ಮತ್ತೊಂದು ವಿವಾದ ಎಬ್ಬಿಸಿದ ಇಶ್ರತ್ ಪ್ರಕರಣ!

Ishrat Jahan
ನವದೆಹಲಿ, ಜು.6 : ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಕುರಿತಾದ ವಿವಾದಗಳು ಬಗೆಹರಿಯುವಂತೆ ಕಾಣುತ್ತಿಲ್ಲ. ಎನ್ ಕೌಂಟರ್ ನಲ್ಲಿ ಗುಪ್ತಚರ ಇಲಾಖೆ ಮುಖ್ಯಸ್ಥ ರಾಜೇಂದ್ರ ಕುಮಾರ್ ಪಾತ್ರವಿರುವ ಬಗ್ಗೆ ತನ್ನ ಬಳಿ ಸಾಕ್ಷಿಗಳಿವೆ ಎಂದು ಸಿಬಿಐ ಹೇಳಿದೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಿಬಿಐ ನಿರ್ದೇಶಕ ರಜನೀತ್ ಸಿನ್ಹಾ, ಗುಪ್ತಚರ ಇಲಾಖೆ ಅಧಿಕಾರಿ ರಾಜೇಂದ್ರ ಕುಮಾರ್ ಅವರ ಹೆಸರು ಮೊದಲ ಚಾರ್ಚ್ ಶೀಟ್ ನಲ್ಲಿ ಸೇರಿಸಲಾಗಿಲ್ಲ.

ಆದರೆ, ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷಿಗಳಿವೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ರಾಜೇಂದ್ರ ಕುಮಾರ್ ಅವರ ವಿರುದ್ಧದ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುವಾಗಿ ಹೇಳಿದರು.

ಗುಪ್ತಚರ ಇಲಾಖೆ ಇಶ್ರತ್ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುತ್ತಿದೆ. ಅವರು ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಅವರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ ಎಂದರು ತಿಳಿಸಿದ್ದಾರೆ.( ಇಶ್ರತ್ ಪ್ರಕರಣ ಪೂರ್ಣ ವರದಿ)

ದೇಶದ ಯಾವುದೇ ವ್ಯಕ್ತಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ, ಅವರನ್ನು ಯಾವುದಾರೂ ಸಂಸ್ಥೆ ಕೊಲ್ಲಬೇಕೆಂಬ ಕಾನೂನು ಇಲ್ಲ. ಗುಪ್ತಚರ ಇಲಾಖೆ ಭಯೋತ್ಪಾನೆ ಹೆಸರು ಹೇಳಿಕೊಂಡು ಪ್ರಕಣದಿಂದ ಮುಕ್ತವಾಗಲು ಬಯಸುತ್ತಿದೆ ಎಂದು ಸಿನ್ಹಾ ಆರೋಪಿಸಿದರು.

ಇಶ್ರತ್ ಮಹಿಳಾ ಬಾಂಬರ್ : 2004 ಜೂನ್ 15ರಂದು ಎನ್ ಕೌಂಟರ್ ನಲ್ಲಿ ಸಾವಿಗೀಡಾದ ಇಶ್ರತ್ ಜಹಾನ್ ಮಹಿಳಾ ಆತ್ಮಾಹುತಿ ಬಾಂಬರ್ ಎಂದು 2009ರಲ್ಲಿ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ ಬಿಐ) ಹೇಳಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಗುಪ್ತಚರ ಇಲಾಖೆ ಗೃಹ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದ್ದು, ಲಷ್ಕರೆ ಎ ತೊಯ್ಬಾ ಸದಸ್ಯ ಡೇವಿಡ್ ಹೇಡ್ಲಿ ವಿಚಾರಣೆ ವೇಳೆ, ಇಶ್ರತ್ ಮುಜಾಮಿಲ್ಲ್ ಎಂಬ ಉಗ್ರ ಸಂಘಟನೆಯಲ್ಲಿ ಇಶ್ರತ್ ಸದಸ್ಯೆಯಾಗಿದ್ದಳು ಎಂಬ ಮಾಹಿತಿಯನ್ನು ಎಫ್ ಬಿಐ ನೀಡಿತ್ತು ಎಂದು ಪತ್ರದಲ್ಲಿ ತಿಳಿಸಿದೆ.ಈ ಬಗ್ಗೆ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಲಭ್ಯವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+