ಟ್ವೀಟ್ ಸಂದೇಶ ಭಾಷೆ ರಹಸ್ಯ ಬಯಲು

ಸಾಮಾಜಿಕ ಜಾಲ ತಾಣಗಳಿಗೆ ತನ್ನದೇ ಆದ ಒಂದು ಭಾಷೆ ಇರುತ್ತದೆ. ಕನ್ನಡ, ಇಂಗ್ಲೀಷ್, ಹಿಂದಿ, ಫ್ರೆಂಚ್ ಹೀಗೆ ನಿಮ್ಮ ನಿಮ್ಮ ಭಾಷೆಗಳನ್ನು ಆಯಾ ಲಿಪಿ ಬಳಸಿ ಸಂವಹನ ನಡೆಸುವುದು ಮಾಮೂಲಿ.

ಜೊತೆಗೆ ಭಾಷಾ ಸಮಸ್ಯೆ ಅಥವಾ ಲಿಪಿ ಸಮಸ್ಯೆ ಎದುರಿಸುವ ಅನೇಕ ಜನ ಎರಡು ಭಾಷೆ ಮಿಕ್ಸ್ ಮಾಡಿ ಸಂದೇಶ ಕಳಿಸುವುದನ್ನು ಕಾಣಬಹುದು. ಕನ್ನಡ ಜೊತೆ ಇಂಗ್ಲೀಷ್ ಸೇರಿ ಕಂಗ್ಲೀಷ್, ಹಿಂಗ್ಲೀಷ್ ಜನಪ್ರಿಯವಾಗಿದೆ. ಫೋನಾಟಿಕ್ ಶೈಲಿಯಲ್ಲಿ 'naanu kannaDiga' ಎಂದು ಕೀ ಮಾಡಿದರೆ ಹಲವರಿಗೆ ಅರ್ಥವಾಗುತ್ತದೆ. ಆದರೆ, ಇದು ಕೆಲವರಿಗೆ ಕಿರಿಕಿರಿ ಉಂಟು ಮಾಡಿದೆ ಎಂಬುದೂ ಸತ್ಯ.

ಇದೆಲ್ಲದರ ಜೊತೆಗೆ ಚಾಟ್ ಮಾಡುವವರಿಗೆ ಪ್ರತ್ಯೇಕ ಭಾಷೆ ಇರುತ್ತದೆ. ಬಹುಶಃ ಚಾಟ್ ಸಂಸ್ಕೃತಿ ಭಾರತದಲ್ಲಿ ಬೆಳೆದಿದ್ದು ಯಾಹೂ ಚಾಟ್ ರೂಮ್ ಗಳ ಮೂಲಕ ಎಂದರೆ ತಪ್ಪಾಗಲಾರದು. ಸ್ಕೈಪ್, ಗೂಗಲ್ ಚಾಟ್ ಪರಿಚಯವಿದ್ದರೂ ಯಾಹೂ ನಲ್ಲಿ ಪ್ರತ್ಯೇಕ ಕೋಡ್ ಪದಗಳ ಮೂಲಕ ಕಳೆದ ದಶಕದಲ್ಲಿ ಚಾಟ್ ಮಾಡುತ್ತಿದ್ದವರಲ್ಲಿ ಅನೇಕರು ಈಗ ಟ್ವಿಟ್ಟರ್ ಗೆ ಶಿಫ್ಟ್ ಆಗುತ್ತಿರುವುದನ್ನು ಕಾಣಬಹುದು.

ಸಾಮಾಜಿಕ ಜಾಲ ತಾಣ ಅಥವಾ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ದಿನಕ್ಕೊಂದು ಹೊಸ ಸಂಕ್ಷಿಪ್ತ ಅಕ್ಷರಗಳು(abbreviations) ಕಾಣಿಸಿಕೊಳ್ಳತೊಡಗಿದಾಗ ಹೊಸಬರಿಗೆ ಟ್ವಿಟ್ಟರ್ lingo ಕಬ್ಬಿಣದ ಕಡಲೆಯಾಗಿರಲಿಕ್ಕು ಸಾಕು. ಆದರೆ, ಸಮಯ ಕಳೆದಂತೆ ಸಂದೇಶಕ್ಕೆ ತಕ್ಕ hashtag (#) ಟ್ವಿಟ್ಟರ್ lingo ಪಂಡಿತರಾದವರು ಅನೇಕ ಮಂದಿ ಇದ್ದಾರೆ. ಟ್ವಿಟ್ಟರ್ ನಲ್ಲಿ ಬಳಕೆಯಲ್ಲಿರುವ ಕೆಲ ಸಂಕ್ಷಿಪ್ತ ಅಕ್ಷರಗಳ ವಿವರಣೆ ಉದಾಹರಣೆ ಸಮೇತ ಇಲ್ಲಿ ನೀಡಲಾಗಿದೆ. ನಿಮಗೆ ಗೊತ್ತಿರುವ ಇನ್ನಿತರ ಸಂಕ್ಷಿಪ್ತ ಅಕ್ಷರಗಳಿದ್ದಾರೆ. ತಪ್ಪದೇ ಕಾಮೆಂಟ್ ಮಾಡಿ..

ಟ್ವಿಟ್ಟರ್ ಉತ್ತಮ ವೇದಿಕೆ

ಟ್ವಿಟ್ಟರ್ ಉತ್ತಮ ವೇದಿಕೆ

ಪ್ರಕೃತಿ ವಿಕೋಪ, ಜನ ಜಾಗೃತಿ, ವಿನೂತನ ಪ್ರತಿಭಟನೆಗೂ ಕೂಡಾ ಟ್ವಿಟ್ಟರ್ ವೇದಿಕೆ ಒದಗಿಸಿದೆ. ಭಾಷೆ, ಜನಾಂಗ, ದೇಶ ಎಲ್ಲವನ್ನು ಮೀರಿ ಟ್ವಿಟ್ಟರ್ ಎಲ್ಲರನ್ನೂ ಒಂದುಗೂಡಿಸುತ್ತಿದೆ.

ಉದಾಹರಣೆಗೆ ಕನ್ನಡ ಪ್ರೇಮಿ ಟ್ವೀಟರ್ ಗಳನ್ನು ಒಟ್ಟು ಮಾಡಿ ಸರ್ಚ್ ಮಾಡಲು ಅನುಕೂಲವಾಗುವಂತೆ #kts ಎಂದು ಬಳಸಲಾಗುತ್ತಿತ್ತು.kts ಎಂದರೆ kannada twitter sangha. ಒಟ್ಟಿನಲ್ಲಿ ಸಂಕ್ಷಿಪ್ತ ಅಕ್ಷರ/ಪದ ಬಳಸಿ ಕೊಟ್ಟಿರುವ 140 ಪದಗಳ ಮಿತಿಯೊಳಗೆ ಅನಿಸಿಕೆಯನ್ನು ತುಂಬಿಸುವವನೇ ಜಾಣ ಎನ್ನಬಹುದು.

ಸುಂದರ ಟ್ವೀಟ್ ಲೋಕ

ಸುಂದರ ಟ್ವೀಟ್ ಲೋಕ

ವ್ಯಕ್ತಿಯೊಬ್ಬನ ಗುಡ್ ಮಾರ್ನಿಂಗ್ ನಿಂದ ಗುಡ್ ನೈಟ್ ತನಕ ಪ್ರತಿ ಕ್ಷಣದ ವೈಯಕ್ತಿಕ ಆಗು ಹೋಗುಗಳನ್ನು ಟ್ವೀಟ್ ಮೂಲಕ ತಿಳಿಯುವ ಜೊತೆಗೆ ನಿಮ್ಮ ನೆಚ್ಚಿನ ತಾರೆಯರನ್ನು ಹಿಂಬಾಲಿಸಬಹುದು.

ಕೆಲವರಂತೂ ದಿನದಲ್ಲಿ ಕನಿಷ್ಠ 20 ಗಂಟೆ ಟ್ವೀಟ್ ಮಾಡುತ್ತಾರೆ. ಇದರಲ್ಲಿ ಟೀಕೆ-ಟಿಪ್ಪಣಿ ನೇರ ಮಾತು ಕತೆ ಇದ್ದೇ ಇರುತ್ತದೆ. ಟ್ವೀಟ್ ನಲ್ಲಿ ದೊಡ್ಡ ಯುದ್ಧಗಳೇ ನಡೆದಿವೆ.

ಟ್ವೀಟ್ ಆಧಾರದ ಮೇಲೆ ಕೆಲಸ ಕಳೆದುಕೊಂಡವರು ಇದ್ದಾರೆ. ರಾಜಕಾರಣಿಗಳು ಟ್ವೀಟಾಸ್ತ್ರ ಬಳಸಿ ಕಾದಾಡಿತ್ತು ಇದೆ. ಇತ್ತೀಚಿನ ಉತ್ತರಾಖಂಡ್(#uttarakhand) ಪರಿಹಾರ ಕಾರ್ಯದ ಬಗ್ಗೆ ಬಿಜೆಪಿ-ಕಾಂಗ್ರೆಸ್ ಕಿತ್ತಾಟ ಸ್ಮರಿಸಬಹುದು.

ಹುಡುಕಾಟ ಸುಲಭ

ಹುಡುಕಾಟ ಸುಲಭ

hashtag (#) ಬಳಸಿ ಸುಲಭವಾಗಿ ನಿಮ್ಮ ನೆಚ್ಚಿನ ಮಾಹಿತಿ ಪಡೆಯಬಹುದು. ಗೂಗಲ್ ಸರ್ಚ್ ಇಂಜಿನ್ ಗೂ ಟಾಂಗ್ ನೀಡುವಂತೆ ಟ್ವಿಟರ್ ಸರ್ಚ್ ಇಂಜಿನ್ ಮೇಲಕ್ಕೇರುತ್ತಿದೆ.

hashtag ಸಧ್ಯಕ್ಕೆ ಇಂಗ್ಲೀಷ್ ನಲ್ಲೇ ಕಾರ್ಯನಿರ್ವಹಿಸುತ್ತಿದೆ. ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಟ್ಯಾಗ್, ಸರ್ಚ್ ಸೌಲಭ್ಯ ಹಾಗೂ ನಿಮ್ಮದೇ ಭಾಷೆ ಟ್ವಿಟ್ಟರ್ ವಾತಾವರಣ ರೂಪಿಸಿಕೊಳ್ಳುವ ಸೌಲಭ್ಯವೂ ಸಿಗಲಿದೆಯಂತೆ.

#japan, #ILoveMyHair, #111111 ಹೀಗೆ ವಿವಿಧ ರೀತಿ ಟ್ಯಾಗ್ ಬಳಕೆಯಲ್ಲಿದೆ. ದಿನದ ಟಾಪ್ ಸರ್ಚ್ ಟ್ಯಾಗ್ ಗಳು ಆಯಾ ನಗರಕ್ಕೆ ಹೊಂದುವಂತೆ ನೀಡಲಾಗುತ್ತದೆ.

AFAIK = As far as I know

ನಿಮ್ಮದೇ ಆದ ಲಿಸ್ಟಿಂಗ್ ಮಾಡಿಕೊಂಡು, ಸುದ್ದಿ, ಮನರಂಜನೆ, ವೈಯಕ್ತಿಕ ಗುಂಪಿನ ಸಂದೇಶಗಳನ್ನು ಓದಿ, ಪ್ರತಿಕ್ರಿಯಿಸಬಹುದು.. ಈಗ ಟ್ವೀಟ್ ಲಿಂಗೋ ಬಗ್ಗೆ ಮುಂದಿನ ಸ್ಲೈಡ್ ಗಳಲ್ಲಿ ನೋಡುತ್ತಾ ಹೋಗಿ..
* As far as I know ಸಂಕ್ಷಿಪ್ತ ಪದಕ್ಕೆ ಸಂಬಂಧಿಸಿದ ಟ್ವೀಟ್ ಉದಾಹರಣೆ ನೋಡಿ

#FWIW

FWIW = For what it"s worth ಸಂಕ್ಷಿಪ್ತ ಪದಕ್ಕೆ ಸಂಬಂಧಿಸಿದ ಟ್ವೀಟ್ ಉದಾಹರಣೆ ನೋಡಿ..ಇನ್ನಷ್ಟು ನಿರೀಕ್ಷಿಸಿ...

HTH

HTH = Hope that helps ಸಂಕ್ಷಿಪ್ತ ಪದಕ್ಕೆ ಸಂಬಂಧಿಸಿದ ಟ್ವೀಟ್ ಉದಾಹರಣೆ ನೋಡಿ

IMO

IMO = In my opinion ಸಂಕ್ಷಿಪ್ತ ಪದಕ್ಕೆ ಸಂಬಂಧಿಸಿದ ಟ್ವೀಟ್ ಉದಾಹರಣೆ ನೋಡಿ

IDK

IDK = I don"t know ಸಂಕ್ಷಿಪ್ತ ಪದಕ್ಕೆ ಸಂಬಂಧಿಸಿದ ಟ್ವೀಟ್ ಉದಾಹರಣೆ

RTHX/TQRT

RTHX/TQRT = Thanks for the retweet ಸಂಕ್ಷಿಪ್ತ ಪದಕ್ಕೆ ಸಂಬಂಧಿಸಿದ ಟ್ವೀಟ್ ಉದಾಹರಣೆ

ROFL

ROFL = Rolling on the floor laughing ಸಂಕ್ಷಿಪ್ತ ಪದಕ್ಕೆ ಸಂಬಂಧಿಸಿದ ಟ್ವೀಟ್ ಉದಾಹರಣೆ ನೋಡಿ

XOXO

XOXO hugs and kisses ಸಂಕ್ಷಿಪ್ತ ಪದಕ್ಕೆ ಸಂಬಂಧಿಸಿದ ಟ್ವೀಟ್ ಉದಾಹರಣೆ ನೋಡಿ

NSFW

NSFW= Not suitable/safe for work (NSFW), not work-suitable/safe (NWS), or not school-suitable (NSS) ಸಂಕ್ಷಿಪ್ತ ಪದಕ್ಕೆ ಸಂಬಂಧಿಸಿದ ಟ್ವೀಟ್ ಉದಾಹರಣೆ ನೋಡಿ

WYWH

WYWH= Wish You Were Here ಟ್ವೀಟ್ ಸಂಕ್ಷಿಪ್ತ ಪದಕ್ಕೆ ಸಂಬಂಧಿಸಿದ ಟ್ವೀಟ್ ಉದಾಹರಣೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+