಾರ್ಹ ಬೆಳವಣಿಗೆಯಲ್ಲಿ ಯಡಿಯೂರಪ್ಪ ಬಿಜೆಪಿ ಮರುಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಸಂಸದ ಅನಂತ ಕುಮಾರ್ ನಿಲುವು ಬದಲಾಗಿದೆ. ಬಿಎಸ್‌ವೈ ಪಕ್ಷಕ್ಕೆ ಸೇರಿಸಿಕೊಳ್ಳಲು ನನ್ನದೇನೂ ತಕರಾರು ಇಲ್ಲ ಎಂದು ಹೇಳಿದ್ದಾರಂತೆ.












Click it and Unblock the Notifications