ಅಕ್ರಮ-ಸಕ್ರಮ: ಜನರನ್ನು ಫೂಲ್ ಮಾಡಿದ ಸಚಿವ ರೆಡ್ಡಿ

ಅಕ್ರಮ-ಸಕ್ರಮ ಯೋಜನೆ ಜಾರಿಗೆ ಬಂದಿದ್ದು, ತತ್ಸಂಬಂಧದ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಶೀಘ್ರವೇ ಅದು ಜಾರಿಗೆ ಬರಲಿದೆ ಎಂದು ಕಾಂಗ್ರೆಸ್ಸಿನ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರು ಸೋಮವಾರವಷ್ಟೇ ಪ್ರಕಟಿಸಿದ್ದರು.
ಆದರೆ ಇಂದು ಬುಧವಾರ ಈ ಸಂಬಂಧ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹಾವು ತುಳಿದವರಂತೆ 'ಇಲ್ಲಾ, ಇಲ್ಲಾ! ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಖಂಡಿತಾ ವಿವಾದಾತ್ಮಕ ಅಕ್ರಮ-ಸಕ್ರಮ ವಿಧೇಯಕಕ್ಕೆ ಅಂಕಿತ ಹಾಕಿಲ್ಲ. ನಾನು ತಪ್ಪಾಗಿ ಅರ್ಥೈಸಿಕೊಂಡಿದ್ದೇನೆ. ವಾಸ್ತವವಾಗಿ ಅವರು ಸಹಿ ಹಾಕಿರುವುದು ಬೇರೆಯದೇ ವಿಧೇಯಕಕ್ಕೆ' ಎಂದು ಸ್ಪಷ್ಟನೆ ನೀಡಿದ್ದಾರೆ.
ಹೌದಾ ಹಾಗಾದರೆ ರಾಜ್ಯಪಾಲ ಭಾರದ್ವಾಜ್ ಅವರು ಯಾವುದಕ್ಕಪ್ಪಾ ಸಹಿ ಹಾಕಿರುವುದು ಅಂತ ಕೇಳಿದ್ದಕ್ಕೆ 'ಅದು ಗ್ರಾಮಾಂತರ ಭಾಗಗಳಲ್ಲಿರುವ ಸರಕಾರಿ ಜಮೀನಿನಲ್ಲಿ ನಿರ್ಮಿಸಿರುವ ಮನೆಗಳಿಗೆ ಸಂಬಂಧಪಟ್ಟಿದ್ದು' ಎಂದು ಸಚಿವ ರೆಡ್ಡಿ ಕೈತೊಳೆದುಕೊಂಡಿದ್ದಾರೆ.
ಅಂದರೆ ನಮ್ಮ ಸಚಿವರಿಗೆ revenue department bill ಮತ್ತು urban development bill ನಡುವಣ ಸೂಕ್ಷ್ಮ ವ್ಯತ್ಯಾಸ ಅರ್ಥವಾಗದೆ ರಾದ್ಧಾಂತಕ್ಕೆ ಕಾರಣವಾಗಿದ್ದಾರೆ!
ಹಿಂದಿನ ಬಿಜೆಪಿ ಸರಕಾರ 3 ವಿಧೇಯಕಗಳನ್ನು ಅನುಮೋದಿಸಿ, ರಾಜ್ಯಪಾಲರ ಬಳಿಗೆ ಕಳುಹಿಸಿತ್ತು. ಸರಕಾರಿ ಭೂಮಿಯಲ್ಲಿನ ಒತ್ತುವರಿ/ಅಕ್ರಮಗಳನ್ನು ಕಾನೂನುಬದ್ಧಗೊಳಿಸಿ ನಗರಾಭಿವೃದ್ಧಿಗೆ ಎಂದು ಒಂದು ಮತ್ತು ಕಂದಾಯ ಇಲಾಖೆಯಿಂದ ಗ್ರಾಮಾಭಿವೃದ್ಧಿಗೆ ಇನ್ನೆರಡು.












Click it and Unblock the Notifications