ಅಕ್ರಮ - ಸಕ್ರಮ ಎಂದರೇನು? ನಿಮಗಿದು ತಿಳಿದಿರಲಿ

hr bhardwaj
ಬೆಂಗಳೂರು, ಜು.9 : ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸರ್ಕಾರ ಅಕ್ರಮ-ಸಕ್ರಮ ಯೋಜನೆ ಜಾರಿಗೆ ತಂದು ಜನರ ವಿಶ್ವಾಸಗಳಿಸಲು ಮುಂದಾಗಿದೆ. ಅಕ್ರಮ-ಸಕ್ರಮ ಕುರಿತ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು ಶೀಘ್ರವೇ ಇದು ಜಾರಿಗೆ ಬರಲಿದೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಆಸ್ತಿದಾರರಿಗೆ ಅನುಕೂಲವಾಗುವಂತೆ ದಂಡ ಶುಲ್ಕ ನಿಗದಿಪಡಿಸಿ, ಹಿಂದಿನ ಬಿಜೆಪಿ ಸರ್ಕಾರ ನಿಗದಿಪಡಿಸಿದ್ದ ಶುಲ್ಕಕ್ಕಿಂತ ಕಡಿಮೆ ವಿಧಿಸಿ, ಜನರ ಮುಂದೆ ಅಕ್ರಮ ಸಕ್ರಮ ಯೋಜನೆ ಇಡಲು ಕಾಂಗ್ರೆಸ್‌ ಸರ್ಕಾರ ಸಿದ್ಧವಾಗಿದೆ.

ಯಾವುದು ಸಕ್ರಮವಾಗುತ್ತದೆ : ಅಕ್ರಮ-ಸಕ್ರಮ ಯೋಜನೆ ಜಾರಿಗೆ ಬಂದರೆ, ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಕಂದಾಯ ಭೂಮಿಯಲ್ಲಿ ಭೂ ಪರಿವರ್ತನೆಯಾಗದೆ ನಿರ್ಮಿಸಿರುವ ಮನೆಗಳು ಸಕ್ರಮವಾಗಲಿವೆ.

ಸ್ಥಳೀಯ ಪ್ರಾಧಿಕಾರಗಳಿಂದ ಬಡಾವಣೆ ಹಾಗೂ ಕಟ್ಟಡ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಲಾಗಿರುವ 600 ರಿಂದ 1200 ಚದರ ಅಡಿವರೆಗಿನ ಮನೆ ಮತ್ತು ನಿವೇಶನಗಳನ್ನು ಮಾತ್ರ ಸಕ್ರಮ ಮಾಡಲು ತೀರ್ಮಾನಿಸಲಾಗಿದೆ.

ಅದೇ ರೀತಿ, ಗ್ರಾಮೀಣ ಪ್ರದೇಶದಲ್ಲಿ ಕಂದಾಯ ಭೂಮಿ ಒತ್ತುವರಿ ಮಾಡಿಕೊಂಡು ಬಡ ಕುಟುಂಬದವರು ನಿರ್ಮಿಸಿರುವ 600 ಚದರಡಿಗಿಂತ ಕಡಿಮೆ ವಿಸ್ತೀರ್ಣದ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಬೆಂಗಳೂರಿನಲ್ಲಿ ಹೇಗೆ ಜಾರಿ : ಮಹಾನಗರಿ ಬೆಂಗಳೂರಿನಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸಿರುವ ವಸತಿ ಕಟ್ಟಡಗಳ ಶೇ.50 ಹಾಗೂ ವಾಣಿಜ್ಯ ಕಟ್ಟಡಗಳ ಶೇ.25ರಷ್ಟು ಭಾಗ ಸಕ್ರಮಗೊಳಿಸಲು ತೀರ್ಮಾನಿಸಲಾಗಿದೆ.

1964ರ ಕರ್ನಾಟಕ ಭೂಕಂದಾಯ ಕಾಯ್ದೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಎಲ್ಲಾ ಸಕ್ರಮಗಳ ಪ್ರಕ್ರಿಯೆ 2012ರ ಜನವರಿ 1ಕ್ಕಿಂತ ಹಿಂದಿನ ನಿರ್ಮಾಣಗಳಿಗೆ ಮಾತ್ರ ಅನ್ವಯಿಸಲಿದೆ.

ರಾಜ್ಯಪಾಲರ ಸಲಹೆ ಏನು : ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಅಥವಾ ಶ್ರೀಮಂತರ ಪರವಾಗಿರಬಾರದು ಯೋಜನೆ ಬಡವರ್ಗಕ್ಕೆ ಹೆಚ್ಚಿನ ಅನುಕೂಲತೆ ಒದಗಿಸಬೇಕು ಎಂದಿರುವ ರಾಜ್ಯಪಾಲರು, ದಂಡ ಶುಲ್ಕ ಜನರಿಗೆ ಹೊರೆಯಾಗಬಾರದು ಎಂದು ಸಲಹೆ ನೀಡಿದ್ದಾರೆ.(ಮತ್ತೆ ಇಣುಕುತ್ತಿದೆ ಅಕ್ರಮ-ಸಕ್ರಮದ ಭೂತ)

ಎಷ್ಟು ಆದಾಯ : ಅಕ್ರಮ ಸಕ್ರಮ ಯೋಜನೆ ಜಾರಿಗೆ ಬಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ಸಾವಿರ ಕೋಟಿ ರೂ. ಆದಾಯ ಸಂಗ್ರವಾಗುವ ನಿರೀಕ್ಷೆ ಇದೆ. ಹಾಗೆಯೇ ರಾಜ್ಯಾದ್ಯಂತ 10 ಸಾವಿರ ಕೋಟಿ ರೂ.ಗೂ ಅಧಿಕ ವರಮಾನ ಸಂಗ್ರಹವಾಗಬಹುದು ಎಂದು ಅಂದಾಜಿಲಸಾಗಿದೆ.

ಸರ್ಕಾರ ಆಯಾ ಪ್ರದೇಶಗಳಲ್ಲಿನ ಮಾರ್ಗಸೂಚಿ ದರ ಆಧರಿಸಿ ದಂಡ ಶುಲ್ಕ ನಿಗದಿಮಾಡುವ ಸಾಧ್ಯತೆಯಿದೆ. ದಂಡ ಶುಲ್ಕ ನಿದಗಿಯಾದ ನಂತರ ಅಕ್ರಮ-ಸಕ್ರಮ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+