ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

In Pics: ಉತ್ತರಾಖಂಡ ದುರಂತ ಲೆಕ್ಕಿಸದ ಅಮರನಾಥ ಯಾತ್ರೆ

By Mahesh
|
Google Oneindia Kannada News

ಶ್ರೀನಗರ, ಜು.4: ಉತ್ತರಾಖಂಡ ರಾಜ್ಯದ ಕೇದಾರಾನಾಥ, ಬದರಿನಾಥ, ಉತ್ತರಕಾಶಿ, ಗಂಗೋತ್ರಿ ಸೇರಿದಂತೆ ಪ್ರಮುಖ ಯಾತ್ರಾಸ್ಥಳಗಳಲ್ಲಿನ ಸೂತಕ ನಡುವೆ ಅಮರನಾಥ ಯಾತ್ರೆ ನಿರ್ವಿಘ್ನವಾಗಿ ಸಾಗಿದೆ.

ದಕ್ಷಿಣ ಕಾಶ್ಮೀರದ ಹಿಮಾಲಯ ತಪ್ಪಲಿನಲ್ಲಿ ಸುಮಾರು 75,000ಕ್ಕೂ ಅಧಿಕ ಯಾತ್ರಿಗಳು ಹಿಮಲಿಂಗರೂಪಿ ಅಮರನಾಥನ ದರ್ಶನಕ್ಕೆ ತೆರಳಿದ್ದಾರೆ. 2,176 ಜನರಿದ್ದ 8ನೇ ತಂಡ ಗುರುವಾರ ಅಮರನಾಥನ ಕಡೆಗೆ ಟ್ರೆಕ್ ಆರಂಭಿಸಿದೆ.

ಯೋಧರ ರಕ್ಷಣೆ ಜೊತೆಗೆ ಸುಮಾರು 81 ವಾಹನಗಳಲ್ಲಿ 2 ಸಾವಿರಕ್ಕೂ ಅಧಿಕ ಯಾತ್ರಿಗಳು ಭಾಗ್ವತಿ ನಗರ ಬೇಸ್ ಕ್ಯಾಂಪ್ ಬಿಟ್ಟು ಅಮರನಾಥ ಕಡೆಗೆ ಪಾದ ಬೆಳೆಸಿದ್ದಾರೆ. ಜೂ.28ರಿಂದ ಅಮರನಾಥ ಯಾತ್ರೆ ಮತ್ತೆ ಆರಂಭವಾಗಿದೆ. 55 ದಿನಗಳ ಪವಿತ್ರ ಯಾತ್ರೆಗೆ ನೋಂದಾವಣೆ ಮುಖ್ಯ. ವೈದ್ಯಕೀಯ ಪರೀಕ್ಷೆ ನಂತರವೇ ಯಾತ್ರಿಗಳಿಗೆ ಚಾರಣ ಮಾಡಲು ಅನುಮತಿ ನೀಡಲಾಗುತ್ತದೆ.

ಜಮ್ಮು: ಈ ನಡುವೆ ವೈಷ್ಣೋದೇವಿ ಯಾತ್ರೆಗೆ ತೆರಳಿದ್ದ ಇಬ್ಬರು ವಯಸ್ಕರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬೆಂಗಳೂರಿನ 60 ವರ್ಷ ವಯಸ್ಸಿನ ಪದ್ಮಾವತಿ ಅವರು ಹೃದಯಾಘಾತಕ್ಕೆ ಒಳಗಾಗಿ ಜಿಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, 55 ವರ್ಷದ ವಿನೋದ್ ಕುಮಾರ್ ಎಂಬ ಜಮ್ಮು ನಿವಾಸಿ ಕೂಡಾ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಚಿತ್ರಗಳಲ್ಲಿ ಅಮರನಾಥ ಯಾತ್ರೆ ನೋಡಿ...

ಯಾತ್ರೆಗೆ ನಿಯಮ, ನೀತಿ

ಯಾತ್ರೆಗೆ ನಿಯಮ, ನೀತಿ

ಶ್ರೀ ಅಮರನಾಥ್ ದೇಗುಲ ಬೋರ್ಡ್(SASB) ವತಿಯಿಂದ ಪ್ರತಿದಿನ ನೋಂದಣಿ ಮಾಡಿಕೊಂಡು 14 ಕಿ.ಮೀ ಸೋನಾಮಾರ್ಗ್ ತನಕ ನಡೆಯುವ ಸಾಮರ್ಥ್ಯವುಳ್ಳ, ಕುದುರೆ ಸವಾರಿ ಮಾಡಬಲ್ಲ ಯಾತ್ರಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

75 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 13 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳಿಗೆ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗುತ್ತಿಲ್ಲ, ಸುಮಾರು 12 ಸಾವಿರಕ್ಕೂ ಅಧಿಕ ನೋಂದಾಣಿಯಾಗದ ಯಾತ್ರಿಗಳನ್ನು ಈವರೆಗೂ ಪತ್ತೆ ಹಚ್ಚಲಾಗಿದೆ ಎಂದು ಎಸ್ಎ ಎಸ್ ಬಿ ಹೇಳಿದೆ.

ಸಾಲು ಸಾಲಾಗಿ ಸವಾರಿ

ಸಾಲು ಸಾಲಾಗಿ ಸವಾರಿ

ಯಾತ್ರಿಗಳು ನಡೆದು ಇಲ್ಲವೇ ಕುದುರೆ ಸವಾರಿ ಮೂಲಕ ಸಾಗಬೇಕು. ಲಗ್ಗೇಜ್ ಹೊರಲು ಪೊರ್ಟರ್ ಗಳಿರುತ್ತಾರೆ. ಇದಕ್ಕೆ ಪ್ರತ್ಯೇಕ ವೆಚ್ಚ ಭರಿಸಬೇಕಾಗುತ್ತದೆ.

ವೈದ್ಯಕೀಯ ಪರೀಕ್ಷೆ

ವೈದ್ಯಕೀಯ ಪರೀಕ್ಷೆ

ಈ ಯಾತ್ರೆ ಪಹಲ್ಗಮ್ ನಿಂದ ಶುರುವಾಗುತ್ತದೆ. ಅಮರನಾಥ ಗುಹೆಗೆ ಹತ್ತುವ ಹಾದಿಯಲ್ಲಿ ಮನಸೂರೆಗೊಳ್ಳುವ ಸೌಂದರ್ಯ ಮನಸ್ಸಿಗೆ ಉಲ್ಲಾಸ ತುಂಬುತ್ತದೆ.

ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಹೊರತಾಗಿ ವರ್ಷವಿಡೀ ಇಲ್ಲಿ ಹಿಮ ಉದುರುವ ವಾತಾವರಣ. ಈ ಕಾರಣಕ್ಕೆ ಕೇವಲ ಈ ಸಮಯದಲ್ಲಿ ಮಾತ್ರ ದೇವಸ್ಥಾನದ ಬಾಗಿಲು ತೆರೆದಿರುತ್ತದೆ.* ಕಾಶ್ಮೀರದ ಬೇಸ್ ಕ್ಯಾಂಪಿನಲ್ಲಿ ಸಾಧು ಸಂತರಿಗೂ ವೈದ್ಯಕೀಯ ಪರೀಕ್ಷೆ
ಹಿಮರೂಪಿ ಅಮರನಾಥ

ಹಿಮರೂಪಿ ಅಮರನಾಥ

ಚಿತ್ರದಲ್ಲಿ ಕಾಣುವ ಹಿಮರೂಪಿ ಅಮರನಾಥ ಪ್ರತಿ ದಿನ ಇದೇ ಗಾತ್ರದಲ್ಲಿ ಕಾಣುವ ಭರವಸೆ ಇಲ್ಲ. ಹವಾಮಾನ ವೈಪರೀತ್ಯದ ಜೊತೆಗೆ ಹಿಮ ಕೂಡಾ ಋತುವಿನ ಜೊತೆಗೆ ಬದಲಾಗುತ್ತದೆ.

ತಾತ್ಕಾಲಿಕ ಡೇರೆಗಳಲ್ಲಿ ವಾಸ

ತಾತ್ಕಾಲಿಕ ಡೇರೆಗಳಲ್ಲಿ ವಾಸ

55 ದಿನಗಳ ಯಾತ್ರೆ ಸಂದರ್ಭದಲ್ಲಿ ಅಲ್ಲಲ್ಲಿ ತಾತ್ಕಾಲಿಕ ಡೇರೆಗಳನ್ನು ನಿರ್ಮಿಸಲಾಗಿರುತ್ತದೆ. ಪುಟ್ಟ ಹೊಟೆಲ್ ಜೊತೆಗೆ ಅಗತ್ಯ ವಸ್ತುಗಳನ್ನು ಇಲ್ಲಿಂದಲೇ ಪಡೆಯಬೇಕಾಗುತ್ತದೆ.

ತಾತ್ಕಾಲಿಕ ಡೇರೆಗಳು

ತಾತ್ಕಾಲಿಕ ಡೇರೆಗಳು

55 ದಿನಗಳ ಯಾತ್ರೆ ಸಂದರ್ಭದಲ್ಲಿ ಅಲ್ಲಲ್ಲಿ ತಾತ್ಕಾಲಿಕ ಡೇರೆಗಳನ್ನು ನಿರ್ಮಿಸಲಾಗಿರುತ್ತದೆ. ಪುಟ್ಟ ಹೊಟೆಲ್ ಜೊತೆಗೆ ಅಗತ್ಯ ವಸ್ತುಗಳನ್ನು ಇಲ್ಲಿಂದಲೇ ಪಡೆಯಬೇಕಾಗುತ್ತದೆ. ಎಲ್ಲೆಡೆ ಯೋಧರ ಕಾವಲು ಇರುತ್ತದೆ. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ...

ಯೋಧರ ರಕ್ಷಣೆ

ಯೋಧರ ರಕ್ಷಣೆ

ಯೋಧರ ರಕ್ಷಣೆಯಿಂದ ಅಮರನಾಥ ಯಾತ್ರೆ ನಿರ್ವಿಘ್ನವಾಗಿ ಸಾಗಿದೆ.

ಟ್ರಕ್ ಗಳಲ್ಲಿ ಯಾತ್ರಿಗಳು

ಟ್ರಕ್ ಗಳಲ್ಲಿ ಯಾತ್ರಿಗಳು

ಅಮರನಾಥ ಯಾತ್ರೆ ನಿರ್ವಿಘ್ನವಾಗಿ ಸಾಗಿದೆ. ಟ್ರಕ್ ಗಳಲ್ಲಿ ಯಾತ್ರಿಗಳು ಬ್ಯಾಸ್ ಕ್ಯಾಂಪ್ ನಿಂದ ಮುಂದೆ ಸಾಗುತ್ತಿದ್ದಾರೆ. ಯೋಧರೊಬ್ಬರು ರಕ್ಷಣೆಗಾಗಿ ನಿಂತಿದ್ದಾರೆ.

ಭಕ್ತರಲ್ಲಿ ಹರ್ಷ

ಭಕ್ತರಲ್ಲಿ ಹರ್ಷ

ಪ್ರತಿಕೂಲ ಹವಾಮಾನ ಹಾಗೂ ಸನ್ನಿವೇಶದಿಂದ ಅಮರನಾಥ ಯಾತ್ರೆ ಸ್ಥಗಿತಗೊಂಡಿದ್ದರಿಂದ ಬೇಸರಗೊಂಡಿದ್ದ ಭಕ್ತರಲ್ಲಿ ಈಗ ಹರ್ಷ ತುಂಬಿದೆ.

ಕಾಶ್ಮೀರದಲ್ಲಿ ಭಜನೆ

ಕಾಶ್ಮೀರದಲ್ಲಿ ಭಜನೆ

ಅಮರನಾಥ ಯಾತ್ರೆ ನಿರ್ವಿಘ್ನವಾಗಿ ಸಾಗಿದೆ. ವಿವಿಧ ಪಂಥದ ಜನರು ದಕ್ಷಿಣ ಕಾಶ್ಮೀರದಲ್ಲಿ ಭಜನೆ ಹಮ್ಮಿಕೊಂಡಿದ್ದಾರೆ

ಸಿಕ್ಕಿದೆ ರಹದಾರಿ

ಸಿಕ್ಕಿದೆ ರಹದಾರಿ

ಅಧಿಕಾರಿಗಳಿಂದ ಅಮರನಾಥ ಯಾತ್ರೆಗೆ ಅನುಮತಿ ಪಡೆದ ಇಬ್ಬರು ಸಾಧುಗಳು

ಭಕ್ತರ ಮೊದಲ ತಂಡ

ಭಕ್ತರ ಮೊದಲ ತಂಡ

ಅಮರನಾಥ ಯಾತ್ರೆ ಮತ್ತೆ ಆರಂಭ. ಯಾತ್ರೆ ನಿರ್ವಿಘ್ನವಾಗಿ ಸಾಗಿದೆ. ಯಾತ್ರೆಗೆ ಹೊರಟು ನಿಂತ ಭಕ್ತರ ಮೊದಲ ತಂಡ

ಕಠಿಣ ಹಾದಿ

ಕಠಿಣ ಹಾದಿ

ಏರು ತಗ್ಗಿನ ಕಠಿಣ ಹಾದಿ ಜೊತೆಗೆ ಉಗ್ರರ ಭೀತಿ ಕೂಡಾ ಯಾತ್ರಿಗಳಲ್ಲಿ ಇದೆ. ಆದರೆ, ಗಡಿ ಭದ್ರತಾ ಪಡೆ ರಕ್ಷಣೆ, ಶಿವ ಭಜನೆ ಎಲ್ಲವನ್ನು ಮರೆಸಿದೆ.

ಕಠಿಣ ಹಾದಿ

ಕಠಿಣ ಹಾದಿ

ಉತ್ತರಾಖಂಡ ರಾಜ್ಯದ ಕೇದಾರಾನಾಥ, ಬದರಿನಾಥ, ಉತ್ತರಕಾಶಿ, ಗಂಗೋತ್ರಿ ಸೇರಿದಂತೆ ಪ್ರಮುಖ ಯಾತ್ರಾಸ್ಥಳಗಳಲ್ಲಿನ ಸೂತಕ ನಡುವೆ ಅಮರನಾಥ ಯಾತ್ರೆ ನಿರ್ವಿಘ್ನವಾಗಿ ಸಾಗಿದೆ.

ಸಾಧು ಸಂತರ ತಂಡ

ಸಾಧು ಸಂತರ ತಂಡ

ಜಮ್ಮು ಕಾಶ್ಮೀರದಲ್ಲಿ ಬೀಡು ಬಿಟ್ಟಿರುವ ಸಾಧು ಸಂತರು ಅಮರನಾಥ ಯಾತ್ರೆಗೆ ಅನುಮತಿ ಕೋರಿ ಕಾದಿದ್ದಾರೆ.

 ಸರತಿ ಸಾಲಿನಲ್ಲಿ ನಿಂತ ಭಕ್ತರು

ಸರತಿ ಸಾಲಿನಲ್ಲಿ ನಿಂತ ಭಕ್ತರು

ಭಾಗ್ವತಿ ಬೇಸ್ ಕ್ಯಾಂಪ್ ಬಳಿ ಕಚೇರಿಯಲ್ಲಿ ಅನುಮತಿ ಪತ್ರ ಪಡೆಯಲು ಸರತಿ ಸಾಲಿನಲ್ಲಿ ನಿಂತ ಭಕ್ತರು

ಸುಂದರ ಕಣಿವೆ

ಸುಂದರ ಕಣಿವೆ

ಜಮ್ಮು-ಪಹಲ್ ಗಾಮ್- ಚಂದನ್ ವಾರಿ-ಶೇಷ್ ನಾಗ್- ಪಂಚತರ್ತ್ನಿ- ಅಮರನಾಥ್
ಹಾಗೂ ಅದೇ ಕ್ರಮದಲ್ಲಿ ಹಿಂತಿರುಗಿ ಶ್ರೀನಗರ ತಲುಪ ಬಹುದು. ಮಾರ್ಗಮಧ್ಯೆ ಸುಂದರ ದೃಶ್ಯ, ಕಣಿವೆ, ಸರೋವರಗಳು ಭಕ್ತರ ಕಣ್ಮನ ಮುದಗೊಳಿಸುತ್ತದೆ.

ಜಮ್ಮುವಿನಲ್ಲಿ ಭಜನೆ

ಜಮ್ಮುವಿನಲ್ಲಿ ಭಜನೆ

ಅಮರನಾಥ ಯಾತ್ರೆಗೆ ಹೊರಟ ಸಾಧು ಸಂತರ ತಂಡ ನಿರಂತರ ಭಜನೆಯಲ್ಲಿ ತೊಡಗಿದೆ. ಚಿತ್ರಗಳು: ಪಿಟಿಐ

English summary
More than 75,000 pilgrims have paid obeisance at the Amarnath cave shrine in the Himalayas in south Kashmir since the annual pilgrimage began on June 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X